
ಮುಂಬೈ(ಜೂ.05): ಕೊರೋನಾ ಸೋಂಕು ನಿಯಂತ್ರಣಕ್ಕೆ ಹೇರಲಾದ ಲಾಕ್ಡೌನ್ ಅನ್ನು 5 ಹಂತಗಳಲ್ಲಿ ತೆರವು ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಅತೀ ಕಡಿಮೆ ಕೇಸ್, ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳ ಆಧಾರದ ಮೇಲೆ, ಅವುಗಳನ್ನು ಹಂತಹಂತವಾಗಿ ಅನ್‌ಲಾಕ್ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಮೊದಲ ಹಂತದ ಅನ್‌ಲಾಕ್ ಶುಕ್ರವಾರದಿಂದಲೇ ಆರಂಭವಾಗಲಿದೆ ಎಂದು ಸಚಿವ ವಿಜಯ್ ವಾಡೆಟ್ಟಿವಾರ್ ಹೇಳಿದ್ದಾದರೂ, ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ರಾಜ್ಯ ಸರ್ಕಾರ, ಇಂಥ ಪ್ರಸ್ತಾವನೆ ಸರ್ಕಾರದ ಚಿಂತನೆ ಹಂತದಲ್ಲಿದೆ. ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದೆ.
ಮೊದಲ ಹಂತ
ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಹಾಗೂ ಆಮ್ಲಜನಕ ವ್ಯವಸ್ಥೆಯ ಹಾಸಿಗೆಗಳ ಬೇಡಿಕೆ ಶೇ.25ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಲಾಕ್ಡೌನ್ ಪೂರ್ತಿ ತೆರವು. ಇಲ್ಲಿ ರೆಸ್ಟೋರೆಂಟ್, ಮಾಲ್, ಸ್ಥಳೀಯ ರೈಲು, ಸಾರ್ವಜನಿಕ ಸ್ಥಳ, ಪ್ರವಾಸಿ ತಾಣ, ಥಿಯೇಟರ್, ಶೂಟಿಂಗ್, ಸಾಮಾಜಿಕ ಮನೋರಂಜನೆ, ಮದುವೆ, ಜಿಮ್, ಸಲೂನ್, ಬ್ಯೂಟಿ ಪಾರ್ಲರ್ಗಳಿಗೆ ಅನುಮತಿ.
ಎರಡನೇ ಹಂತ
ಸಾಮಾನ್ಯ ಪ್ರಮಾಣದಲ್ಲಿ ಸೋಂಕು ಇರುವ ಜಿಲ್ಲೆಗಳಲ್ಲಿ ಅಥವಾ ನಗರಗಳಲ್ಲಿ ಜಿಮ್, ಸಲೂನ್, ಬ್ಯೂಟಿ ಪಾರ್ಲರ್ಗಳ ಕಾರಾರಯರಂಭಕ್ಕೆ ಅನುಮತಿ. ಆದರೆ ಶೇ.50ರಷ್ಟುಜನರ ಪ್ರವೇಶಕ್ಕೆ ಮಾತ್ರ ಅವಕಾಶ. ಮದುವೆ ಸೇರಿ ಇನ್ನಿತರ ಕಾರ್ಯಕ್ರಮಗಳಲ್ಲಿ ಇಂತಿಷ್ಟೇ ಜನ ಭಾಗಿಯಾಗಿರಬೇಕೆಂಬ ನಿಯಮ. ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಮೂರನೇ ಹಂತ
ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಕರಣ ಇರುವ ಜಿಲ್ಲೆಗಳಲ್ಲಿ ಈ ಅನ್‌ಲಾಕ್ ಪ್ರಕ್ರಿಯೆ ಜಾರಿಯಾಗುತ್ತದೆ. ಈ ಹಂತದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕೆಲವು ನಿರ್ಬಂಧಗಳು ಮುಂದುವರಿಯಲಿವೆ.
ನಾಲ್ಕನೇ ಹಂತ
ಪುಣೆ ಮತ್ತು ರಾಯ್ಗಢ ಜಿಲ್ಲೆಗಳಲ್ಲಿ 4ನೇ ಹಂತದ ಅನ್‌ಲಾಕ್ ಕ್ರಮ ಜಾರಿಗೊಳಿಸಲಾಗುತ್ತದೆ.
ಐದನೇ ಹಂತ
ಈ ಹಂತದ ವ್ಯಾಪ್ತಿಗೆ ಬರುವ ನಗರ ಮತ್ತು ಜಿಲ್ಲೆಗಳಲ್ಲಿ ಹೆಚ್ಚು ಸೋಂಕು ಇರುವ ಕಾರಣ ಈ ಭಾಗದ ಜನರ ಪ್ರಯಾಣಕ್ಕೆ ಇ-ಪಾಸ್ಗಳ ಅಗತ್ಯವಿರಲಿದೆ. ಆದರೆ ಅಂತರ್ರಾಜ್ಯ ಪ್ರಯಾಣಕ್ಕೆ ಆರ್ಟಿಪಿಸಿಆರ್ ಪರೀಕ್ಷೆಯ ಅಗತ್ಯವಿರುವುದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ