ಅಯೋಧ್ಯೆಯಲ್ಲಿ 3 ಗಂಟೆ ಇರಲಿದ್ದಾರೆ ಮೋದಿ, ವಿಶೇಷ ಅತಿಥಿ ಯಾರು?

By Suvarna NewsFirst Published Aug 4, 2020, 10:17 PM IST
Highlights

ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ/ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಿಲಾನ್ಯಾಸ/ ಸುಮಾರು ಮೂರು ಗಂಟೆ ಕಾಲ ಮೋದಿ ಅಯೋಧ್ಯೆಯಲ್ಲಿ ಇರಲಿದ್ದಾರೆ

ಅಯೋಧ್ಯೆ(ಆ. 04)  ಅಯೋಧ್ಯೆಯಲ್ಲಿ  ರಾಮ ಮಂದಿರ  ನಿರ್ಮಾಣ ಶಿಲಾನ್ಯಾಸಕ್ಕೆ ಕ್ಷಣಗಣನೆ ಆರಂಭವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸುಮಾರು ಮೂರು ಗಂಟೆ ಕಾಲವನ್ನು ಅಯೋಧ್ಯೆಯಲ್ಲಿ ಕಳೆಯಲಿದ್ದಾರೆ. ಆರ್ ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮೊದಲಿಗೆ ರಾಮ್ ಲಲ್ಲಾ ಬಳಿ ಪ್ರಧಾನಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. 10-12 ನಿಮಿಷ ಅಲ್ಲಿದ್ದು ನಂತರ ಮುಂದೆ ತರಳಲಿದ್ದಾರೆ. ದೇವಾಲಯದ ಮುಖ್ಯ ಅರ್ಚಕ ಮಹಾಂತ್ ಸತ್ಯೇಂದ್ರ ದಾಸ್ ಕ್ವಾರಂಟೈನ್ ಮನಲ್ಲಿ ಇರುವುದರಿಂದ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.

ಅಯೋಧ್ಯೆಯಲ್ಲೆ ಯಾಕೆ ರಾಮಮಂದಿರ; ಇಲ್ಲಿದೆ ವಿವರ

ನಂತರ  ರಾಮ್‌ಲ್ಲಲಾ  ಕ್ಯಾಂಪಸ್‌ನಲ್ಲಿ ಪಾರಿಜತ ನೆಟ್ಟು ಅಲ್ಲಿಂದ ಭೂಮಿಪೂಜೆ ಸ್ಥಳದ ಕಡೆ ಹೆಜ್ಜೆ ಹಾಕಲಿದ್ದಾರೆ. ಮಧ್ಯಾಹ್ನ 12: 30  ರಿಂದ 12:40ರ ನಡುವಿನ ಅಭಿಜಿತ್ ಸಮಯದಲ್ಲಿ ಭೂಮಿಪೂಜಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ.  ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಇದಾದ ಮೇಲೆ ಸುಮಾರು ಒಂದುವರೆ ಗಂಟೆ ಕಾಲದ ಕಾರ್ಯಕ್ರಮದಲ್ಲಿ ಗಣ್ಯರು ಮಾತನಾಡಲಿದ್ದಾರೆ.   ನರೇಂದ್ರ ಮೋದಿ. ಯೋಗಿ ಆದಿತ್ಯನಾಥ್, ಮೋಹನ್ ಭಾಗವತ್, ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಮಹಾಂತ್ ಗೋಪಾಲ್ ದಾಸ್, ಉತ್ತರ ಪ್ರದೇಶ ರಾಜ್ಯಪಾಲ ಅನಾದಿಬೆನ್ ಪಟೇಲ್, ವಿಶ್ವಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರ ಸೋದರಳಿಯ ಸಲಿಲ್ ಸಿಂಘಾಲ್ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ರಾಮಮಂದಿರ ನೆನಪಿನ ಅಂಚೆ ಚೀಟಿ ಬಿಡುಗಡೆ ಮಾಡಲಾಗುತ್ತದೆ.

ಎಲ್ ಕೆ ಅಡ್ವಾಣಿ ಮತ್ತು ಮುರುಳಿ ಮನೋಹರ್ ಜೋಷಿ ಅವರಿಗೂ ಆಹ್ವಾನ ನೀಡಿದ್ದೇವೆ.  ವಯಸ್ಸಿನ ಕಾರಣದಿಂದ ಅವರು ಪ್ರಯಾಣ ಮಾಡುವುದು ಇಂದಿನ ಪರಿಸ್ಥಿತಿಯಲ್ಲಿ ಅಸಾಧ್ಯವಾಗಿದೆ ಎಂದು ಟ್ರಸ್ಟ್ ಜನರಲ್ ಸಕ್ರೆಟರಿ ಚಂಪತ್ ರೈ ತಿಳಿಸಿದ್ದಾರೆ. 

ರಾಮಮಂದಿರ ನಿರ್ಮಾಣದ ಹೆಜ್ಜೆಗುರುತುಗಳು

"

click me!