ಯುರೋಪ್‌ನ 4 ರಾಷ್ಟ್ರಕ್ಕಿಂತ ಉತ್ತರ ಪ್ರದೇಶ ಬೆಸ್ಟ್; ಕೊರೋನಾ ನಿಯಂತ್ರಣಕ್ಕೆ ಮೋದಿ ಶಹಬ್ಬಾಷ್!

Published : Jun 26, 2020, 08:18 PM IST
ಯುರೋಪ್‌ನ 4 ರಾಷ್ಟ್ರಕ್ಕಿಂತ ಉತ್ತರ ಪ್ರದೇಶ ಬೆಸ್ಟ್; ಕೊರೋನಾ ನಿಯಂತ್ರಣಕ್ಕೆ ಮೋದಿ ಶಹಬ್ಬಾಷ್!

ಸಾರಾಂಶ

ಕೊರೋನಾ ವೈರಸ್ ನಿಯಂತ್ರಣ ಕುರಿತು ಪ್ರದಾನಿ ನರೇಂದ್ರ ಮೋದಿ ಉತ್ತರ ಪ್ರದೇಶಕ್ಕೆ ಶಹಬ್ಬಾಷ್ ಗಿರಿ ನೀಡಿದ್ದಾರೆ. ಯೂರೋಪ್‌ನ 4 ರಾಷ್ಟ್ರಗಳನ್ನು ಒಟ್ಟು ಮಾಡಿದರೂ ಉತ್ತರ ಪ್ರದೇಶವೇ  ಬೆಸ್ಟ್ ಎಂದಿದ್ದಾರೆ. ಪ್ರಧಾನಿ ನೀಡಿದ ಅಂಕಿ ಅಂಶ ಇದೀಗ  ಹೊಸ ಸಂಚಲನ ಮೂಡಿಸಿದೆ.

ನವದೆಹಲಿ(ಜೂ.26): ದೇಶದಲ್ಲಿ ಕೊರೋನಾ ವೈರಸ ಮೀತಿ ಮೀರುತ್ತಿದೆ. ಆದರೆ ಇತರ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಕಡಿಮೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಯೋಗಿ ಆದಿತ್ಯನಾಥ್ ಯುಪಿ ಸರ್ಕಾರಕ್ಕೆ ಬೆಸ್ಟ್ ಸರ್ಟಿಫಿಕೆಟ್ ನೀಡಿದ್ದಾರೆ. ಯುರೋಪ್‌ನ ನಾಲ್ಕು ದೇಶಗಳನ್ನು ಒಟ್ಟಗೂಡಿಸಿದರೆ 24 ಕೋಟಿ ಜನಂಖ್ಯೆ ಆಗಲಿದೆ. ಇತ್ತ ಉತ್ತರ ಪ್ರದೇಶದಲ್ಲೂ 24 ಕೋಟಿ ಜನ ಸಂಖ್ಯೆ ಇದೆ ಆದರೆ ಕೊರೋನಾ ಸಾವಿನ ಪ್ರಮಾಣ ಯುಪಿಯಲ್ಲಿ ಅತ್ಯಂತ ಕಡಿಮೆ ಎಂದಿದ್ದಾರೆ.

ಕರ್ನಾಟಕದಲ್ಲಿ ಶುಕ್ರವಾರ ಕೊರೋನಾ ಸ್ಫೋಟ: 11 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಯುರೋಪ್ ರಾಷ್ಟ್ರಗಳಾದ ಇಂಗ್ಲೆಂಡ್ ಫ್ರಾನ್ಸ್, ಇಟಲಿ ಹಾಗೂ ಸ್ಪೇನ್ ಜನಸಂಖ್ಯೆ ಒಟ್ಟು 24 ಕೋಟಿ. ಉತ್ತರ ಪ್ರದೇಶದಲ್ಲಿ 24 ಕೋಟಿ ಜನಸಂಖ್ಯೆ ಇದೆ. ಆದರೆ ಯುರೋಪ್‌ನ 4 ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಸಾವಿನ ಸಂಖ್ಯೆ 1,30,000. ಇತ್ತ ಉತ್ತರ ಪ್ರದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ 600.

ಬೆಂಗಳೂರಲ್ಲಿ ಲಾಕ್‌ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ!

ಸಾವಿನ ಪ್ರಮಾಣ ಕಡಿಮೆ ಇದೆ ನಿಜ. ಆದರೆ ಪ್ರತಿ ಜೀವಕ್ಕೂ ಅಷ್ಟೇ ಬೆಲೆ ಇದೆ. ಕಡಿಮೆ ಸಾವು ಎಂದು ಸಮಾಧಾನ ಪಟ್ಟುಕೊಳ್ಳುವುದಲ್ಲ. ಬದಲಾಗಿ ಒಂದೂ ಸಾವಾಗದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಆತ್ಮನಿರ್ಭರ್ ಉತ್ತರ ಪ್ರದೇಶ ರೋಝ್‌ಗಾರ್ ಅಭಿಯಾನ ಉದ್ಘಾಟಿಸಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಉತ್ತರ ಪ್ರದೇಶ ನಿವಾಸಿಗಳ ಜೊತೆ ಮಾತನಾಡಿದ ಮೋದಿ, ಕೊರೋನಾ ಹೊಡೆದೋಡಿಸಲು ಪ್ರತಿಯೊಬ್ಬ ನಾಗರೀಕ ಸಹಕರಿಸಬೇಕು ಎಂದು ಮನವಿ ಮಾಡಿದರು. ಯೋಗಿ ಆದಿತ್ಯನಾಥ್ ಸರ್ಕಾರ ಕೊರೋನಾ ವೈರಸ್ ವಿರುದ್ಧ ಶಕ್ತವಾಗಿ ಹೋರಾಡುತ್ತಿದೆ. ಇದಕ್ಕೆ ನಿಮ್ಮ ಬೆಂಬಲವೂ ಬೇಕಿದೆ. ಪ್ರತಿಯೊಬ್ಬ ಉತ್ತರ ಪ್ರದೇಶದ ಪ್ರಜೆಯೂ ಕೊರೋನಾ ವಾರಿಯರ್. ಹೀಗಾಗಿ ಸಾಕಷ್ಟು ಎಚ್ಚರ ವಹಿಸಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ