ಐದು ಶತಮಾನಗಳ ಹೋರಾಟದ ಬಳಿಕ ವಿವಾದಗಳು ಬಗೆಹರಿದು ಭವ್ಯ ರಾಮ ಮಂದಿರ ಉದ್ಘಾಟನೆಯಾಗಿದೆ. ಭಾರತ ಹಾಗೂ ವಿದೇಶಗಳಲ್ಲೂ ಈ ಸಂಭ್ರಮ ಮನೆ ಮಾಡಿದೆ. ಕೆಲವರು ವಿರೋಧ ವ್ಯಕ್ತಪಡಿಸಿದ ಉದಾಹರಣೆಗಳೂ ಇವೆ. ಇದರ ನಡುವೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ರಧಾನಿ ಮೋದಿಗೆ ಪತ್ರ ಒಂದನ್ನು ಬರೆದಿದ್ದಾರೆ.
ಮುಂಬೈ(ಫೆ.14) ಶ್ರೀರಾಮನ ಭವ್ಯ ಮಂದಿರ ಕೆಡವಿದ ಔರಂಗಬೇಜ್ 1528ರಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡಿದ್ದ. ಬರೋಬ್ಬರಿ 500 ವರ್ಷಗಳ ಕಾಲ ರಾಮ ಮಂದಿರಕ್ಕಾಗಿ ಹೋರಾಟ ನಡೆದಿದೆ. ಬಲಿದಾನವಾಗಿದೆ. ತಲೆ ತಲೆಮಾರುಗಳು ಶ್ರೀರಾಮನ ಜಪದಲ್ಲೇ ಕಾಲವಾಗಿದ್ದಾರೆ. ಈ ಹೋರಾಟಕ್ಕೆ ವೇಗ ನೀಡಿದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಮಾಡಿ ಲೋಕಾರ್ಪಣೆಗೊಳಿಸಿದೆ. ಇಡೀ ದೇಶವೇ ಸಂಭ್ರಮದಲ್ಲಿ ಮುಳುಗಿದೆ. ವಿದದೇಶಗಳಲ್ಲೂ ಸಂಭ್ರಮ ಮನೆ ಮಾಡಿದೆ. ಆದರೆ ಕೆಲ ವಿರೋಧಗಳು, ಅಸಮಾಧಾನಗಳು ವ್ಯಕ್ತವಾಗಿದೆ. ಇದೀಗ ಮಂದಿರ ಲೋಕಾರ್ಪಣೆಗೊಂಡು ತಿಂಗಳಾಗುತ್ತಾ ಬಂದಿದೆ. ಇದರ ನಡುವೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ರಧಾನಿ ನರೇಂದ್ರ ಮೋದಿಗೆ ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕುರಿತು ಪತ್ರ ಬರೆದಿದ್ದಾರೆ. 500 ವರ್ಷಗಳಿಂದ ಮಣ್ಣಾಗಿದ್ದ ಇತಿಹಾಸವನ್ನು ಪುನರುತ್ಥಾನಗೊಳಿಸಿದ ಪ್ರಧಾನಿ ಮೋದಿ ಹೆಸರು ಅಜರಾಮರ ಎಂದು ಶಿಲ್ಪಾ ಶೆಟ್ಟಿ ಬಣ್ಣಿಸಿದ್ದಾರೆ.
ಆಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಪ್ರಧಾನಿ ಮೋದಿ ನಾಯಕತ್ವವನ್ನು ಶಿಲ್ಪಾ ಶೆಟ್ಟಿ ಹಾಡಿ ಹೊಗಳಿದ್ದಾರೆ. ಪ್ರಧಾನಿ ಮೋದಿ ನಾಯಕತ್ವದಿಂದ ಭವ್ಯ ರಾಮ ಮಂದಿರ ಶ್ರೀರಾಮ ಜನ್ಮಭೂಮಿಯಲ್ಲಿ ತಲೆ ಎತ್ತಿದೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ. ಶಿಲ್ಪ ಶೆಟ್ಟಿ ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರವನ್ನು ಮಹಾರಾಷ್ಟ್ರ ಬಿಜೆಪಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
undefined
ಅಯೋಧ್ಯೆ ರಾಮ ದರ್ಶನ ಅವಧಿ ವಿಸ್ತರಣೆ: ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ದರ್ಶನ
ಹಿಂದಿ ಭಾಷೆಯಲ್ಲಿ ಪ್ರಧಾನಿನಿಗೆ ಬರೆದಿರುವ ಪತ್ರದಲ್ಲಿ, ಕೆಲವರು ಇತಿಹಾಸ ಓದುತ್ತಾರೆ. ಹಲವರು ಅದರಿಂದ ಕಲಿಯುತ್ತಾರೆ. ನಿಮ್ಮಂತಹ ವ್ಯಕ್ತಿಗಳಿಂದ ಹುದುಗಿ ಹೋಗಿರುವ ಇತಿಹಾಸವನ್ನು ಮರುಸೃಷ್ಟಿಸುವ ಸಾಮರ್ಥ್ಯ ಹೊಂದಿರುತ್ತಾರೆ. ರಾಮಜನ್ಮಭೂಮಿಯಲ್ಲಿ 500 ವರ್ಷಗಳ ಇತಿಹಾಸವನ್ನು ಮತ್ತೆ ಹೊಸ ಅಧ್ಯಾಯದೊಂದಿಗೆ ಬರೆದಿದ್ದೀರಿ. ಇದಕ್ಕಾಗಿ ನಾನು ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಹೆಸರು ರಾಮ ಮಂದಿರದೊಂದಿಗೆ ಅಜರಾಮರ. ಈ ಮಹತ್ತರ ಸಾಧನೆ ಮಾಡಿ ನಮಗೆ ಶ್ರೀರಾಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಪ್ರಧಾನಿ ಮೋದಿಗೆ ಧನ್ಯವಾದ ಎಂದು ಶಿಲ್ಪಾ ಶೆಟ್ಟಿ ಪತ್ರದಲ್ಲಿ ಹೇಳಿದ್ದಾರೆ.
सुप्रसिध्द अभिनेत्री जी यांनी नुकताच पंतप्रधान नरेंद्र मोदीजींना पत्र लिहून त्यांचे आभार मानले.
५ शतकांपासून श्रीरामांना वनवास घडत होता. अखेर तो वनवास संपला. तेही मोदीजींच्या प्रयत्नांमुळे.. यासाठीच शिल्पाजींनी पंतप्रधानांचे आभार मानले आहेत.… pic.twitter.com/LTqpjGolLK
ಭವ್ಯ ರಾಮ ಮಂದಿರದ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆದಿತ್ತು. ಪ್ರಧಾನಿ ಮೋದಿ ತಮ್ಮ ಅಮೃತ ಹಸ್ತದಿಂದ ಪ್ರಾಣಪ್ರತಿಷ್ಠೆ ನೆರವೇರಿಸಿದ್ದರು. ಇದಕ್ಕಾಗಿ ಪ್ರಧಾನಿ ಮೋದಿ 11 ದಿನಗಳ ಕಠಿಣ ಉಪವಾಸ ವೃತ ಕೈಗೊಂಡಿದ್ದರು.
ಅರಬ್ ಸಂಸ್ಥಾನ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಸ್ಥಾನ ಉದ್ಘಾಟಿಸಿದ ಮೋದಿ!