Uttar Pradesh Elections : ಇವಿಎಂ ದುರುಪಯೋಗ ಆಗದಿದ್ರೆ ಬಿಜೆಪಿ ಸೋಲು ಖಂಡಿತ ಅಂದ್ರು ಮಾಯಾವತಿ!

Suvarna News   | Asianet News
Published : Jan 09, 2022, 01:42 PM IST
Uttar Pradesh Elections : ಇವಿಎಂ ದುರುಪಯೋಗ ಆಗದಿದ್ರೆ ಬಿಜೆಪಿ ಸೋಲು ಖಂಡಿತ ಅಂದ್ರು ಮಾಯಾವತಿ!

ಸಾರಾಂಶ

ಬಹುಜನ ಸಮಾಜ್ ಪಾರ್ಟಿ ಅಧ್ಯಕ್ಷೆ ಮಾಯಾವತಿ ಮಾತು ಆಡಳಿಯ ಯಂತ್ರವನ್ನು ದುರಪಯೋಗಪಡಿಸಿಕೊಳ್ಳಲು ಚುನಾವಣಾ ಆಯೋಗ ಬಿಡಬಾರದು ಸಮಾಜವಾದಿ ಪಕ್ಷಕ್ಕೆ ಮಾತಿನಲ್ಲೇ ತಿವಿದ ಬಿಎಸ್ ಪಿ ಮುಖ್ಯಸ್ಥೆ

ಲಖನೌ (ಜ. 9): ಹಾಲಿ ವರ್ಷದ ಉತ್ತರ ಪ್ರದೇಶ ವಿಧಾನಸಭೆ (Uttar Pradesh Elections) ಚುನಾವಣೆಯಲ್ಲಿ ಬಹುಜನ್ ಸಮಾಜ್ ಪಾರ್ಟಿ (Bahujan Samaj Party) ಅಧ್ಯಕ್ಷ ಮಾಯಾವತಿ (Mayawati) ಅವರ ಮೌನ ಸಾಕಷ್ಟು ಸುದ್ದಿಯಾಗಿದೆ. ಈಗಾಗಲೇ ಎಸ್ ಪಿ (SP), ಕಾಂಗ್ರೆಸ್ (Congress) ಸೇರಿದಂತೆ ಬಹುತೇಕ ವಿಪಕ್ಷಗಳು ಸಮಾವೇಶಗಳನ್ನು ಮಾಡುವ ಮೂಲಕ ಚುನಾವಣಾ ಪ್ರಚಾರ ಆಂಭಿಸಿದ್ದರೆ, ಮಾಯಾವತಿ ಮಾತ್ರ ಮೌನ ತಾಳಿದ್ದರು. ಆದರೆ, ಶನಿವಾರ ಚುನಾವಣೆ ಆಯೋಗ (Election Commission of India ) ಉತ್ತರ ಪ್ರದೇಶ ಚುನಾವಣೆಗೆ ದಿನಾಂಕ ಘೋಷಣೆ ಅದ ಬಳಿಕ ಮಾಧ್ಯಮಗಳ ಎದುರು ಮಾತನಾಡಿರುವ ಬಿಎಸ್ ಪಿ (BSP) ಮುಖ್ಯಸ್ಥೆ ಮಾಯಾವತಿ, "ಆಡಳಿತ ಯಂತ್ರವನ್ನು ಉಪಯೋಗಿಸಿಕೊಳ್ಳದೆ, ಇವಿಎಂ (EVM)ಅನ್ನು ಟ್ಯಾಂಪರ್ ಮಾಡದೇ ಬಿಜೆಪಿ (BJP)ಚುನಾವಣಾ ಕಣಕ್ಕೆ ಇಳಿದರೆ, ಸೋಲು ಕಾಣುವುದು ಖಂಡಿತ' ಎಂದು ಪ್ರತಿಕ್ರಿಯಿಸಿದ್ದಾರೆ.

"ಯಾವುದೇ ರಾಜ್ಯವಾಗಲಿ ಅಲ್ಲಿನ ಆಡಳಿತ ಯಂತ್ರಕ್ಕೆ ಚುನಾವಣಾ ಆಯೋಗದ ಹೆದರಿಕೆ ಇರಬೇಕು. ಚುನಾವಣಾ ಆಯೋಗ ನ್ಯಾಯಯುತವಾಗಿ ಚುನಾವಣೆಯನ್ನ ನಡೆಸಬೇಕು. ಆಡಳಿತ ಯಂತ್ರವನ್ನು ಉಪಯೋಗಿಸಿಕೊಳ್ಳದೆ, ಇವಿಎಂ ಯಂತ್ರವನ್ನು ಟ್ಯಾಂಪರ್ ಮಾಡದೇ ಬಿಜೆಪಿ ಚುನಾವಣೆಗೆ ಇಳಿದಲ್ಲಿ ಸೋಲು ಕಾಣುವುದು ಖಂಡಿತ' ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ಮಾತ್ರವಲ್ಲ, ಎಲ್ಲಾ ರಾಜ್ಯಗಳಲ್ಲೂ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆಗೆ ಅನುಗುಣವಾಗಿ ಚುನಾವಣೆ ನಡೆಯಬೇಕು ಎಂದು ಬಿಎಸ್ ಪಿ ಮುಖಸ್ಥೆ ತಿಳಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗವು ಹೊರಡಿಸಿದ ಎಲ್ಲಾ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ತಮ್ಮ ಪಕ್ಷವು ಅನುಸರಿಸುತ್ತದೆ ಎಂದು ಮಾಯಾವತಿ ಭರವಸೆ ನೀಡಿದ್ದಾರೆ. ಅದಲ್ಲದೆ, ದಲಿತರು ಸರಿಯಾಗಿ ಮತ  ಚಲಾಯಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎನ್ನುವುದನ್ನು ಚುನಾವಣಾ ಆಯೋಗ ಖಚಿತಪಡಿಸಿಕೊಳ್ಳಬೇಕು ಎಂದು ಮಾಯಾವತಿ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

ಶನಿವಾರ ಐದು ರಾಜ್ಯಗಳ ಚುನಾವಣೆಗಳ ದಿನಾಂಕಗಳನ್ನು ಘೋಷಿಸಲಾಗಿದೆ, ಉತ್ತರ ಪ್ರದೇಶ, ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಚುನಾವಣೆಗಳು ಶಾಂತಿಯುತವಾಗಿ ನಡೆಯಬೇಕು ಎಂದು ನಾನು ಬಯಸುತ್ತೇನೆ. ಪೊಲೀಸರು ಮತ್ತು ಆಡಳಿತವು ಯಾರ ಪರವಾಗಿಯೂ ಕಾರ್ಯ ನಿರ್ವಹಿಸಬಾರದು' ಎಂದು ಮಾಯಾವತಿ ಹೇಳಿದ್ದಾರೆ. "ಚುನಾವಣಾ ಆಯೋಗದ  ಭಯ ಎಲ್ಲರಲ್ಲೂ ಇರಬೇಕು ಆಗ ಮಾತ್ರ ಚುನಾವಣೆಗಳು ಶಾಂತಿಯುತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಯುತ್ತದೆ' ಎಂದರು.

Assembly Elections 2022: ಉತ್ತರವನ್ನು ಗೆದ್ದು ಮತ್ತೆ ದೇಶ ಗೆಲ್ತಾರಾ ನರೇಂದ್ರ ಮೋದಿ?
ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ಸಾಧ್ಯತೆಯ ಬಗ್ಗೆ ಮಾತನಾಡಿದ ಮಾಯಾವತಿ, ಜನರು ಈ ಬಾರಿ ಬಿಎಸ್ ಪಿಗೆ ಹೆಚ್ಚಿನ ಮತಗಳನ್ನು ಹಾಕಬೇಕು ಎಂದು ಹೇಳಿದರು. ವಿಶೇಷವಾಗಿ ದಲಿತರು, ಎಸ್ ಟಿಗಳು ಹಾಗೂ ರೈತರು ಲಾಭ ಪಡೆಯಲು ಬಯಸಿದ್ದಲ್ಲಿ ಬಿಎಸ್ ಪಿಗೆ ಮತ ಹಾಕಬೇಕು ಎಂದು ಒತ್ತಾಯಿಸಿದರು. ನಿರುದ್ಯೋಗಿ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದ ಅವರು, ತಮ್ಮ ಪಕ್ಷ ಈ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತದೆ ಎಂದರು.
400 ಸೀಟ್ ಗೆಲ್ಲುವುದು ಕನಸಿನ ಮಾತು: ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು 403 ಕ್ಷೇತ್ರಗಳ  ಪೈಕಿ 400ರಲ್ಲಿ ಜಯ ಸಾಧಿಸಲಿದೆ ಎಂದು ಅಖಿಲೇಶ್ ಯಾದವ್ (Akhilesh Yadav) ಹೇಳಿರುವ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, "ಮಾರ್ಚ್ 10ಕ್ಕೆ ಫಲಿತಾಂಶ ಬಂದಾಗ ಈ ಕನಸುಗಳೆಲ್ಲಾ ನುಚ್ಚುನೂರಾಗಲಿದೆ. 400 ಸೀಟ್ ಗೆಲ್ಲುವುದು ಕನಸಿನ ಮಾತು' ಎಂದು ಹೇಳಿದರು. ಇದಲ್ಲದೆ, ಪಂಜಾಬ್ ನಲ್ಲಿ ಶಿರೋಮಣಿ ಅಕಾಲಿ ದಳ ಪಕ್ಷದೊಂದಿಗೆ ಬಿಎಸ್ ಪಿ ಮೈತ್ರಿ ಮಾಡಿಕೊಂಡಿದ್ದು, ಪಂಜಾಬ್ ನಲ್ಲೂ ತಮ್ಮ ಪಕ್ಷ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಮಾಯಾವತಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ