ದೇಶದ ಉದ್ದದ ಸಮುದ್ರ ಸೇತುವೆಗಿಂದು ಮೋದಿ ಚಾಲನೆ: ಹೊಸ ಸೇತುವೆ ಮೇಲೆ ಪ್ರಧಾನಿ ಸಂಚಾರ

By Kannadaprabha NewsFirst Published Jan 12, 2024, 11:21 AM IST
Highlights

ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಮಹಾರಾಷ್ಟ್ರ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ ಅವರು, ಈ 6 ಪಥದ ಹೆದ್ದಾರಿಯನ್ನು ಸಹ ಉದ್ಘಾಟಿಸಲಿದ್ದಾರೆ. ಇದು ಮುಂಬೈ ಟ್ರಾನ್ಸ್‌ - ಹರ್ಬರ್‌ ಲಿಂಕ್ ಸೇತುವೆಯಾಗಿದ್ದು, ಇದಕ್ಕೆ ‘ಅಟಲ್‌ ಬಿಹಾರಿ ವಾಜಪೇಯಿ ಸೇವ್ರಿ - ನವ ಶೇವಾ ಅಟಲ್‌ ಸೇತು’ ಎಂದು ಹೆಸರಿಡಲಾಗಿದೆ.

ಥಾಣೆ (ಜನವರಿ 12, 2024): ಮುಂಬೈ ಮತ್ತು ನವಿ ಮುಂಬೈ ನಡುವೆ ನಿರ್ಮಾಣ ಮಾಡಲಾಗಿರುವ ಭಾರತದ ಅತಿ ಉದ್ದದ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ. ಇದು ಒಟ್ಟು 21.8 ಕಿ.ಮೀ. ಉದ್ದದ ಸೇತುವೆಯಾಗಿದ್ದು, 17840 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಮಹಾರಾಷ್ಟ್ರ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಮೋದಿ ಅವರು, ಈ 6 ಪಥದ ಹೆದ್ದಾರಿಯನ್ನು ಸಹ ಉದ್ಘಾಟಿಸಲಿದ್ದಾರೆ.ಇದು ಮುಂಬೈ ಟ್ರಾನ್ಸ್‌ - ಹರ್ಬರ್‌ ಲಿಂಕ್ ಸೇತುವೆಯಾಗಿದ್ದು, ಇದಕ್ಕೆ ‘ಅಟಲ್‌ ಬಿಹಾರಿ ವಾಜಪೇಯಿ ಸೇವ್ರಿ - ನವ ಶೇವಾ ಅಟಲ್‌ ಸೇತು’ ಎಂದು ಹೆಸರಿಡಲಾಗಿದೆ.

Latest Videos

ಇದನ್ನು ಓದಿ: ಮಾಲ್ಡೀವ್ಸ್‌ಗೆ ಭಾರತೀಯರ ಸಂಖ್ಯೆ ಇಳಿಕೆ: ಮುಂದೆ ಇನ್ನಷ್ಟು ಕಡಿತ; ಭಾರತದ ಬಗ್ಗೆ ಸುಳ್ಳು ಹೇಳಿದ್ದ ಮುಯಿಜ್

ಸೇತುವೆಯ ವಿಶೇಷತೆ: ಈ ಸೇತುವೆ ಮುಂಬೈ ಮತ್ತು ಉಪನಗರವಾದ ನವಿ ಮುಂಬೈಗೆ ಸಮುದ್ರದ ಮೇಲ್ಭಾಗದಲ್ಲಿ ಸಂಪರ್ಕ ಕಲ್ಪಿಸಲಿದೆ. ಇದು 6 ಪಥದ ಹೆದ್ದಾರಿಯಾಗಿದ್ದು, ಇದರಿಂದ 2 ಗಂಟೆ ಪ್ರಯಾಣ ಅವಧಿ 20 ನಿಮಿಷಕ್ಕೆ ಇಳಿಯಲಿದೆ. ಜೊತೆಗೆ ದಕ್ಷಿಣ ಭಾರತಕ್ಕೂ ಸಂಪರ್ಕ ಸುಲಭವಾಗಲಿದೆ. 

21.8 ಕಿ.ಮೀ ಉದ್ದದ ಸೇತುವೆಯಲ್ಲಿ 16.5 ಕಿ.ಮೀ ಸಮುದ್ರದ ಮೇಲೆ ನಿರ್ಮಾಣಗೊಂಡಿದ್ದರೆ, 5.5 ಕಿ.ಮೀ. ಭೂಮಿಯ ಮೇಲೆ ನಿರ್ಮಾಣಗೊಂಡಿದೆ. ಈ ಸೇತುವೆಯ ಮೇಲೆ ಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗಲು ಅವಕಾಶ ನೀಡಲಾಗಿದೆ. ಬೈಕ್‌ ಮತ್ತು ಆಟೋಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

 

17,843 ಕೋಟಿ ವೆಚ್ಚದ ದೇಶದ ಅತೀ ಉದ್ದದ ಸೀ ಬ್ರಿಜ್‌ Mumbai Trans Harbour Link ಜ.12ಕ್ಕೆ ಲೋಕಾರ್ಪಣೆ!

ಸಮುದ್ರ ಸೇತುವೆ ಮೇಲೆ ಸಂಚರಿಸಲು ಟೋಲ್‌ ಕಟ್ಟಬೇಕು. ಒಮ್ಮುಖ ಪ್ರಯಾಣಕ್ಕೆ ವಾಹನಗಳಿಗೆ 250 ರೂ. ಮತ್ತು ದ್ವಿಮುಖ ಪ್ರಯಾಣಕ್ಕೆ 375 ರೂ. ಶುಲ್ಕ ಕಟ್ಟಬೇಕು.

ಹೊಸ ಸೇತುವೆ ಮೇಲೆ ಪ್ರಧಾನಿ ಸಂಚಾರ: 
ಮುಂಬೈ - ನವಿ ಮುಂಬೈ ಹೊಸ ಸೇತುವೆ ಉದ್ಘಾಟನೆ ಬಳಿಕ ಪ್ರಧಾನಿ ನವ ಮುಂಬೈವರೆಗೆ ಅದೇ ರಸ್ತೆಯಲ್ಲಿ ಸಂಚರಿಸಲಿದ್ದಾರೆ. ಈ ರಸ್ತೆಯ ಶುರುವಿನಿಂದ ಕೊನೆವರೆಗೂ ಸಂಚರಿಸಲಿದ್ದಾರೆ. 

Bengaluru: ಎಲೆಕ್ಟ್ರಾನಿಕ್‌ ಸಿಟಿ ಬ್ರಿಡ್ಜ್‌ ಮೇಲಿಂದ ಹಾರಿದ ಟೆಕ್‌ ಮಹಿಂದ್ರಾ ಉದ್ಯೋಗಿಯ ಪತ್ನಿ

click me!