
ಪುಣೆ(ನ.27): ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಜಾಗತಿಕ ಔಷಧ ಕಂಪನಿ ಆಸ್ಟ್ರಾಜೆನೆಕಾ ಕಂಪನಿಗಳ ಕೊರೋನಾ ಲಸಿಕೆ ಶೇ.90ರಷ್ಟುಪರಿಣಾಮಕಾರಿಯಾಗಿರುವುದು ಖಚಿತಪಟ್ಟಬೆನ್ನಲ್ಲೇ, ಆ ಲಸಿಕೆಯನ್ನು ಉತ್ಪಾದಿಸುತ್ತಿರುವ ಪುಣೆಯ ಸೀರಂ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೇಟಿ ನೀಡಲು ಮುಂದಾಗಿದ್ದಾರೆ. ಇದೇ ವೇಳೆ, ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಕುರಿತ ಪ್ರಗತಿ ವೀಕ್ಷಿಸಲು ಹೈದರಾಬಾದ್‌ಗೂ ತೆರಳಲಿದ್ದಾರೆ.
ಆಕ್ಸ್‌ಫರ್ಡ್, ಆಸ್ಟ್ರಾಜೆನೆಕಾ ಲಸಿಕೆ ಪರೀಕ್ಷೆ ಎಡವಟ್ಟು!
ಈ ಬಗ್ಗೆ ಪ್ರಧಾನಿ ಮೋದಿ ಖುದ್ದು ಟ್ವೀಟ್ ಮಾಡಿ ಮಾಹಿತಿ ಖಚಷಿತಪಡಿಸಿದ್ದಾರೆ.
ಪುಣೆಯ ಭೇಟಿಯ ಬಳಿಕ ಹೈದರಾಬಾದ್‌ಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಮೋದಿ ಅವರು ಅಪರಾಹ್ನ 3.40ಕ್ಕೆ ಹೈದರಾಬಾದ್‌ಗೆ ಬಂದಿಳಿಯಲಿದ್ದು, ಸಂಜೆ 4ರಿಂದ 5ರವರೆಗೆ ಲಸಿಕೆ ಉತ್ಪಾದನಾ ಕೇಂದ್ರದಲ್ಲಿರಲಿದ್ದಾರೆ. ಸಂಜೆ 5.40ಕ್ಕೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ, ಕನ್ನಡಿಗ ವಿ.ಸಿ. ಸಜ್ಜನರ್ ಅವರು ತಿಳಿಸಿದ್ದಾರೆ.
ದೇಶದ ಎಲ್ಲರಿಗೂ ಉಚಿತ ಲಸಿಕೆ?: ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಸಂಭವ!
ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಮೋದಿ ಅವರು ಕೊರೋನಾ ಲಸಿಕೆಯ ಸ್ಥಿತಿಗತಿ, ಅದರ ಲೋಕಾರ್ಪಣೆ, ಉತ್ಪಾದನೆ ಹಾಗೂ ವಿತರಣಾ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆಯಲಿದ್ದಾರೆ
ಈ ನಡುವೆ, ಪುಣೆಯ ಸೀರಂ ಸಂಸ್ಥೆಗೆ 100 ದೇಶಗಳ ರಾಯಭಾರಿಗಳ ಕೂಡ ಭೇಟಿ ನೀಡಲು ನಿರ್ಧರಿಸಿದ್ದು, ಡಿ.4ರಂದು ಅವರೆಲ್ಲಾ ಆಗಮಿಸಲಿದ್ದಾರೆ ಎಂದು ರಾವ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ