
ನವದೆಹಲಿ(ಸೆ.30): ಅಧಿಕಾರದ ಗದ್ದುಗೆಯಲ್ಲಿ ಬರುವ ಅ.7ಕ್ಕೆ 20 ವರ್ಷಗಳನ್ನು ಪೂರೈಸಲಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಅದೇ ದಿನ ಪ್ರಸಿದ್ಧ ಕೇದಾರನಾಥ ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ. 2022ರ ಆರಂಭದಲ್ಲಿ ಉತ್ತರಾಖಂಡ ವಿಧಾನಸಭೆಗೆ ಚುನಾವಣೆ(Uttarakhand Assembly Elections) ನಡೆಯಬೇಕಿರುವ ಹಿನ್ನೆಲೆಯಲ್ಲಿ ಮೋದಿ ಅವರ ಭೇಟಿ ಮತ್ತೊಂದು ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ.
70ರ ದಶಕದಲ್ಲೇ ಮೋದಿ ಅವರು ಸಾಮಾಜಿಕ ಹಾಗೂ ರಾಜಕೀಯ ಜೀವನವನ್ನು ಆರಂಭಿಸಿದರಾದರೂ ಅವರು ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ್ದು 2001ರ ಅ.7ರಂದು. ಗುಜರಾತ್ ಮುಖ್ಯಮಂತ್ರಿಯಾಗುವ(Gujarat Chief Minister) ಮೂಲಕ. ಆನಂತರ ಮೋದಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. 2014ರವರೆಗೆ ಮೂರು ಬಾರಿ ಗುಜರಾತ್ ಚುನಾವಣೆ(Gujarat Elections) ಗೆದ್ದು ಮುಖ್ಯಮಂತ್ರಿ ಪಟ್ಟದಲ್ಲಿ ಮುಂದುವರಿದರು.
2014ರಲ್ಲಿ ಲೋಕಸಭೆ ಚುನಾವಣೆಗೆ(Loksabha Elections) ಸ್ಪರ್ಧಿಸಿ ಪ್ರಧಾನಿಯಾದರು. 2019ರಲ್ಲಿ ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ಪುನರಾಯ್ಕೆಯಾದರು. ಅಧಿಕಾರದಲ್ಲಿ 20 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕೇದಾರಕ್ಕೆ ಭೇಟಿ ನೀಡಿ ಕೇದಾರನಾಥ ಸ್ವಾಮಿಯ ದರ್ಶನವನ್ನು ಮೋದಿ ಅವರು ಪಡೆದುಕೊಳ್ಳಲಿದ್ದಾರೆ.
ಇದೇ ವೇಳೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ಟರ್ಮಿನಲ್, ಋುಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ(AIIMS Hospital) ಆಕ್ಸಿಜನ್ ಘಟಕ ಉದ್ಘಾಟಿಸಿ, ಋುಷಿಕೇಶದಲ್ಲಿ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ