ಎಚ್‌ಎಎಲ್ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲು ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ, ತೇಜಸ್ ಯುದ್ಧ ವಿಮಾನ ಪರಿಶೀಲಿಸಲು ಸ್ವತ: ಪ್ರಧಾನಿಯೇ ಹಾರಾಟ ನಡೆಸಿದ್ದಾರೆ.
ಬೆಂಗಳೂರು (ನವೆಂಬರ್ 25, 2023): ಪ್ರಧಾನಿ ಮೋದಿ ಇಂದು ಬೆಂಗಳೂರು ಪ್ರವಾಸದಲ್ಲಿದ್ದು, ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದಲ್ಲಿ ಪ್ರಧಾನಿ ಮೋದಿ ಹಾರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಎಚ್‌ಎಎಲ್ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲು ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ, ತೇಜಸ್ ಯುದ್ಧ ವಿಮಾನ ಪರಿಶೀಲಿಸಲು ಸ್ವತ: ಪ್ರಧಾನಿಯೇ ಹಾರಾಟ ನಡೆಸಿದ್ದಾರೆ.
Successfully completed a sortie on the Tejas. The experience was incredibly enriching, significantly bolstering my confidence in our country's indigenous capabilities, and leaving me with a renewed sense of pride and optimism about our national potential. pic.twitter.com/4aO6Wf9XYO
— Narendra Modi (@narendramodi)ಇದನ್ನು ಓದಿ: ಬೆಂಗ್ಳೂರಿಗೆ ಬಂದಿಳಿದ ಪ್ರಧಾನಿ ಮೋದಿ: HAL ಕಾರ್ಯಕ್ರಮದಲ್ಲಿ ಭಾಗಿ
ಭಾರತೀಯ ವಾಯುಪಡೆ (IAF) 83 ತೇಜಸ್ ವಿಮಾನಗಳ ಖರೀದಿಯನ್ನು ಪ್ರಾರಂಭಿಸಿದೆ. ಈ ಪೈಕಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಪ್ರಸ್ತುತ ವಾರ್ಷಿಕವಾಗಿ ಎಂಟು ವಿಮಾನಗಳನ್ನು ತಯಾರಿಸುತ್ತಿದೆ ಮತ್ತು ವರ್ಷಕ್ಕೆ 16 ವಿಮಾನಗಳ ಉತ್ಪಾದನೆ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ.
ಮೋದಿ ಸರ್ಕಾರ ದೇಶದ ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸಲು ಮತ್ತು ತೇಜಸ್ ವಿಮಾನಗಳನ್ನು ಒಳಗೊಂಡಿರುವ ಸ್ವದೇಶೀಕರಣಕ್ಕಾಗಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ತೇಜಸ್ ವಿಮಾನದ ಮೊದಲ ಆವೃತ್ತಿಯನ್ನು 2016 ರಲ್ಲಿ IAF ಗೆ ಸೇರಿಸಲಾಯಿತು. ಪ್ರಸ್ತುತ, IAF ನ 45 ಸ್ಕ್ವಾಡ್ರನ್ ಮತ್ತು 18 ಸ್ಕ್ವಾಡ್ರನ್, LCA ತೇಜಸ್‌ನೊಂದಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ: ಪ್ರಧಾನಿ ಮೋದಿ ನಾಳೆ ಬೆಂಗಳೂರಿನ HALಗೆ ಭೇಟಿ, ಮಹತ್ವದ ಘೋಷಣೆ ಸಾಧ್ಯತೆ!
ಮೋದಿ ಸರ್ಕಾರದ ಅಡಿಯಲ್ಲಿ, 83 LCA Mk 1A ವಿಮಾನಗಳ ವಿತರಣೆಗಾಗಿ 36,468 ಕೋಟಿ ಮೌಲ್ಯದ ಆರ್ಡರ್ ಅನ್ನು HALಗೆ ನೀಡಲಾಗಿದ್ದು, ಫೆಬ್ರವರಿ 2024 ರೊಳಗೆ ವಿತರಣೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. LCA ತೇಜಸ್‌ನ ನವೀಕರಿಸಿದ ಆವೃತ್ತಿಯಾದ LCA Mk 2 ಅಭಿವೃದ್ಧಿಗೆ 9000 ಕೋಟಿ ರೂ.ಗಿಂತ ಹೆಚ್ಚು ಹಣ ಮಂಜೂರು ಮಾಡಲಾಗಿದೆ.
ಪ್ರಧಾನಿ ಮೋದಿ ತಮ್ಮ ಅಮೆರಿಕ ಭೇಟಿಯ ವೇಳೆ GE ಏರೋಸ್ಪೇಸ್ ಮತ್ತು HAL ಸಹಯೋಗದೊಂದಿಗೆ ತೇಜಸ್ Mk-II ಗಾಗಿ ಎಂಜಿನ್‌ಗಳನ್ನು ತಯಾರಿಸಲು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ತೇಜಸ್ ಜೆಟ್‌ಗಳ ಸೌಲಭ್ಯ ಸೇರಿದಂತೆ ಎಚ್‌ಎಎಲ್‌ನ ಉತ್ಪಾದನಾ ಸೌಲಭ್ಯವನ್ನು ಪ್ರಧಾನಿ ಪರಿಶೀಲಿಸುತ್ತಾರೆ ಮತ್ತು ಭೇಟಿ ನೀಡುತ್ತಾರೆ ಎಂದು ಮೋದಿ ಬೆಂಗಳೂರಿಗೆ ಬರುವ ಬಗ್ಗೆ ಈ ಹಿಂದೆ ತಿಳಿಸಿತ್ತು. ರಕ್ಷಣಾ ಉತ್ಪನ್ನಗಳ ಸ್ವದೇಶಿ ಉತ್ಪಾದನೆಗೆ ಮೋದಿ ಒತ್ತು ನೀಡುತ್ತಾರೆ ಮತ್ತು ಕೇಂದ್ರ ಸರ್ಕಾರ ಭಾರತದಲ್ಲಿ ಅವುಗಳ ಉತ್ಪಾದನೆಯನ್ನು ಮತ್ತು ಅವುಗಳ ರಫ್ತುಗಳನ್ನು ಹೇಗೆ ಹೆಚ್ಚಿಸಿದೆ ಎಂಬ ಬಗ್ಗೆ ಮಾಹಿತಿ ನೀಡಿದೆ.
ಇನ್ನೊಂದೆಡೆ, ಲಘು ಯುದ್ಧ ವಿಮಾನವಾದ ತೇಜಸ್ ಖರೀದಿಸಲು ಹಲವಾರು ದೇಶಗಳು ಆಸಕ್ತಿ ತೋರಿಸಿವೆ ಮತ್ತು ಅಮೆರಿಕ ರಕ್ಷಣಾ ದೈತ್ಯ GE ಏರೋಸ್ಪೇಸ್ Mk-II-ತೇಜಸ್‌ಗಾಗಿ ಜಂಟಿಯಾಗಿ ಎಂಜಿನ್‌ಗಳನ್ನು ಉತ್ಪಾದಿಸಲು HAL ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
2022-2023ರ ಆರ್ಥಿಕ ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ಗರಿಷ್ಠ 15,920 ಕೋಟಿ ರೂ.ಗಳನ್ನು ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ವರ್ಷದ ಏಪ್ರಿಲ್‌ನಲ್ಲಿ ಮಾಹಿತಿ ನೀಡಿದ್ದರು. ಇದು ದೇಶಕ್ಕೆ ಗಮನಾರ್ಹ ಸಾಧನೆಯಾಗಿದೆ ಎಂದೂ ಹೇಳಿದ್ದರು.