ಪ್ರಧಾನಿ ಮೋದಿ ನೆದರ್ಲೆಂಡ್‌ ಡೀಲ್‌ನ ಫಲ ಬೆಂಗಳೂರಿಗೆ! ಹೆಸರಘಟ್ಟದಲ್ಲಿ ಡಚ್‌ ಡೈರಿ ತರಬೇತಿ ಹಬ್‌ ಸ್ಥಾಪನೆ! ರೈತರಿಗೆ ಹೇಗೆ ಲಾಭ ಗೊತ್ತಾ?

Kannadaprabha News   | Kannada Prabha
Published : May 19, 2026, 06:29 AM IST
PM Modi Netherlands deal bennur hesaraghatta dutch dairy training hub benefiits for farmer

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರ ನೆದರ್ಲೆಂಡ್ ಭೇಟಿಯ ವೇಳೆ, ಬೆಂಗಳೂರಿನ ಹೆಸರಘಟ್ಟದಲ್ಲಿ ಇಂಡೋ-ಡಚ್ ಹೈನುಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಕೇಂದ್ರವು, ಹೈನುಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ನೆದರ್ಲೆಂಡ್‌ನ ತಂತ್ರಜ್ಞಾನ ಮತ್ತು ಪರಿಣತಿಯನ್ನು ಭಾರತೀಯ ರೈತರಿಗೆ ಸಿಗಲಿದೆ.

ನವದೆಹಲಿ (ಮೇ.19): ಪ್ರಧಾನಿ ನರೇಂದ್ರ ಮೋದಿ ಅವರ ನೆದರ್ಲೆಂಡ್‌ ಭೇಟಿ ವೇಳೆ ಬೆಂಗಳೂರಿನಲ್ಲಿ ಪಶು ಸಂಗೋಪನಾ ತರಬೇತಿ ಕೇಂದ್ರ ಸ್ಥಾಪನೆ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಉಭಯ ದೇಶಗಳು ಮಾಡಿಕೊಂಡ ಒಟ್ಟು 17 ಒಪ್ಪಂದಗಳಲ್ಲಿ ಬೆಂಗಳೂರಿನಲ್ಲಿ ಡೈರಿ ತರಬೇತಿ ಕೇಂದ್ರ ಸ್ಥಾಪಿಸುವ ಅಂಶ ಕೂಡ ಸೇರಿದೆ.

ಭಾರತದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಮತ್ತು ನೆದರ್ಲೆಂಡ್‌ನ ಕೃಷಿ, ಮೀನುಗಾರಿಕೆ, ಆಹಾರ ಭದ್ರತೆ ಮತ್ತು ಪ್ರಕೃತಿ ಸಚಿವಾಲಯದ ಜಂಟಿ ಘೋಷಣೆಗೆ ಪ್ರಧಾನಿ ಮೋದಿ ಮತ್ತು ನೆದರ್ಲೆಂಡ್‌ ಪ್ರಧಾನಿ ರಾಬ್ ಜೆಟ್ಟನ್ ಅವರ ಸಮ್ಮುಖದಲ್ಲಿ ಸಹಿ ಹಾಕಲಾಯಿತು. ಇದರ ಭಾಗವಾಗಿ ಬೆಂಗಳೂರಿನಲ್ಲಿ ಡೈರಿ ಕ್ಷೇತ್ರದಲ್ಲಿ ತರಬೇತಿ ನೀಡುವ ಇಂಡೋ-ಡಚ್ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆಗೆ ಒಪ್ಪಂದವಾಗಿದೆ. ಇದನ್ನು ಬೆಂಗಳೂರಿನ ಹೆಸರಘಟ್ಟದಲ್ಲಿರುವ ಪಶುಸಂಗೋಪನೆಗಾಗಿನ ಉತ್ಕೃಷ್ಟತಾ ಕೇಂದ್ರದಲ್ಲಿ ನೆದರ್ಲೆಂಡ್‌ ತನ್ನ ಉತ್ಕೃಷ್ಟತಾ ಕೇಂದ್ರವನ್ನು ತೆರೆಯಲಿದೆ.

ಹೈನುಗಾರಿಕೆಗೆ ಬಲ:

ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ನೆದರ್ಲೆಂಡ್‌, ವಿಶ್ವದ 2ನೇ ದೊಡ್ಡ ಕೃಷಿ ಉತ್ಪನ್ನಗಳ ರಫ್ತುದಾರ ದೇಶವಾಗಿದೆ. ಕಡಿಮೆ ಜಾನುವಾರುಗಳನ್ನು ಹೊಂದಿರುವ ಪುಟ್ಟ ದೇಶವಾಗಿರುವ ಹೊರತಾಗಿಯೂ ತಂತ್ರಜ್ಞಾನ, ಪರಿಣಾಮಕಾರಿ ಕ್ರಮಗಳಿಂದಾಗಿ ಜಾಗತಿಕ ಡೈರಿ ಉತ್ಪಾದಕ ರಾಷ್ಟ್ರಗಳ ಪೈಕಿ ಟಾಪ್‌ 5ರಲ್ಲಿ ಸ್ಥಾನ ಪಡೆದಿದೆ. ಹೀಗಿರುವಾಗ, ಇಂತಹ ದೇಶದೊಂದಿಗೆ ಆಗಿರುವ ತರಬೇತಿ ಕೇಂದ್ರದ ಒಪ್ಪಂದವು ಭಾರತದಲ್ಲಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವವರಿಗೆ ಉತ್ಪಾದನೆ ಹಾಗೂ ಆದಾಯ ಹೆಚ್ಚಳಕ್ಕೆ ನೆರವಾಗಲಿದೆ.

- ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿ ನೆದರ್ಲೆಂಡ್‌ ದೇಶವು ವಿಶ್ವದಲ್ಲೇ ಹೆಸರುವಾಸಿಯಾಗಿದೆ- ಜಾನುವಾರು ಕಮ್ಮಿ ಇದ್ದರೂ ಜಾಗತಿಕ ಡೈರಿ ಉತ್ಪಾದಕ ದೇಶಗಳಲ್ಲಿ ಟಾಪ್‌ 5ರಲ್ಲಿದೆ- ಮೋದಿ ಪ್ರಧಾನಿ ಭೇಟಿ ವೇಳೆ ಬೆಂಗಳೂರಲ್ಲಿ ಇಂಡೋ- ಡಚ್‌ ತರಬೇತಿ ಕೇಂದ್ರಕ್ಕೆ ಡೀಲ್‌- ಬೆಂಗಳೂರಿನ ಹೆಸರಘಟ್ಟದಲ್ಲಿರುವ ಪಶುಸಂಗೋಪನಾ ಶ್ರೇಷ್ಠತಾ ಕೇಂದ್ರದಲ್ಲಿ ಸ್ಥಾಪನೆ- ಇದರಿಂದ ಭಾರತೀಯ ಹೈನುಗಾರರಿಗೆ ಡಚ್‌ ತಂತ್ರಜ್ಞಾನ ಅರಿಯುವ ಅವಕಾಶ ನಿರೀಕ್ಷೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UAPA ಆರೋಪಿಗಳೂ ಬೇಲ್‌ಗೆ ಅರ್ಹರು: ಸುಪ್ರೀಂ ಸ್ಪಷ್ಟನೆ | ಉಮರ್ ಖಾಲಿದ್‌ಗೆ ಜಾಮೀನು ಸಿಗುವುದೇ?
ಶಕ್ತಿ ಯೋಜನೆ ಹಿಟ್ ಬಳಿಕ ದೇಶಾದ್ಯಂತ ಭಾರೀ ಕ್ರೇಜ್; ಮತ್ತೆರಡು ರಾಜ್ಯಗಳಲ್ಲಿ ಜಾರಿ, ಒಟ್ಟು ಎಷ್ಟು ರಾಜ್ಯಗಳಲ್ಲಿ ಈ ಸೌಲಭ್ಯ ಇದೆ ಗೊತ್ತಾ?”