Breaking: 2028 ರಲ್ಲಿ COP33 ಹವಾಮಾನ ಶೃಂಗಸಭೆ ಆಯೋಜನೆಗೆ ಭಾರತ ಸಿದ್ಧ: ಪ್ರಧಾನಿ ಮೋದಿ ಪ್ರಸ್ತಾಪ

By BK Ashwin  |  First Published Dec 1, 2023, 4:47 PM IST

2028 ರಲ್ಲಿ COP33 ಶೃಂಗಸಭೆಯನ್ನು ಆಯೋಜಿಸಲು ಸಿದ್ಧ ಎಂದು ಪ್ರಧಾನಿ ಮೋದಿ ಘೋಷಿಸಿದ್ದು, ಮಹತ್ವದ ಪ್ರಸ್ತಾಪ ಮಾಡಿದ್ದಾರೆ.


ದುಬೈ (ಡಿಸೆಂಬರ್ 1, 20223): ದುಬೈನಲ್ಲಿ ವಿಶ್ವ ಹವಾಮಾನ ಶೃಂಗಸಭೆ ನಡೆಯುತ್ತಿದ್ದು, ಈ ಮಹತ್ವದ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಇಂದಿನ ಶೃಂಗಸಭೆಯಲ್ಲಿ COP28 ನ ಉನ್ನತ ಮಟ್ಟದ ವಿಭಾಗದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಪ್ರಸ್ತಾಪ ಮಾಡಿದ್ದಾರೆ. 

2028 ರಲ್ಲಿ COP33 ಶೃಂಗಸಭೆಯನ್ನು ಆಯೋಜಿಸಲು ಸಿದ್ಧ ಎಂದು ಪ್ರಧಾನಿ ಮೋದಿ ಘೋಷಿಸಿದ್ದು, ಮಹತ್ವದ ಪ್ರಸ್ತಾಪ ಮಾಡಿದ್ದಾರೆ.  ಶೃಂಗಸಭೆಯ 2ನೇ ದಿನವಾದ ಇಂದು ಹವಾಮಾನ ನ್ಯಾಯ, ಹವಾಮಾನ ಹಣಕಾಸು ಮತ್ತು ನಾನು ಎತ್ತಿರುವ ಹಸಿರು ಸಾಲದಂತಹ ವಿಷಯಗಳಿಗೆ ನಿಮ್ಮ ನಿರಂತರ ಬೆಂಬಲಕ್ಕಾಗಿ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹವಾಮಾನ ಶೃಂಗಸಭೆಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಹೇಳಿದ್ದರು. 

Tap to resize

Latest Videos

ಇದನ್ನು ಓದಿ: ಸಿಒಪಿ-28 ಶೃಂಗಸಭೆ, ದುಬೈಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ!

ಈ ವೇಳೆ, ಭಾರತದ ಪರಿಸರ ಬದ್ಧತೆಗಳನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ, 2030 ರ ವೇಳೆಗೆ ಭಾರತವು ತನ್ನ GDP ಯ ಹೊರಸೂಸುವಿಕೆಯ ತೀವ್ರತೆಯನ್ನು 45 ಪ್ರತಿಶತದಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ನಾವು ಪಳೆಯುಳಿಕೆಯೇತರ ಇಂಧನಗಳ ಪಾಲನ್ನು 50 ಪ್ರತಿಶತಕ್ಕೆ ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಹೆಚ್ಚುವರಿಯಾಗಿ ಉನ್ನತ ಮಟ್ಟದ ವಿಭಾಗದಲ್ಲಿ ತಮ್ಮ ಭಾಷಣದಲ್ಲಿ ಗ್ರೀನ್ ಕ್ರೆಡಿಟ್ ಇನಿಶಿಯೇಟಿವ್‌ನ ಕಲ್ಪನೆಯನ್ನು ಪರಿಚಯಿಸಿದ್ದು, ಪರಿಸರ ಉಸ್ತುವಾರಿ ಕಡೆಗೆ ಮತ್ತೊಂದು ಪೂರ್ವಭಾವಿ ಹೆಜ್ಜೆಯನ್ನು ಪ್ರಸ್ತಾಪಿಸಿದರು.

ಒಟ್ಟಾರೆ ಪ್ರಧಾನಿ ದುಬೈನಲ್ಲಿ ಸುಮಾರು 21 ಗಂಟೆಗಳ ಕಾಲ ಕಳೆಯಲಿದ್ದು, ಮತ್ತು ಈ ವೇಳೆ 4 ಭಾಷಣ, 2 ಹವಾಮಾನ ಘಟನೆಗಳ ವಿಶೇಷ ಉಪಕ್ರಮ, 7 ದ್ವಿಪಕ್ಷೀಯ ಸಭೆಗಳಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ, ವಿಶ್ವ ನಾಯಕರೊಂದಿಗೆ ಅನೌಪಚಾರಿಕ ಸಭೆಗಳನ್ನು ಮಾಡುತ್ತಾರೆ ಎಂದೂ ತಿಳಿದುಬಂದಿದೆ.  

ಬೆಂಗಳೂರಲ್ಲಿ ನಮೋ: ತೇಜಸ್ ಯುದ್ಧ ವಿಮಾನದಲ್ಲಿ ಪ್ರಧಾನಿ ಮೋದಿ ಹಾರಾಟ

COP-28 ರ ವಿಶ್ವ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ದುಬೈಗೆ ತೆರಳಿದರು. ಪ್ರಧಾನಿ ಮೋದಿ ದುಬೈನಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ಶೃಂಗಸಭೆಯ ವಿವರಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ದುಬೈಗೆ ಹೊರಡುತ್ತಿದ್ದೇನೆ, ಅಲ್ಲಿ ನಾನು COP-28 ಶೃಂಗಸಭೆಯಲ್ಲಿ ಭಾಗವಹಿಸಲಿದ್ದೇನೆ. ಈ ವೇದಿಕೆಯು ಹವಾಮಾನ ಬದಲಾವಣೆಯ ವಿರುದ್ಧ ಗೆಲುವು ಸಾಧಿಸಲು ಮತ್ತು ಮತ್ತಷ್ಟು ಸುಸ್ಥಿರ ಅಭಿವೃದ್ಧಿಯ ಪ್ರಯತ್ನಗಳನ್ನು ಬಲಪಡಿಸುವ ಪ್ರಮುಖ ಚರ್ಚೆಗಳಿಗೆ ಸಾಕ್ಷಿಯಾಗಲಿದೆ. ನಾನು ಶೃಂಗಸಭೆಯಲ್ಲಿ ವಿವಿಧ ವಿಶ್ವ ನಾಯಕರೊಂದಿಗೆ ಸಂವಾದ ನಡೆಸಲಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

 

click me!