ನವದೆಹಲಿ(ಮಾ.01): ಉಕ್ರೇನ್ ಮೇಲೆ ರಷ್ಯಾ ದಾಳಿ 6ನೇ ದಿನವೂ ಮುಂದುವರಿದಿದೆ.ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ರಷ್ಯಾ ಸಂಪೂರ್ಣ ಉಕ್ರೇನ್ ದ್ವಂಸ ಮಾಡುತ್ತಿದೆ. ಈ ದಾಳಿಯಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಶೇಕರಪ್ಪ ಜ್ಞಾನಗೌಡರ್ ಬಲಿಯಾಗಿದ್ದಾರೆ.20 ವರ್ಷದ ನವೀನ್ ನಿಧನ ಭಾರತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪುತ್ರನನ್ನು ಕಳೆದುಕೊಂಡ ಕುಟುಂಬದ ಜೊತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ. ಈ ವೇಳೆ ಘಟನೆಗೆ ತೀವ್ರ ನೋವು ವ್ಯಕ್ತಪಡಿಸಿದ ಪ್ರಧಾನಿ, ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.
ಪುತ್ರನ ಕಳೆದುಕೊಂಡ ನೋವಿನಲ್ಲಿ ತಂದೇ ಶೇಕರ್ ಗೌಡ ಪ್ರಧಾನಿ ಮೋದಿ ಮಾತುಗಳನ್ನು ಆಲಿಸಿದ್ದಾರೆ. ಕಣ್ಣೀರು ಹಾಕುತ್ತಲೆ ಮೋದಿಗೆ ಪ್ರಣಾಮ ತಿಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ನವೀನ್ ಕುಟುಂಬಕ್ಕೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
Ukraine-Russia War: ಕ್ಷಿಪಣಿ ದಾಳಿಗೆ ಬಲಿಯಾದ ನವೀನ್ ಮೃತದೇಹ ಭಾರತಕ್ಕೆ ತರೋದು ಅನುಮಾನ!
ನವೀನ್ ಕುಟುಂಬದ ದುಃಖ ಮುಗಿಲು ಮುಟ್ಟಿದೆ. ಪೋಷಕರು ಕಂಗಾಲಾಗಿದ್ದಾರೆ. ಇದೇ ಗ್ರಾಮದ ಹಲವು ವಿದ್ಯಾರ್ಥಿಗಳು ನವೀನ್ ಜೊತೆಗೆ ಒಂದೇ ಬಂಕರ್‌ನಲ್ಲಿದ್ದರು. ಇದೀಗ ಆತಂಕ ಹೆಚ್ಚಾಗಿದೆ.
ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ನವೀನ್ ಖಾರ್ಕೀವ್ ನಗರದಲ್ಲಿರುವ ಉಕ್ರೇನ್ ಪ್ರಧಾನ ಸರ್ಕಾರಿ ಕಚೇರಿ ಮೇಲೆ ರಷ್ಯಾ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಹಾವೇರಿಯ ರಾಣೆಬೆನ್ನೂರೂ ತಾಲೂಕಿನ ಚಲಗೇರಿಯ 20 ವರ್ಷದ ನವೀನ್ ಮೃತಪಟ್ಟಿದ್ದಾರೆ.
ಖಾರ್ಕೀವ್ ನಗರದಲ್ಲಿ ಸಿಲುಕಿಕೊಂಡಿದ್ದ ಹಲವು ಕರ್ನಾಟಕ ಮೂಲದ ವಿದ್ಯಾರ್ಥಿಗಳು ಬಂಕರ್‌ನಲ್ಲಿ ಉಳಿದುಕೊಂಡಿದ್ದರು. ಆದರೆ ಆಹಾರ ನೀರು ಇಲ್ಲದೆ ಕೆಲ ದಿನ ದೂಡಿದ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿದ್ದಾರೆ. ಇದರಿಂದ ಆಹಾರ ತರಲು ದಿನಸಿ ಅಂಗಡಿಗೆ ತೆರಳಿದ ನವೀನ್, ಅಂಗಡಿ ತಲುಪಿ ಕ್ಯೂ ನಿಲ್ಲುವಷ್ಟರಲ್ಲೇ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಈ ವೇಳೆ ನವೀನ್ ಮೃತಪಟ್ಟಿದ್ದಾನೆ. ನವೀನ್ ಜೊತೆಗೆ ಇನ್ನಿಬ್ಬರು ವಿದ್ಯಾರ್ಥಿಗಳು ತೆರಳಿದ್ದಾರೆ. ಇವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲಿರುವೆ ಪ್ರತಿಕ್ರಿಯಿಸಲು ಏಕೆ ತಡ ಎಂದು ಕೇಳಿದ್ದ ಅಮ್ಮ: ಸಾವಿಗೂ ಮುನ್ನ ಕೊನೆ ಸಂದೇಶ ಕಳುಹಿಸಿದ ರಷ್ಯಾ ಯೋಧ
ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಸವಾಲಿನ ಕೆಲಸ: ಜೋಶಿ
ಉಕ್ರೇನ್‌ನ ಈಗಿನ ವಾಸ್ತವ ಚಿತ್ರಣ, ಅಲ್ಲಿಂದ ಬರುವ ವಿಡಿಯೋಗಳು ಎಷ್ಟುಸತ್ಯ, ಎಷ್ಟುಸುಳ್ಳು ಎಂದು ಪರಿಶೀಲನೆ ನಡೆಸಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ನೇತೃತ್ವದಲ್ಲಿ ನಾವು ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದೇವೆ. ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಬಹುದೊಡ್ಡ ಸವಾಲಿನ ಕೆಲಸ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಂಥ ವಿಷಮ ಸ್ಥಿತಿಯಲ್ಲಿ ಭಾನುವಾರ ಎರಡು ವಿಮಾನಗಳು ಭಾರತಕ್ಕೆ ಬಂದಿವೆ. ನಮ್ಮ ಪ್ರಯತ್ನ ಮುಂದುವರಿದಿವೆ. ಉಕ್ರೇನ್‌ನ ಅಕ್ಕಪಕ್ಕದ ದೇಶಗಳ ಜತೆ ಮಾತುಕತೆ ನಡೆಸಿದ್ದೇವೆ. ಅವರ ಸಹಯೋಗ, ಸಹಕಾರ ಪಡೆದು ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದೇವೆ. ನಾನು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ವಿದೇಶಾಂಗ ರಾಜ್ಯ ಸಚಿವರ ಸಂಪರ್ಕದಲ್ಲಿದ್ದೇನೆ. ಇದು ಕ್ಲಿಷ್ಟಕರ ಸನ್ನಿವೇಶ ಆಗಿರುವುದರಿಂದ ರಷ್ಯಾ, ಉಕ್ರೇನ್ ಎರಡರ ಜತೆಗೂ ಮಾತನಾಡಬೇಕಾಗುತ್ತದೆ ಎಂದರು.
ಕೀವ್, ಖಾಕಿರ್ವ್ಗೆ ತಲುಪಲಾಗುತ್ತಿಲ್ಲ: ಉಕ್ರೇನ್‌ನ ಕೀವ್, ಖಾರ್ಕಿವ್‌ನಲ್ಲಿ ಕನ್ನಡಿಗ ವಿದ್ಯಾರ್ಥಿಗಳ ಪರದಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೀವ್ ಮತ್ತು ಖಾರ್ಕಿವ್‌ಗೆ ತಲುಪಲು ಸಾಧ್ಯವಾಗುತ್ತಿಲ್ಲ. ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಹೆಚ್ಚಿನ ಫೋನ್‌ಗಳ ವ್ಯವಸ್ಥೆ ಮಾಡಿದ್ದೇವೆ. ಕೆಲ ವೇಳೆ ವಿದ್ಯುತ್ ಸೇರಿ ಇತರೆ ಸೌಲಭ್ಯ ಸಿಗಲ್ಲ ಎಂದರು.