'ನೀವೊಂದು ಗೆರೆ ಎಳೆಯಿರಿ, ಅದೇ ಸ್ಥಳವನ್ನ ದೇವಸ್ಥಾನ ಕಟ್ಟಲು ನೀಡ್ತೇನೆ..' ಅಬುಧಾಬಿ ಮಂದಿರ ನಿರ್ಮಾಣದ ಕಥೆ ತಿಳಿಸಿದ ಮೋದಿ!

Published : Feb 13, 2024, 09:29 PM ISTUpdated : Feb 13, 2024, 09:34 PM IST
'ನೀವೊಂದು ಗೆರೆ ಎಳೆಯಿರಿ, ಅದೇ ಸ್ಥಳವನ್ನ ದೇವಸ್ಥಾನ ಕಟ್ಟಲು ನೀಡ್ತೇನೆ..' ಅಬುಧಾಬಿ ಮಂದಿರ ನಿರ್ಮಾಣದ ಕಥೆ ತಿಳಿಸಿದ ಮೋದಿ!

ಸಾರಾಂಶ

ಯುಎಇಯಲ್ಲಿ ಆಹ್ಲಾನ್‌ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಬುಧಾಬಿಯಲ್ಲಿ ನಿರ್ಮಾಣವಾದ ಮೊದಲ ಹಿಂದೂ ದೇವಸ್ಥಾನದ ಹಿಂದಿನ ಕಥೆಯನ್ನು ತಿಳಿಸಿದರು. ಯುಎಇ ಅಧ್ಯಕ್ಷ ನೀಡಿದ ಬೆಂಬಲವನ್ನು ಸ್ಮರಿಸಿಕೊಂಡರು.

ನವದೆಹಲಿ (ಫೆ.13): ಎರಡು ದಿನಗಳ ಭೇಟಿಗಾಗಿ ಯುಎಇಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಬುಧಾಬಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಆಹ್ಲಾನ್‌ ಮೋದಿ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ನನ್ನ ಕುಟುಂಬ ಸದಸ್ಯರನ್ನು ಭೇಟಿಯಾಗಲು ಬಂದಿದ್ದೇನೆ, ನೀವು ಹುಟ್ಟಿದ ಮಣ್ಣಿನ ಪರಿಮಳವನ್ನು ತಂದಿದ್ದೇನೆ ಮತ್ತು 140 ಕೋಟಿ ಜನರ ಸಂದೇಶವನ್ನು ತಂದಿದ್ದೇನೆ. ಭಾರತವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂಬ ಸಂದೇಶ ನೀಡಲು ಬಂದಿದ್ದೇನೆ ಎಂದು ಮೋದಿ ಮಾತನಾಡಿದರು. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಯಲ್ಲಿ ನಿರ್ಮಾಣವಾಗಿರುವ ಮೊಟ್ಟಮೊದಲ ದೇವಸ್ಥಾನವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಮಯದಲ್ಲಿ ಯುಎಇ ಅಧ್ಯಕ್ಷ ಶೇಖ್‌ ಮೊಹಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್‌ ಅವರು ನೀಡಿದ ಬೆಂಬಲವನ್ನು ಮೋದಿ ಈ ವೇಳೆ ಸ್ಮರಿಸಿಕೊಂಡರು.

ನನಗೆ ಖಂಡಿತವಾಗಿಯೂ ಗೊತ್ತಿದೆ. ಆದರೆ, ನಿಮ್ಮನ್ನು ಬಹಳ ಪ್ರೀತಿಯಿಂದ ಅವರು ನೋಡಿಕೊಳ್ಳುತ್ತಿದ್ದಾರೆ. 2015ರಲ್ಲಿ ನಾನು ನಿಮ್ಮೆಲ್ಲರ ಪರವಾಗಿ ಒಂದು ಬೇಡಿಕೆಯನ್ನು ಮುಂದಿಟ್ಟಿದ್ದೆ. ಅಬುಧಾಬಿಯಲ್ಲಿ ಒಂದು ದೇವಸ್ಥಾನ ಕಟ್ಟಲು ಸಾಧ್ಯವಾಗಬಹುದೇ ಎಂದು ಅವರನ್ನು ಕೇಳಿದ್ದೆ. ಅವರು ಒಂದು ನಿಮಿಷ ಕೂಡ ಯೋಚನೆ ಮಾಡದೇ ಖಂಡಿತವಾಗಿಯೂ ಕಟ್ಟೋಣ ಎಂದು ಹೇಳಿದ್ದರು. ಅದರೊಂದಿಗೆ ನೀವು ಯಾವ ಪ್ರದೇಶವನ್ನು ತೋರಿಸಿ ಅಲ್ಲಿ ಒಂದು ಗರೆ ಎಳೆಯುತ್ತೀರೋ ಅದೇ ಪ್ರದೇಶದಲ್ಲಿ ಮಂದಿರ ನಿರ್ಮಾಣವಾಗಲಿದೆ ಎಂದಿದ್ದರು. ಈಗ ಅಬುಧಾಬಿಯಲ್ಲಿ ಈ ದಿವ್ಯ ಹಾಗೂ ಐತಿಹಾಸಿಕ ದೇವಸ್ಥಾನವನ್ನು ಉದ್ಘಾಟನೆ ಮಾಡುವ ಸಮಯ ಬಂದಿದೆ. ಭಾರತ ಮತ್ತು ಯುಇಎ ಬಂಧ ಎಷ್ಟು ಬಿಗಿಯಾಗಿದೆ ಎಂದರೆ, ಭೂಮಿಯ ಮೇಲಿನ ನಮ್ಮ ನಂಟು ಈಗ ಬಾಹ್ಯಾಕಾಶದಲ್ಲೂ ಕಾಣುತ್ತಿದೆ ಎಂದು ಮೋದಿ ಯುಎಇ ಅಧ್ಯಕ್ಷರನ್ನು ಹೊಗಳಿದರು.

ಪ್ರಧಾನಿ ಮೋದಿ ಆತ್ಮೀಯವಾಗಿ ಸ್ವಾಗತಿಸಿದ UAE ಅಧ್ಯಕ್ಷ , ಗಾರ್ಡ್ ಆಫ್ ಹಾನರ್ ಗೌರವ!

ಅದರೊಂದಿಗೆ ಯುಎಇಯ ತಮ್ಮ ಮೊದಲ ಭೇಟಿಯನ್ನು ಪ್ರಧಾನಿ ಸ್ಮರಿಸಿಕೊಂಡರು. '2015ರಲ್ಲಿ ನಾನು ಯುಎಇಗೆ ಮೊದಲ ಭೇಟಿ ನೀಡಿದ್ದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ಸಮವಾಗಿದ್ದವು. ಅಂದಾಜು ಮೂರು ದಶಕದ ಬಳಿಕ ಯುಎಇಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ನಾನಾಗಿದ್ದೆ. ವಿಶ್ವದ ರಾಜತಾಂತ್ರಿಕತೆ ನನಗೆ ಬಹಳ ಹೊಸದಾಗಿತ್ತು. ಆ ಸಮಯದಲ್ಲಿ ಯುಎಇಗೆ ಬಂದಾಗ ನನ್ನನ್ನು ಅಂದಿನ ಕ್ರೌನ್‌ ಪ್ರಿನ್ಸ್‌ ಆಗಿದ್ದ ಹಾಗೂ ಈಗ ಯುಎಇ ಅಧ್ಯಕ್ಷರಾಗಿರುವ ಇವರು ತಮ್ಮ ಐವರು ಸಹೋದರರೊಂದಿಗೆ ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ್ದರು. ಅಂದು ಅವರ ಅಪ್ಪುಗೆ ಹಾಗೂ ಕಣ್ಣಲ್ಲಿನ ಬೆಳಕನ್ನು ನಾನು ಎಂದೂ ಮರೆಯೋದಿಲ್ಲ. ಅಂದು ಅವರು ನೀಡಿದ್ದ ಸ್ವಾಗತ ನನ್ನೊಬ್ಬನಿಗೆ ಮಾತ್ರವೇ ಆಗಿರಲಿಲ್ಲ. ಅದು 140 ಕೋಟಿ ಭಾರತೀಯರಿಗಾಗಿತ್ತು ಎಂದು ಮೋದಿ ಹೇಳಿದ್ದಾರೆ.

'ಯುಎಇ ನನ್ನ ಮತ್ತೊಂದು ಮನೆಯ ರೀತಿ..' ದೇವಸ್ಥಾನ ಉದ್ಘಾಟನೆಗೂ ಮುನ್ನ ಮೋದಿ ಮಾತು!

"ನಮ್ಮ ಸಂಬಂಧವೆಂದರೆ ಪ್ರತಿಭೆ, ನಾವೀನ್ಯತೆ ಮತ್ತು ಸಂಸ್ಕೃತಿ. ಹಿಂದೆ, ನಾವು ನಮ್ಮ ಸಂಬಂಧಗಳನ್ನು ಎಲ್ಲಾ ದಿಕ್ಕುಗಳಲ್ಲಿಯೂ ಪುನಶ್ಚೇತನಗೊಳಿಸಿದ್ದೇವೆ. ಎರಡೂ ದೇಶಗಳು ಒಟ್ಟಿಗೆ ನಡೆದಿವೆ ಮತ್ತು ಇಂದು ಯುಎಇ ಭಾರತದ ಮೂರನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.  ಇಂದು ಯುಎಇ ಏಳನೇ ಅತಿ ದೊಡ್ಡ ಹೂಡಿಕೆದಾರ ರಾಷ್ಟ್ರವಾಗಿದೆ.ಎರಡೂ ದೇಶಗಳು ಈಸ್ ಆಫ್ ಲಿವಿಂಗ್ ಮತ್ತು ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ನಲ್ಲಿ ಸಾಕಷ್ಟು ಸಹಕಾರ ನೀಡುತ್ತಿವೆ. ಇಂದಿಗೂ ನಾವು ಸಹಿ ಹಾಕಿರುವ ಎಂಒಯುಗಳನ್ನು  ಬದ್ಧತೆಯಿಂದ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ನಾವು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಸಂಯೋಜಿಸುತ್ತಿದ್ದೇವೆ. ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಭಾರತ ಮತ್ತು ಯುಎಇ ಪಾಲುದಾರಿಕೆ ನಿರಂತರವಾಗಿ ಬಲಗೊಳ್ಳುತ್ತಿದೆ. ಸಮುದಾಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಭಾರತ-ಯುಎಇ ಸಾಧಿಸಿರುವುದು ಜಗತ್ತಿಗೆ ಮಾದರಿಯಾಗಿದೆ' ಎಂದು ಮೋದಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು