100 ವರ್ಷದ ಅಜ್ಜಿಯ ಆತ್ಮಸ್ಥೈರ್ಯದ ಮುಂದೆ ಕೊರೋನಾ ಎಸ್ಕೇಪ್

By Suvarna NewsFirst Published Aug 4, 2020, 9:28 PM IST
Highlights

ಕೊರೋನಾ ಗೆದ್ದ ನೂರು ವರ್ಷದ ಅಜ್ಜಿ/ ಮಧ್ಯಪ್ರದೇಶ ಅಜ್ಜಿಯ ಆತ್ಮಸ್ಥೈರ್ಯ/ ಮೊಮ್ಮಗನಿಂದ ಅಜ್ಜಿಗೆ ಅಂಟಿಕೊಂಡ ಕೊರೋನಾ/ ಕ್ಯಾನ್ಸರ್ ಇದ್ದರೂ  ಕೊರೋನಾ ಗೆದ್ದು ಬಂದ ಅಜ್ಜಿ

ಭೋಪಾಲ್(ಆ. 05)   ಕೊರೋನಾ ಗೆಲ್ಲುವುದು ಬಹಳ ಸುಲಭ. ಹೌದು ಈ ಅಜ್ಜಿ ಅದನ್ನು ಮಾಡಿ ತೋರಿಸಿದ್ದಾರೆ.  ನೂರು ವರ್ಷ ಪೈರೈಸಿದ ಅಜ್ಜಿ ಕ್ಯಾನ್ಸರ್ ಕಾಡುತ್ತಿದ್ದರೂ ಕೊರೋನಾ ಗೆದ್ದು ಬಂದಿದ್ದಾರೆ.

ಸ್ಪೆನಿಶ್ ಪ್ಲೂ ಜಗತ್ತನ್ನು ಕಾಡುತ್ತಿದ್ದಾಗ ಜನ್ಮ ತಾಳಿದ್ದ ರುಕ್ಮಣಿ ಚೌಹಾಣ್ ಕೊರೋನಾವನ್ನು ಬೀಟ್ ಮಾಡಿದ್ದಾರೆ.  ಮಧ್ಯಪ್ರದೇಶದ ಖಾರ್‌ಗೋನ್ ನ ರುಕ್ಮಿಣಿ ಕೊರೋನಾಕ್ಕೆ ತುತ್ತಾಗಿದ್ದರು. ಭಾನುವಾರ ನೆಗೆಟಿವ್ ವರದಿ ಬಂದಾಗ ಟೆರೆಸ್ ಮೇಲೆ ನಿಂತು ಶುದ್ಧಗಾಳಿ ಸೇವಿಸಿ ಸಂಭ್ರಮಿಸಿದ್ದಾರೆ.

ಐದು ವರ್ಷಗಳಿಂದ ಅಜ್ಜಿಗೆ ಕ್ಯಾನ್ಸರ್ ಕಾಡುತ್ತಿದೆ.  ಇತ್ತೀಚೆಗಷ್ಟೆ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಗೆದ್ದು ಬಂದಿದ್ದ ಅಜ್ಜಿಗೆ ಕೊರೋನಾವೂ ಅಂಟಿಕೊಂಡಿತ್ತು.  ಇದೊಂದು ಚಿಕ್ಕ ಜ್ವರ ಎಂಬುದು ನನಗೆ ಗೊತ್ತಿತ್ತು ಎಂದು ಅಜ್ಜಿಯೇ ಧೈರ್ಯದ ಮಾತುಗಳನ್ನು ಆಡುತ್ತಾರೆ.  ಆಕೆಯ ಆತ್ಮ ಸ್ಥೈರ್ಯವೇ  ಅಜ್ಜಿಯನ್ನು ಬದುಕಿಸಿದೆ.

ಕೊರೋನಾ ವೈರಸ್ ನಾಶಕ್ಕೆ ರಷ್ಯಾದ ದಾರಿ

ಇಂದೋರ್ ನಿಂದ  60 ಕಿಮೀ ದೂರದ ಬರ್ವಾಹಾದಲ್ಲಿ ಅಜ್ಜಿ ವಾಸ ಮಾಡುತ್ತಿದ್ದರು.  ಅಜ್ಜಿಯ ಮೊಮ್ಮಗ ಅನುಜ್ ಕರ್ಕೋರ್ ಗೆ ಕೊರೋನಾ ತಾಗಿತ್ತು. ಇದು ಅಜ್ಜಿಗೆ ಅಂಟಿಕೊಂಡಿದೆ.

ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ಅಜ್ಜಿಗೆ ಚಿಕಿತ್ಸೆ ನೀಡಲಾಗಿದೆ. ಪ್ರತಿಯೊಂದು ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಚಿಕಿತ್ಸೆ ನೀಡಲಾಗಿದೆ.

ಮೊದಮೊದಲು ಉಸಿರಾಟದ ಸಮಸ್ಯೆ ಜೋರಾಗಿತ್ತು. ಮನೆಯ ಬಳಿಯಲ್ಲೇ ಆಂಬುಲೆನ್ಸ್ ಸಹ ಸಿದ್ಧಮಾಡಿ ಇಟ್ಟುಕೊಳ್ಳಲಾಗಿತ್ತು  ಎಂದು ಮೇಲ್ವಿಚಾರಣೆ ವಹಿಸಿದ್ದವರು ತಿಳಿಸುತ್ತಾರೆ. ಒಟ್ಟಿನಲ್ಲಿ ಅಜ್ಜಿ ಕೊರೋನಾ ಗೆದ್ದು ಬಂದಿದ್ದಾರೆ.

click me!