* ದೇಶಾದ್ಯಂತ ಸದ್ದು ಮಾಡುತ್ತಿದೆ ಪಿಎಂ ಮೋದಿ ಭದ್ರತೆ ವಿಚಾರ
* ಪಂಜಾಬ್‌ನಲ್ಲಿ ಮೋದಿ ಭದ್ರತಾ ವೈಫಲ್ಯಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕಿಡಿ
* ಪ್ರಧಾನಿ ಭದ್ರತೆ ಬಗ್ಗೆ ಪ್ರಿಯಾಂಕಾಗೆ ವಿವರಣೆ ಕೊಟ್ಟ ಸಿಎಂ ಚನ್ನಿ: ಬಿಜೆಪಿ ನಾಯಕರ ಆಕ್ರೋಶ
ನವದೆಹಲಿ(ಜ.09): ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಲೋಪ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಕಾವು ಪಡೆದುಕೊಳ್ಳುತ್ತಿದೆ. ಪ್ರಧಾನಿ ಭದ್ರತೆಗೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಪಂಜಾಬ್‌ನಲ್ಲಿ ಪ್ರಧಾನಿಗೆ ಯಾವುದೇ ಅಪಾಯ ಇಲ್ಲ ಎಂದು ಹೇಳಿದ್ದಾರೆ. ಅವರು ಇಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದರು. ಈ ಸಂಬಂಧ ಪ್ರಿಯಾಂಕಾ ಗಾಂಧಿಯವರೊಂದಿಗೆ ಮಾತನಾಡಿದ್ದೇನೆ ಮತ್ತು ಸಂಪೂರ್ಣ ವಿಷಯವನ್ನು ಅವರಿಗೆ ತಿಳಿಸಿದ್ದೇನೆ ಎಂದು ಚನ್ನಿ ಹೇಳಿದ್ದಾರೆ. ಚನ್ನಿ ಅವರ ಈ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಚನ್ನಿಗೆ ತಿರುಗೇಟು ನೀಡಿದ್ದು, ಈ ವಿಚಾರದಲ್ಲಿ ಚನ್ನಿ ಪ್ರಿಯಾಂಕಾ ಗಾಂಧಿ ಅವರಿಗೆ ಎಲ್ಲವನ್ನೂ ಹೇಳಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಯಾವ ಅಧಿಕಾರದ ಅಡಿಯಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಮಾಹಿತಿ ಕೊಟ್ಟದ್ದು?
ಹಾಲಿ ಮುಖ್ಯಮಂತ್ರಿಯೊಬ್ಬರು ಪ್ರಿಯಾಂಕಾ ಗಾಂಧಿ ಅವರಿಗೆ ಪ್ರಧಾನಿ ಭದ್ರತೆಯಂತಹ ಸೂಕ್ಷ್ಮ ವಿಷಯದ ಬಗ್ಗೆ ವಿವರಿಸಿದ್ದಾರೆ ಎಂದು ಸಂಬಿತ್ ಪಾತ್ರ ಕಿಡಿ ಕಾರಿದ್ದಾರೆ. ಸಿಎಂ ಯಾಕೆ ಹೀಗೆ ಮಾಡಿದರು. ಪ್ರಿಯಾಂಕಾ ಗಾಂಧಿ ಅವರು ಯಾವುದೇ ಸಾಂವಿಧಾನಿಕ ಸ್ಥಾನವನ್ನು ಹೊಂದಿಲ್ಲ, ಹೀಗಿರುವಾಗ ಅವರಿಗೆ ಯಾಕೆ ವಿವರಣೆ ನಿಡಿದ್ದಾರೆಂದು ]ಪಾತ್ರಾ ಪ್ರಶ್ನಿಸಿದ್ದಾರೆ. ಹಾಲಿ ಮುಖ್ಯಮಂತ್ರಿಯೊಬ್ಬರು ಮಾಹಿತಿ ನೀಡಲು ಪ್ರಿಯಾಂಕಾ ಗಾಂಧಿ ಯಾರು? ಪ್ರಧಾನಿ ಭದ್ರತೆ ವಿಚಾರದಲ್ಲಿ ಅವರಿಗೇಕೆ ಮಾಹಿತಿ ನೀಡಬೇಕು? ಚನ್ನಿಯನ್ನು ಗೇಲಿ ಮಾಡಿದ ಅವರು, ಚನ್ನಿ ಸಾಹೇಬರು ಸ್ವಲ್ಪ ಪ್ರಾಮಾಣಿಕರಾಗಿರಬೇಕು ಎಂದು ಹೇಳಿದ್ದಾರೆ. ನೀವು ಪ್ರಿಯಾಂಕಾ ಗಾಂಧಿಯವರಿಗೆ “ಕೆಲಸ ಮುಗಿದಿದೆ...ನೀವು ಹೇಳಿದ್ದನ್ನು ಮುಗಿಸಿದೆ!” ಎಂದು ಹೇಳಿರಬೇಕು. ಅಂದರೆ, ನೀವು ಹೇಳಿದ್ದು ಮುಗಿದಿದೆ.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿನ ಲೋಪ ಕುರಿತು ಪ್ರಿಯಾಂಕಾ ಗಾಂಧಿ ಅವರಿಗೆ ವಿವರಿಸಿರುವ ಸಿಎಂ ಚರಂಜಿತ್ ಸಿಂಗ್ ಮಾಹಿತಿ ನೀಡಿದ್ದಾರೆಂಬುವುದು ದೃಢಪಟ್ಟಿದೆ. ಆದರೆ, ಪ್ರಧಾನಿ ಭದ್ರತೆಯಂತಹ ಸೂಕ್ಷ್ಮ ವಿಚಾರದಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಯಾವ ನಿಯಮದ ಅಡಿಯಲ್ಲಿ ಸಿಎಂ ಮಾಹಿತಿ ನೀಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗುರಿ ತಪ್ಪಿದ ಬಗ್ಗೆ ಪ್ರಿಯಾಂಕಾ ಗಾಂಧಿಗೆ ವರದಿ ನೀಡಲು ಮುಖ್ಯಮಂತ್ರಿ ಹೋಗಿದ್ದಾರಾ? ಎಂದೂ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್‌ಗೆ ಮಾನಹಾನಿ ಮಾಡುವವರು ಹಿಂದೆ ಸರಿಯಬೇಕು ಎಂದ ಚನ್ನಿ
ಇದಕ್ಕೂ ಮೊದಲು, ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತೊಮ್ಮೆ ಭಾವನಾತ್ಮಕ ವಿಷಯವನ್ನು ಎತ್ತಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಜೊತೆಗಿನ ಸಂವಾದದಲ್ಲಿ ನಾನು ಪ್ರಧಾನಿಗಾಗಿ ಮಹಾಮೃತ್ಯುಂಜಯ್ ಪಾರಾಯಣ ಮಾಡುತ್ತೇನೆ ಎಂದು ಹೇಳಿದ್ದಾರೆ. ಪ್ರಧಾನಿಯವರ ಭದ್ರತೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಮತ್ತೊಮ್ಮೆ ಹೇಳಿದ್ದಾರೆ. ಪಂಜಾಬ್‌ಗೆ ಮಾನಹಾನಿ ಮಾಡುವವರು ಹಿಂದೆ ಸರಿಯಬೇಕು ಎಂದು ಚನ್ನಿ ಹೇಳಿದರು. ಪಂಜಾಬ್‌ನಲ್ಲಿ ಫೆಬ್ರವರಿ 14 ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಪಂಜಾಬ್‌ನಲ್ಲಿ 117 ಸ್ಥಾನಗಳಿವೆ. 2017ರ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದಿತ್ತು.