
ನವದೆಹಲಿ(ಜೂ.19): ‘ಬಾಬಾ ಕಾ ಢಾಬಾ’ ಖ್ಯಾತಿಯ ಅಂಗಡಿಯ ಮಾಲೀಕ ಕಾಂತಾ ಪ್ರಸಾದ್ (81) ಅವರು ಗುರುವಾರ ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಸದ್ಯ ಅವರು ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಂತಾಪ್ರಸಾದ್ ಅವರು ಮದ್ಯದ ಜೊತೆಗೆ ಭಾರೀ ಪ್ರಮಾಣದ ನಿದ್ದೆಯ ಮಾತ್ರೆಗಳನ್ನು ಸೇವಿಸಿದ್ದರು. ಇದರಿಂದ ಅಸ್ವಸ್ಥರಾದ ಅವರನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ಕರೆತರಲಾಗಿದೆ.
ಕಳೆದ ವರ್ಷ ಸಹಾಯದ ರೂಪದಲ್ಲಿ ಹರಿದುಬಂದ ಹಣದೊಂದಿಗೆ ಕಾಂತಾ ಪ್ರಸಾದ್ ದಂಪತಿ ದೆಹಲಿಯಲ್ಲಿ ಹೊಸ ರೆಸ್ಟೋರೆಂಟ್ ಆರಂಭಿಸಿದ್ದರು. ಮೊದಲಿಗೆ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ 2ನೇ ಅಲೆಯ ಸೋಂಕು ನಿಯಂತ್ರಣಕ್ಕಾಗಿ ಹೇರಲಾದ ಲಾಕ್ಡೌನ್ ರೀತಿಯ ಕ್ರಮಗಳಿಂದ ರೆಸ್ಟೋರೆಂಟ್ ವಹಿವಾಟು ಭಾರೀ ಕುಸಿದಿತ್ತು. ಇದರಿಂದಾಗಿ ಮಾಸಿಕ 30 ಸಾವಿರ ರು. ಮಾತ್ರವೇ ವ್ಯಾಪಾರವಾಗುತ್ತಿತ್ತು.
ಆದರೆ ಈ ರೆಸ್ಟೋರೆಂಟ್ನ ಬಾಡಿಗೆಯೇ 1 ಲಕ್ಷ ರು. ಇತ್ತು. ಹೀಗಾಗಿ ಕಾಂತಾಪ್ರಸಾದ್ ದಂಪತಿ ತಮ್ಮ ರೆಸ್ಟೋರೆಂಟ್ ಉದ್ಯಮಕ್ಕೆ ತಿಲಾಂಜಲಿ ಹೇಳಿ, ಪುಟ್ಟಪಟ್ಟಿಅಂಗಡಿಯಲ್ಲೇ ಹೋಟೆಲ್ ಉದ್ಯಮ ಆರಂಭಿಸಿದ್ದರು. ಆರ್ಥಿಕ ಸಂಕಷ್ಟದಿಂದಾಗಿ ಕಾಂತಾ ಪ್ರಸಾದ್ ಆತ್ಮಹತ್ಯೆ ಯತ್ನಿಸಿರಬಬಹುದು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ