ರಾಜಮಾತೆ ಸಿಂಧಿಯಾ ಜಯಂತಿ, 100 ರೂ. ನಾಣ್ಯ ಬಿಡುಗಡೆ ಮಾಡಿದ ಮೋದಿ!

By Suvarna News  |  First Published Oct 12, 2020, 12:51 PM IST

ರಾಜಮಾತೆ ವಿಜಯರಾಜೆ ಸಿಂಧಿಯಾ 100ನ ನೇ ಜನ್ಮ ಜಯಂತಿ| 100 ರೂ. ನಾಣ್ಯವನ್ನು ಬಿಡುಗಡೆಗೊಳಿಸಿದ ಪಿಎಂ ಮೋದಿ| ವಿಡಿಯೋ ಕಾನ್ಫರೆನ್ಸ್‌ ಕಾರ್ಯಕ್ರಮದಲ್ಲಿ ರಾಜಮಾತೆ ಬಗ್ಗೆ ಮೋದಿ ಮಾತು


ನರೇಂದ್ರ ಮೋದಿ(ಆ.12) ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ರಾಜಮಾತೆ ವಿಜಯಾ ರಾಜೆ ಸಿಂಧಿಯಾರವರ 100 ಜಯಂತಿಯಂದು 100 ರೂ. ನಾಣ್ಯವನ್ನು ಬಿಡುಗಡೆಗೊಳಿಸಿದ್ದಾರೆ. ಈ ವೇಳೆ ಮಾತನಾಡಿದ ಪಿಎಂ ಮೋದಿ, ರಾಜಮಾತೆ ಯಾವತ್ತೂ ನಾನು ಒಬ್ಬ ಪುತ್ರನ ಅಲ್ಲ, ಸಹಸ್ತಾರು ಪುತ್ರರ ತಾಯಿ ಎನ್ನುತ್ತಿದ್ದರು. ನಾವೆಲ್ಲರೂ ಅವರ ಮಕ್ಕಳೇ, ಅವರ ಕುಟುಂಬ ಮಂದಿಯೇ ಆಗಿದ್ದೇವೆ. ರಾಜಮಾತೆಯ ಜಯಂತಿಯಂದು ಅವರ ನೆನಪಿಗೆ 100ರೂ. ಬಿಡುಗಡೆಗೊಳಿಸಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟವೇ ಸರಿ ಎಂದು ಹೇಳಿದ್ದಾರೆ.

ರಾಜಮಾತೆ ವಿಜಯರಾಜೆ ಸಿಂಧಿಯಾ ಓರ್ವ ಪ್ರಮುಖ ನಾಯಕಿಯಾಗಿದ್ದರು ಹಾಗೂ ಕುಶಲ ವ್ಯಕ್ತಿತ್ವವುಳ್ಳವರಾಗಿದ್ದರು. ರಾಷ್ಟ್ರದ ಭವಿಷ್ಯಕ್ಕಾಗಿ ಅವರು ತಮ್ಮ ವರ್ತಮಾನವನ್ನು ಸಮರ್ಪಿಸಿದ್ದರು. ದೇಶದ ಮುಂದಿನ ಪ್ರಜೆಗಳಿಗಾಗಿ ಅವರು ತಮ್ಮೆಲ್ಲಾ ಸುಖವನ್ನು ತ್ಯಾಗ ಮಾಡಿದ್ದರು ಎಂದಿದ್ದಾರೆ.

Latest Videos

undefined

ರಾಜಮಾತೆಯ ಆಶೀರ್ವಾದ ದೇಶ ಅಭಿವೃದ್ಧಿ ಹಾದಿಯಲ್ಲಿ

ರಾಜಮಾತೆಯ ಆಶೀರ್ವಾದದಿಂದ ದೇಶವಿಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಹಳ್ಳಿ, ಬಡವರು, ದಲಿತ, ಸಂತ್ರಸ್ತ, ಶೋಷಣೆಗೀಡಾದ ಮಹಿಳೆಯರು ಇಂದು ದೇಶದ ಮೊದಲ ಆದ್ಯತೆಯಾಗಿದ್ದಾರೆ. ಇನ್ನು ಆರ್ಟಿಕಲ್  370 ರದ್ದುಗೊಳಿಸಿ ದೇಶ ಅವರ ಬಹುದೊಡ್ಡ ಕನಸನ್ನು ಸಾಕಾರಗೊಳಿಸಿದೆ. ಇನ್ನು ರಾಮಜನ್ಮಭೂಮಿಗೆ ಅವರು ಸಂಘರ್ಷ ನಡೆಸಿದ್ದು, ಅವರ ಜನ್ಮ ಜಯಂತಿಯ ವರ್ಷವೇ ಅವರ ಈ ಕನಸೂ ಸಾಕಾರ ಹಂತದತ್ತ ಸಾಗುತ್ತಿರುವುದು ನಿಜಕ್ಕೂ ಅದ್ಭುತ ವಿಚಾರ ಎಂದು ಮೋದಿ ಹೇಳಿದ್ದಾರೆ.
 

click me!