ಭಾರತದ ಉಜ್ವಲ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ 11 ಮಹತ್ವಾಕಾಂಕ್ಷಿ ನಿರ್ಣಯಗಳನ್ನು ಪ್ರಸ್ತಾಪಿಸಿದ್ದಾರೆ. ಮೋದಿ ಪ್ರಸ್ತಾಪಿಸಿದ ಹೊಸ ನಿರ್ಣಯಗಳೇನು?
ನವದೆಹಲಿ(ಡಿ.14) ಸಂಸತ್ತಿನಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಭಾರಿ ಜಟಾಪಟಿ ನಡೆಯುತ್ತಿದೆ. ಅದಾನಿ, ಮಣಿಪುರ, ಸಂವಿಧಾನ ಸೇರಿದಂತೆ ಕಲೆ ವಿಚಾರಗಳನ್ನು ಪ್ರಮುಖ ವಿಷಯವನ್ನಾಗಿಟ್ಟುಕೊಂಡ ಪ್ರತಿಪಕ್ಷಕ್ಕೆ ಪ್ರಧಾನಿ ಮೋದಿ ಚಾಟಿ ಬೀಸಿದ್ದಾರೆ. ತುರ್ತು ಪರಿಸ್ಥಿತಿ ಸೇರಿದಂತೆ ಕಾಂಗ್ರೆಸ್ ಸಂವಿಧಾನ ವಿರೋಧಿ ನಡೆಗಳನ್ನು ಎಳೆಳೆಯಾಗಿ ಬಿಚ್ಚಿಟ್ಟು ಪ್ರತಿಪಕ್ಷಗಳ ಬಾಯಿ ಮುಚ್ಚಿಸಿದ್ದಾರೆ. ಇದೇ ವೇಳೆ ಸಂವಿಧಾನ ಅಂಗೀಕಾರದ 75 ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ಮೋದಿ ಲೋಕಸಭೆಯಲ್ಲಿನ ಚರ್ಚೆಯಲ್ಲಿ ಕೆಲ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಈ ಪೈಕಿ ಏಕ್ ಭಾರತ್ ಶ್ರೇಷ್ಠ ಭಾರತ್ ಸೇರಿದಂತೆ 11 ಮಹತ್ವಾಕಾಂಕ್ಷೆ ನಿರ್ಣಯಗಳನ್ನು ಸಂಕಲ್ಪ ರೂಪದಲ್ಲಿ ಮಂಡಿಸಿದ್ದಾರೆ.
ಸಮಕಾಲೀನ ಸವಾಲುಗಳನ್ನು ಎದುರಿಸುವಾಗ ಸಂವಿಧಾನದ ಮೌಲ್ಯಗಳಿಗೆ ರಾಷ್ಟ್ರದ ಬದ್ಧತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ ಎಂದು ಮೋದಿ ಹೇಳಿದ್ದಾರೆ. ಮೋದಿ ಮಂಡಿಸಿದ ಸಂಕಲ್ಪಗಳು ಏಕತೆ, ಸಮಗ್ರತೆ ಮತ್ತು ಪ್ರಗತಿಯ ವಿಷಯಗಳನ್ನು ಒತ್ತಿಹೇಳುತ್ತವೆ, “ಏಕ್ ಭಾರತ್, ಶ್ರೇಷ್ಠ ಭಾರತ್ ಸೇರಿದಂತೆ 11 ಸಂಕಲ್ಪದ ವಿವರಣೆಯನ್ನೂ ಮೋದಿ ನೀಡಿದ್ದಾರೆ. ಪ್ರಮುಖ ಸಂಕಲ್ಪಗಳಲ್ಲಿ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ, ರಾಜಕೀಯದಲ್ಲಿ ಭ್ರಷ್ಟಾಚಾರವನ್ನು ಕೊನೆಗೊಳಿಸುವುದು, ಅಭಿವೃದ್ಧಿಯ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು, ಕಾನೂನು ಜಾರಿಯಲ್ಲಿ ಹೆಮ್ಮೆಯನ್ನು ಬೆಳೆಸುವುದು ಮತ್ತು ಗುಲಾಮಗಿರಿಯ ಮನಸ್ಥಿತಿಯ ಅವಶೇಷಗಳನ್ನು ನಿರ್ಮೂಲನೆ ಮಾಡುವುದು ಸೇರಿವೆ.
आज मैं इस सदन के पवित्र मंच से 11 संकल्प सदन के सामने रखना चाहता हूं...
1. चाहे नागरिक हो या सरकार हो... सभी अपने कर्तव्यों का पालन करें।
2. हर क्षेत्र, हर समाज को विकास का लाभ मिले, सबका साथ-सबका विकास हो।
3. भ्रष्टाचार के प्रति जीरो टॉलरेंस हो, भ्रष्टाचारी की सामाजिक… pic.twitter.com/WxsetJtdLd
undefined
ಮೋದಿ ಅವರು ತಮ್ಮ ಸರ್ಕಾರದ ಭರವಸೆಯನ್ನು ಪುನರುಚ್ಚರಿಸಿದರು, ಅಂಚಿನಲ್ಲಿರುವ ಸಮುದಾಯಗಳಿಗೆ ಮೀಸಲಾತಿಯನ್ನು ಕಾಯ್ದಿರಿಸಲಾಗಿದೆ. ಆದರೆ ಧರ್ಮದ ಆಧಾರದ ಮೇಲೆ ವಿಸ್ತರಿಸಲಾಗುವುದಿಲ್ಲ ಎಂದಿದ್ದಾರೆ. ಸಂವಿಧಾನದ ತತ್ವಗಳಲ್ಲಿ ಬೇರೂರಿರುವ ನಿಲುವು. ಭಾರತದ ಏಕತೆ ಮತ್ತು ಆಡಳಿತವನ್ನು ರೂಪಿಸುವಲ್ಲಿ ಸಂವಿಧಾನದ ನಿರ್ಣಾಯಕ ಪಾತ್ರವನ್ನುಮೋದಿ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಸಿನಿಮಾ ಹಾಡು ಕೇಳ್ತಾರಾ ಮೋದಿ ? ಅಲಿಯಾ ಭಟ್ ಪ್ರಶ್ನೆಗೆ ಪ್ರಧಾನಿ ಉತ್ತರವೇನು?
ಭಾರತದ ಭವಿಷ್ಯಕ್ಕಾಗಿ 11 ಸಂಕಲ್ಪಗಳು