ನವದೆಹಲಿ(ಫೆ.27): ಉತ್ತರ ಪ್ರದೇಶದ ಚುನಾವಣಾ ರ‍್ಯಾಲಿ ಮುಗಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಪರಿಸ್ಥಿತಿ ಕುರಿತು ಉನ್ನಟ ಮಟ್ಟದ ಸಭೆ ನಡೆಸಿದ್ದಾರೆ. ಉಕ್ರೇನ್‌ನಲ್ಲಿನ ಸದ್ಯದ ಪರಿಸ್ಥಿತಿ ಕುರಿತು ವಿವರಣೆ ಪಡೆದುಕೊಂಡಿದ್ದರೆ.ಇದೇ ವೇಳೆ ಉಕ್ರೇನ್‌ನಲ್ಲಿರುವ ಭಾರತೀಯ ನಾಗರೀಕರು, ವಿದ್ಯಾರ್ಥಿಗಳ ರಕ್ಷಣೆ ಕುರಿತು ಮೋದಿ ಚರ್ಚಿಸಿದ್ದಾರೆ.
ಉತ್ತರ ಪ್ರದೇಶದ ದಿಯೋರಿಯಾದಲ್ಲಿ ಆಯೋಜಿಸಿದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಒಂದು ನಿಮಿಷ ತಡ ಮಾಡದೆ ತಕ್ಕ ಸಮಯದಲ್ಲಿ ಉಕ್ರೇನ್ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
undefined
Prime Minister Narendra Modi will hold a high-level meeting on the Ukraine issue.
(File Pic) pic.twitter.com/fMRSQCaOe7
ಯುಪಿ ಚುನಾವಣಾ ರ‍್ಯಾಲಿಯಲ್ಲಿ ಮೋದಿ:
ಉಕ್ರೇನ್ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆಗೂ ಕೆಲವೇ ನಿಮಿಷಗಳ ಮುನ್ನ ಪ್ರಧಾನಿ ಮೋದಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ್ದರು. ಸಾಮಾಜವಾದಿ ಪಾರ್ಟಿ, ಕಾಂಗ್ರೆಸ್ ಸೇರಿದಂತೆ ವಿಪಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಉತ್ತರ ಪ್ರದೇಶ ಚುನಾವಣೆ ಕದನ ರಂಗೇರಿದೆ. ದಿಯೋರಿಯಾದಲ್ಲಿ ಆಯೋದಿಸಿದ ಬಿಜೆಪಿ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದರು. ಭಾರತದ ರಾಜಕಾರಣ ಯಾವ ರೀತಿ ಕೀಳು ಮಟ್ಟಕ್ಕೆ ಇಳಿದಿದೆ ಅನ್ನೋದನ್ನು ಊಹಿಸಲು ಸಾಧ್ಯವಿಲ್ಲ. ನನ್ನ ಸಾವಿಗಾಗಿ ಕಾಶಿ ವಿಶ್ವನಾಥನದಲ್ಲಿ ಪಾರ್ಥನೆ ಮಾಡಲಾಗಿದೆ. ಇದರ್ಥ ನಾನು ಸಾಯುವವರೆಗೂ ಕಾಶಿಯನ್ನು ಬಿಡುವುದಿಲ್ಲ, ಕಾಶಿ ಜನ ನನ್ನನ್ನು ಬಿಡುವುದಿಲ್ಲ ಎಂದು ಮೋದಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಕಾಶಿಯಲ್ಲಿ ನನಗೆ ಕಾಶಿ ವಿಶ್ವನಾಥನ ಸೇವೆ ಮಾಡಲು ಸೌಭ್ಯಾಗ್ಯ ಸಿಕ್ಕಿದೆ. ಕಾಶಿ ವಿಶ್ವನಾಥನ ಸೇವೆ ಮಾಡುತ್ತಾ ಸಾವಾದರೆ ಅದಕ್ಕಿಂತ ಸೌಭ್ಯಗ್ಯ ಬೇರೆ ಏನು ಬೇಕಿದದೆ ಎಂದು ಮೋದಿ ರ‍್ಯಾಲಿಯಲ್ಲಿ ಗುಡುಗಿದ್ದಾರೆ. ಸಮಾಜವಾದಿ ಪಾರ್ಟಿ, ಕಾಂಗ್ರೆಸ್ ಪಕ್ಷಗಳು ಉಗ್ರರ ವಿರುದ್ದ ಸಹಾನೂಭೂತಿ ತೋರಿ ಆಡಳಿತ ನಡೆಸಿದೆ. ಇದು ಬಿಜೆಪಿ ಸರ್ಕಾರ ಇಲ್ಲಿ ರಾಷ್ಟ್ರಭಕ್ತಿಗೆ ಮೊದಲ ಅದ್ಯತೆ ಎಂದು ಮೋದಿ ಹೇಳಿದ್ದಾರೆ.
ಮೋದಿ ತುರ್ತು ಸಂಪುಟ ಸಭೆ
ರಷ್ಯಾ- ಉಕ್ರೇನ್ ಯುದ್ಧದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಗುರುವಾರ(ಫೆ.24) ರಾತ್ರಿ ಭದ್ರತೆಗೆ ಸಂಬಂಧಿತ ಸಂಪುಟ ಸಮಿತಿ ಸಭೆ ನಡೆಸಿದ್ದರು.ಈ ವೇಳೆ ಉಕ್ರೇನಿನಲ್ಲಿ ನೆಲೆಸಿದ ಭಾರತೀಯರ ಸುರಕ್ಷತೆ, ಭದ್ರತೆ ಹಾಗೂ ಅವರನ್ನು ಉಕ್ರೇನಿನಿಂದ ಸ್ಥಳಾಂತರಗೊಳಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ. ಉಕ್ರೇನ್-ರಷ್ಯಾ ಯುದ್ಧದಿಂದ ಜಾಗತಿಕ ಮತ್ತು ಭಾರತದ ಆರ್ಥಿಕತೆ ಮೇಲಾಗುವ ಪರಿಣಾಮಗಳು ಮತ್ತು ಅವುಗಳನ್ನು ನಿಯಂತ್ರಿಸುವ ವಿಚಾರ ಸಂಬಂಧ ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಸಭೆ ನಡೆದಿದೆ. ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಪುಟಿನ್ ಜತೆ ಮೋದಿ ಚರ್ಚೆ
ಯುದ್ಧ ನಿಲ್ಲಿಸಲು ಮಧ್ಯಪ್ರವೇಶ ಮಾಡುವಂತೆ ಉಕ್ರೇನ್ ಮೊರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ನೇರ ದೂರವಾಣಿ ನಡೆಸಿದ್ದಾರೆ. ಗುರುವಾರ(ಫೆ.24) ರಾತ್ರಿ ಮೋದಿ ಕರೆ ಮಾಡಿದ ವೇಳೆ, ಇಡೀ ಘಟನಾವಳಿಯ ಕುರಿತು ಸ್ವತಃ ಪುಟಿನ್ ಮಾಹಿತಿ ನೀಡಿದ್ದಾರೆ. ಈ ವೇಳೆ ಎರಡೂ ದೇಶಗಳ ನಡುವೆ ಏನೇ ಭಿನ್ನಾಭಿಪ್ರಾಯ ಇದ್ದರೂ, ಅದನ್ನು ಮಾತುಕತೆ ಮೂಲಕವೇ ಬಗೆ ಹರಿಸಿಕೊಳ್ಳಬೇಕು. ತಕ್ಷಣವೇ ಹಿಂಸಾಚಾರ ಸ್ಥಗಿತಕ್ಕೆ ಎರಡೂ ಬಣಗಳು ಮುಂದಾಗಬೇಕು. ಸಮಸ್ಯೆ ಇತ್ಯರ್ಥಕ್ಕೆ ರಾಜತಾಂತ್ರಿಕ ಮಾರ್ಗ ಅನುಸರಿಸಬೇಕು ಎಂದು ಮೋದಿ ಸಲಹೆ ನೀಡಿದ್ದರು.