
ನವದೆಹಲಿ(ಸೆ.16): ಭಾನುವಾರ, 26 ಸೆಪ್ಟೆಂಬರ್ 2021 ರಂದು ಪ್ರಸಾರವಾಗಲಿರುವ 'ಮನ್ ಕಿ ಬಾತ್' 81ನೇ ಸಂಚಿಕೆಗೆ ಸಲಹೆ ಸೂಚನೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ. 'ಮನ್ ಕಿ ಬಾತ್'ಗೆ ನೀವು ನೀಡಲು ಬಯಸುವ ಈ ಸಲಹೆಗಳನ್ನು ನಮೋ ಆಪ್ ಮತ್ತು Mygov ಆಪ್ ನಲ್ಲಿ ನೋಂದಾಯಿಸಬಹುದು. ಅಲ್ಲದೇ, 1800-11-7800 ಸಂಖ್ಯೆಗೆ ಕರೆ ಮಾಡಿಯೂ ಸಂದೇಶ ಕೊಡಬಹುದು.
ಟ್ವೀಟ್ ನಲ್ಲಿ ಪಿಎಂ ಮೋದಿ ಹೇಳಿದ್ದಿಷ್ಟು
ಸೆ. 26 ರಂದು ಪ್ರಸಾರವಾಗುವ ಈ ತಿಂಗಳ #MannKiBaat ಗಾಗಿ ಹಲವು ಆಸಕ್ತಿದಾಯಕ ಸಲಹೆಗಳು ಬರುತ್ತಿವೆ. ನಮೋ ಆಪ್ ಮತ್ತು Mygov ಆಪ್‌ನಲ್ಲಿ ನಿಮ್ಮ ಐಡಿಯಾಗಳನ್ನು ಹಂಚಿಕೊಳ್ಳಿ ಅಥವಾ 1800-11-7800 ನಲ್ಲಿ ನಿಮ್ಮ ಸಂದೇಶ ತಲುಪಿಸಿ ಎಂದಿದ್ದಾರೆ.
ಏನಿದು ಮನ್ ಕೀ ಬಾತ್?
ಮನ್ ಕಿ ಬಾತ್ ಆಲ್ ಇಂಡಿಯಾ ರೇಡಿಯೋ ಮೂಲಕ ಪ್ರಸಾರವಾಗುವ ಕಾರ್ಯಕ್ರಮವಾಗಿದೆ. ಇದರಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡುತ್ತಾರೆ. 3 ಅಕ್ಟೋಬರ್ 2014 ರಂದು ಈ ಸರಣಿ ರೇಡಿಯೋ ಕಾರ್ಯಕ್ರಮ ಮೊದಲ ಬಾರಿ ಪ್ರಸಾರ ಮಾಡಲಾಯಿತು. 2015 ರ ಜನವರಿಯಲ್ಲಿ, ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಮೋದಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ