ಪಿಎಂ ಮೋದಿ ಮಾಡಿದ್ದ ಈ ಒಂದು ಟ್ವೀಟ್ 2019ರ' ಗೋಲ್ಡನ್ ಟ್ವೀಟ್'!

Published : Dec 10, 2019, 03:15 PM IST
ಪಿಎಂ ಮೋದಿ ಮಾಡಿದ್ದ ಈ ಒಂದು ಟ್ವೀಟ್ 2019ರ' ಗೋಲ್ಡನ್ ಟ್ವೀಟ್'!

ಸಾರಾಂಶ

2019ನೇ ಇಸವಿಯ ಗೋಲ್ಡನ್ ಟ್ವೀಟ್ ಆಯ್ತು ಪ್ರಧಾನಿ ಮೋದಿ ಮಾಡಿದ್ದ ಆ ಒಂದು ಟ್ವೀಟ್| ಅಷ್ಟಕ್ಕೂ ಆ ಟ್ವೀಟ್‌ನಲ್ಲೇನಿದೆ।?| ಕ್ರೀಡಾ ಕ್ಷೇತ್ರದಲ್ಲಿ ಕೊಹ್ಲಿ, ಧೋನಿ ಕಮಾಲ್

ನವದೆಹಲಿ[ಡಿ.10]: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಸಾಧನೆ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ್ದ ಟ್ವೀಟ್, ಅತಿ ಹೆಚ್ಚು ಲೈಕ್ಟ್ ಹಾಗೂ ರೀಟ್ವೀಟ್ ಆಗಿದೆ. ಈ ಮೂಲಕ ಮೋದಿಯ ಆ ಒಂದು ಟ್ವೀಟ್ ಈ ವರ್ಷದ 'ಗೋಲ್ಟನ್ ಟ್ವೀಟ್'  ಎಂಬ ಖ್ಯಾತಿಗೆ ಪಾತ್ರವಾಗಿದೆ.

ಪ್ರಧಾನಿ ಮೋದಿ ಲೋಕಸಭೆಯಲ್ಲಿ ಗಳಿಸಿದ ಗೆಲುವಿನ ಬಳಿಕ ಮಾಡಿದ್ದ ಟ್ವೀಟ್‌ನಲ್ಲಿ 'ಸಬ್‌ಕಾ ಸಾಥ್+ ಸಬ್‌ಕಾ ವಿಕಾಸ್+ ಸಬ್‌ಕಾ ವಿಶ್ವಾಸ್= ವಿಜಯೀ ಭಾರತ್' ಎಂದು ಟ್ವೀಟ್ ಮಾಡಿದ್ದರು. 

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಮಂಗಳವಾರದಂದು ಟ್ವೀಟ್ ಮೂಲಕ ಈ ವಿಚಾರ ಬಹಿರಂಗಪಡಿಸಿದೆ. ಕ್ರೀಡಾ ಕ್ಷೇತ್ರದಲ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬದಂದು, ದಾಖಲೆ ಸರದಾರ ವಿರಾಟ್ ಕೊಹ್ಲಿ ಮಾಡಿದ್ದ ಟ್ವೀಟ್ ಅತಿ ಹೆಚ್ಚು ರೀಟ್ವೀಟ್ ಆದ ಖ್ಯಾತಿ ಗಳಿಸಿದೆ. ಧೋನಿಯ ಹುಟ್ಟುಹಬ್ಬದಂದು, ಕೊಹ್ಲಿ ತಮ್ಮಿಬ್ಬರ ಫೋಟೋ ಒಂದನ್ನು ಶೇರ್ ಮಾಡಿ ವಿಶ್ ಮಾಡಿದ್ದರು. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಹ್ಯಾಷ್ ಟ್ಯಾಗ್ ವಿಚಾರದಲ್ಲಿ #LoksabhaElections2019 ಬಳಸಿ ಅತಿ ಹೆಚ್ಚು ಟ್ವೀಟ್ ಮಾಡಲಾಗಿದೆ. ಇದಾದ ಬಳಿಕ #Chandrayaan2, #CWC19, #Pulwama ಹಾಗೂ #Article370 ಅತಿ ಹೆಚ್ಚು ಟ್ರೆಂಡ್ ಹುಟ್ಟಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್