ರಕ್ಷಣಾ, ಹೂಡಿಕೆ, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಭಾರತ-UK ಜೊತೆಯಾಗಿ ಹೆಜ್ಜೆ: ಮೋದಿ!

By Suvarna News  |  First Published Nov 27, 2020, 8:47 PM IST

ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಈಗಾಗಲೇ ಹಲವು ರಾಷ್ಟ್ರಗಳ ಜೊತೆ ರಾಜತಾಂತ್ರಿಕ, ವ್ಯವಹಾರಿಕ ಸೇರಿದಂತೆ ಹಲವು ಒಪ್ಪಂದಗಳನ್ನು ಭಾರತ ಮಾಡಿಕೊಂಡಿದೆ. ಇದೀಗ ಯುನೈಟೆಡ್ ಕಿಂಗ್‌ಡಮ್ ಜೊತೆಗೆ ಪ್ರಧಾನಿ ಮೋದಿ ಮಹತ್ವದ ಚರ್ಚೆ ನಡೆಸಿದ್ದಾರೆ. ಮಾತುಕತೆಯ ಪ್ರಮುಖ ಅಂಶಗಳು ಇಲ್ಲಿವೆ.


ದೆಹಲಿ(ನ.27):  ಹಮಾನ ಬದಲಾವಣೆ, ವ್ಯಾಪಾರ, ಹೂಡಿಕೆ, ಭದ್ರತೆ ಹಾಗೂ ಕೊರೋನಾ ವೈರಸ್ ಲಸಿಕೆ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ UK(ಯುನೈಟೆಡ್ ಕಿಂಗ್‌ಡಮ್) ಪ್ರಧಾನಿ ಬೊರಿಸ್ ಜಾನ್ಸನ್ ಮಹತ್ವದ ಮಾತುಕತೆ ನಡೆಸಿದ್ದಾರೆ. 

3 ಲಸಿಕೆ ತಯಾರಿಕೆ ಕೇಂದ್ರಗಳಿಗೆ ನಾಳೆ ಪ್ರಧಾನಿ ಮೋದಿ ಭೇಟಿ, ಪರಿಶೀಲನೆ!.

Tap to resize

Latest Videos

ಮೋದಿ ಈ ಕುರಿತು ಟ್ವೀಟ್ ಮಾಡಿದ್ದಾರೆ. ಆತ್ಮೀಯ ಸ್ನೇಹಿತ, ಯುಕೆ ಪ್ರಧಾನಿ ಬೊರಿಸ್ ಜಾನ್ಸನ್ ಜೊತೆ ಅತ್ಯುತ್ತಮ ಮಾತುಕತೆ ನಡೆಸಿದ್ದೇನೆ. ಮುಂದಿನ ದಶಕದಲ್ಲಿ ಭಾರತ-ಯುಕೆ ಸಂಬಂಧಗಳಿಗಾಗಿ ಮಹತ್ವಾಕಾಂಕ್ಷೆಯ ಮಾರ್ಗಸೂಚಿ ಕುರಿತು ಮಾತುಕತೆ ನಡೆಸಿದ್ದೇನೆ. ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಮತ್ತು ಭದ್ರತೆ, ಹವಾಮಾನ ಬದಲಾವಣೆ, ಮತ್ತು ಕೋವಿಡ್ -19 ರ ವಿರುದ್ಧ ಹೋರಾಡುವ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಹಾಗೂ ಯುಕೆ ಜಂಟಿಯಾಗೆ ಹೆಜ್ಜೆಹಾಕಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

Had an excellent discussion with my friend, UK PM on an ambitious roadmap for India-UK ties in the next decade. We agreed to work towards a quantum leap in our cooperation in all areas - trade & investment, defence & security, climate change, and fighting Covid-19.

— Narendra Modi (@narendramodi)

ಹೊಸ ನೀತಿ, ರೀತಿಯಡಿ ಉಗ್ರರ ವಿರುದ್ಧ ಹೋರಾಟ: ಮೋದಿ ಶಪಥ...

ವಿಶ್ವಸಂಸ್ಥೆಯ ಹಮಾನ ಬದಲಾವಣೆ ಕುರಿತ ಶೃಂಗಸಭೆಯನ್ನು ಮುಂದಿನ ವರ್ಷ ಯುಕೆ ಆಯೋಜಿಸುತ್ತಿದೆ. ಕೊರೋನಾ ವೈರಸ್ ಕಾರಣ 2020ರಲ್ಲಿ ಆಯೋಜಿಸಿದ್ದ ಈ ಸಭೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯ ಹರಿವನ್ನು ಸುಧಾರಿಸುವ ಮಹತ್ವದ ಕುರಿತು ಬೊರಿಸ್ ಜಾನ್ಸನ್ ಒತ್ತಿ ಹೇಳಿದ್ದಾರೆ.  ಕೊರೋನಾ ವೈರಸ್ ವಿರುದ್ಧ ಕೈಗೊಂಡ ಮಹತ್ವದ ಮಾರ್ಗಸೂಚಿಗಳ ಕುರಿತು ಉಭಯ ನಾಯಕರು ಮಾತಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು 

click me!