ಸ್ವಯಂಪೂರ್ಣ ಗೋವಾ ಕಾರ್ಯಕ್ರಮದ ಫಲಾನುಭವಿಗಳ ಜೊತೆ ಅ.23ಕ್ಕೆ ಮೋದಿ ಸಂವಾದ!

By Suvarna News  |  First Published Oct 22, 2021, 6:34 PM IST
  • ಆತ್ಮನಿರ್ಭರ್ ಭಾರತ್ ಮಿಷನ್ ಅಡಿ ಜಾರಿಗೆ ತಂದ ಕಾರ್ಯಕ್ರಮ
  • ಸ್ವಯಂಪೂರ್ಣ ಗೋವಾ ಫಲಾನುಭವಿ, ಪಾಲುದಾರರ ಜೊತೆ ಸಂವಾದ
  • ಅ.23ಕ್ಕೆ ಪ್ರಧಾನಿ ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂವಾದ

ನವದೆಹಲಿ(ಅ.22): ಪ್ರಧಾನಿ ಮೋದಿ ಘೋಷಿಸಿದ ಆತ್ಮನಿರ್ಭರ್ ಭಾರತ ಪರಿಕಲ್ಪನೆ ಮತ್ತೊಂದು ಹಂತ ಪ್ರವೇಶಿಸಿದೆ. ಆತ್ಮನಿರ್ಭರ್ ಭಾರತ್ ಮೂಲಕ ಭಾರತ ಇದೀಗ ಹಲವು ವಸ್ತುಗಳ ಉತ್ಪಾದನೆ ಮಾತ್ರವಲ್ಲ ವಿದೇಶಕ್ಕೆ ರಫ್ತು ಮಾಡುವಷ್ಟರ ಮಟ್ಟಿಗೆ ಬೆಳೆದಿದೆ. ರಕ್ಷಣಾ ವಲಯವೂ ಇದೇ ಗತಿಯಲ್ಲಿ ಮುಂದುವರಿಯುತ್ತಿದೆ. ಮೋದಿಯ ಆತ್ಮನಿರ್ಭರ್ ಭಾರತದಿಂದ ಪ್ರೇರಿತವಾಗಿ ಸ್ವಯಂಪೂರ್ಣ ಗೋವಾ ಕಾರ್ಯಕ್ರಮ ಆರಂಭಗೊಂಡಿತ್ತು. ಇದೀಗ ಸ್ವಯಂಪೂರ್ಣ ಗೋವಾ ಕಾರ್ಯಕ್ರಮದ ಫಲಾನುಭವಿಗಳು ಮತ್ತು ಪಾಲುದಾರರೊಂದಿಗೆ ಅಕ್ಟೋಬರ್ 23 ರಂದು ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದಾರೆ. 

 

Hon'ble PM, Shri. Narendra Modi in the presence of Chief Minister, will virtually interact with Swayampurna Mitras of Goa pic.twitter.com/1Riqu82MVl

— DIP Goa (@dip_goa)

Tap to resize

Latest Videos

ಆತ್ಮನಿರ್ಭರ ಭಾರತದ ಮಂತ್ರ ಹಳ್ಳಿ ಹಳ್ಳಿಗೂ ತಲುಪುತ್ತಿದೆ: ಮೋದಿ ಮನ್‌ ಕೀ ಬಾತ್!

ಅಕ್ಟೋಬರ್ 23ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ.  ಸಂವಾದದ ನಂತರ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಮಂತ್ರಿ ಅವರ ‘ಆತ್ಮನಿರ್ಭರ ಭಾರತ’ ಕರೆಯಿಂದ ಸ್ಫೂರ್ತಿ ಪಡೆದು 2020ರ ಅಕ್ಟೋಬರ್ 1ರಂದು ಸ್ವಯಂಪೂರ್ಣ ಗೋವಾ ಉಪಕ್ರಮ ಆರಂಭಿಸಲಾಯಿತು. 

 

The zeal of the CM in making the state a ‘Swayampurna Goa’ in line with PM Ji’s dream of is heartening.

Goa’s priority for agriculture & its endeavour to reach every people in the state are setting a new precedent of governance. pic.twitter.com/feu0ZybzSf

— Shobha Karandlaje (@ShobhaBJP)

ಪಿಎಂ ಮೋದಿಯ ಆತ್ಮನಿರ್ಭರ ಕನಸಿಗೆ ಸಾಧು ಸಂತರ ಸಾಥ್!

ಈ ಕಾರ್ಯಕ್ರಮದಡಿ ರಾಜ್ಯ ಸರ್ಕಾರಿ ಅಧಿಕಾರಿಯನ್ನು ‘ಸ್ವಯಂಪೂರ್ಣ ಮಿತ್ರ’ರನ್ನಾಗಿ ನೇಮಿಸಲಾಗಿದೆ. ಈ ಅಧಿಕಾರಿಗಳು ಪಂಚಾಯ್ತಿ ಅಥವಾ ಮುನಿಸಿಪಾಲಿಟಿಗೆ ಭೇಟಿ ನೀಡಿ, ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಹಲವು ಸರ್ಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲಿದ್ದಾರೆ.  ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳು ಮತ್ತು ಪ್ರಯೋಜನಗಳು ಲಭ್ಯವಿರುವುದನ್ನು ಖಾತ್ರಿಪಡಿಸುತ್ತಾರೆ.

Vehicle Scrappage Policy: ಮೋದಿ ಅಭಿನಂದಿಸಿದ ಶಿವರಾಜ್ ಸಿಂಗ್ ಚೌಹಾಣ್!

ಆತ್ಮನಿರ್ಭರ್ ಭಾರತದಿಂ ಪ್ರೇರಣಿ ಪಡೆದ ಸ್ವಯಂಪೂರ್ಣ ಗೋವಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸ್ಥಳೀಯ ವಸ್ತುಗಳಿಗೆ ಅಂತಾರಾಷ್ಟ್ರೀಯ ಮಾರುಕ್ಟಟೆ ಒದಗಿಸುವ ಕಾರ್ಯವೂ ನಡೆಯುತ್ತಿದೆ. ಸ್ಥಳೀಯ ಉತ್ಪನ್ನಗಲು ದೇಶದ ವಿವಿದ ಭಾಗ ತಲಪಲು ನೆರವಾಗಿದೆ. ಪ್ರಧಾನಿ ಮೋದಿ ಸ್ವಯಂಪೂರ್ಣ ಗೋವಾ ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. 

ಆತ್ಮನಿರ್ಭರ್ ಭಾರತ: In ಮೊಬೈಲ್ ಸೀರಿಸ್ ಬಿಡುಗಡೆ ಮಾಡುತ್ತಿದೆ ಮೈಕ್ರೋಮ್ಯಾಕ್ಸ್

click me!