ಪ್ರಧಾನಿ ಮೋದಿ ನೀಡಿದ ವಜ್ರ, ಜಿಲ್ ಬೈಡೆನ್‌ಗೆ ಸಿಕ್ಕ ದುಬಾರಿ ಗಿಫ್ಟ್
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್‌ಗೆ 2023ರಲ್ಲಿ ಹಲವು ಜಾಗತಿಕ ಗಣ್ಯರು ಹಲವು ಉಡುಗೊರೆ ನೀಡಿದ್ದಾರೆ. ಈ ಪೈಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ 17 ಲಕ್ಷ ರು. ಮೌಲ್ಯದ ವಜ್ರ, ಅತ್ಯಂತ ದುಬಾರಿ ಉಡುಗೊರೆಯಾಗಿ ಹೊರಹೊಮ್ಮಿದೆ.
ವಾಷಿಂಗ್ಟನ್ (ಜ.04): ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್‌ಗೆ 2023ರಲ್ಲಿ ಹಲವು ಜಾಗತಿಕ ಗಣ್ಯರು ಹಲವು ಉಡುಗೊರೆ ನೀಡಿದ್ದಾರೆ. ಈ ಪೈಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ 17 ಲಕ್ಷ ರು. ಮೌಲ್ಯದ ವಜ್ರ, ಅತ್ಯಂತ ದುಬಾರಿ ಉಡುಗೊರೆಯಾಗಿ ಹೊರಹೊಮ್ಮಿದೆ. ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷ, ಅವರ ಪತ್ನಿಗೆ ವಿದೇಶಿ ನಾಯಕರು ನೀಡುವ ಉಡುಗೊರೆಗಳನ್ನು ಅವುಗಳ ಸಂಗ್ರಹಾಲಯದಲ್ಲಿ ಇಡಲಾಗುವುದಾದರೂ, ಮೋದಿ ನೀಡಿದ್ದ 7.5 ಕ್ಯಾರೆಟ್‌ನ ವಜ್ರವನ್ನು ವೈಟ್ ಹೌಸ್‌ನ ಈಸ್ಟ್ ವಿಂಗ್‌ನಲ್ಲೇ ಉಳಿಸಿಕೊಳ್ಳಲಾಗಿದೆ.
ಅಮೆರಿಕದ ಕಾನೂನಿನ ಪ್ರಕಾರ 41 ಸಾವಿರ ರು.ಗಿಂತ ಅಧಿಕ ಮೌಲ್ಯದ ಉಡುಗೊರೆ ಪಡೆದಲ್ಲಿ ಅದನ್ನು ಬಹಿರಂಗಪಡಿಸುವುದು ಕಡ್ಡಾಯ. ದುಬಾರಿ ಉಡುಗೊರೆಗಳನ್ನು ರಾಷ್ಟ್ರೀಯ ಸಂಗ್ರಹಾಗಾರದಲ್ಲಿಡಲಾಗುವುದು ಅಥವಾ ಪ್ರದರ್ಶನಕ್ಕಿಡಲಾಗುವುದು. ಇಲ್ಲವೇ, ಉಡುಗೊರೆಯನ್ನು ಪಡೆದವರೇ ಅದರ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿ ಅದನ್ನು ಖರೀದಿಸಬಹುದು.
₹10 ಲಕ್ಷ ಸೂಟ್ ಧರಿಸುವ ಮೋದಿಗೆ ನನ್ನ ಮನೆ ಬಗ್ಗೆ ಮಾತಾಡುವ ಹಕ್ಕಿಲ್ಲ: ಅರವಿಂದ್ ಕೇಜ್ರಿವಾಲ್
ಮೋದಿ ನಿರ್ಧಾರ ರೈತ ಪರ: 2025ರ ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ರೈತಾಪಿ ಸಮುದಾಯಕ್ಕೆ ಮೂರು ಬಂಪರ್ ಕೊಡುಗೆ ಪ್ರಕಟಿಸಿದೆ. ಎರಡು ಕೃಷಿ ವಿಮಾ ಯೋಜನೆಗಳ ಅವಧಿಯನ್ನು ಮತ್ತೆ ಒಂದು ವಿಸ್ತರಣೆ ಮಾಡಿದ್ದರೆ, ಸಬ್ಸಿಡಿ ದರದಲ್ಲಿ ಡಿಎಪಿ ಗೊಬ್ಬರ ವಿತರಿಸುವ ಯೋಜನೆಯನ್ನು ಇನ್ನೂ ಒಂದು ವರ್ಷ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ‘ಸರ್ಕಾರದ ಹೊಸ ವರ್ಷದ ಮೊದಲ ನಿರ್ಣಯವು ದೇಶದ ಕೋಟಿ ಕೋಟಿ ರೈತ ಸಹೋದರ ಸಹೋದರಿಯರಿಗೆ ಸಮರ್ಪಣೆ’ ಎಂದಿದ್ದಾರೆ.
ವಿಮಾ ಯೋಜನೆ ವಿಸ್ತರಣೆ: ಕೃಷಿ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿಐ) ಹಾಗೂ ಪುನರ್‌ರಚಿತ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (ಆರ್‌ಡಬ್ಲ್ಯುಬಿಸಿಐಎಸ್) ಗಳಿಗೆ ಕೃಷಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವ ಕಾರಣ ಅವುಗಳ ಅವಧಿಯನ್ನು ಇನ್ನೂ ಒಂದು ವರ್ಷ (2025-26 ವರೆಗೆ) ವಿಸ್ತರಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ. ಈ 2 ಯೋಜನೆಗಳಿಗಾಗಿ 2020-21ರಿಂದ 2024-25 ವರೆಗೆ ಮೀಸಲಿರಿಸಿದ್ದ 66,550 ಕೋಟಿ ರು. ಮೊತ್ತವನ್ನು 2021-22ರಿಂದ 2025-26 ವರೆಗೆ 69,515.71 ಕೋಟಿ ರು.ಗೆ ಏರಿಕೆ ಮಾಡಲು ಸಂಪುಟ ಸಭೆ ನಿರ್ಧರಿಸಿದೆ.
ಸಿರಿಯಾದೊಳಗೆ ನುಗ್ಗಿ ಕ್ಷಿಪಣಿ ಘಟಕ ನಾಶಪಡಿಸಿದ ಇಸ್ರೇಲ್: 100 ಕಮಾಂಡೋಗಳಿಂದ 3 ತಾಸಲ್ಲಿ ದಾಳಿ
ತಂತ್ರಜ್ಞಾನಕ್ಕೆ ಪ್ರತ್ಯೇಕ ನಿಧಿ: ಕೃಷಿ ವಿಮಾ ಯೋಜನೆಗಳ ಜಾರಿಗೆ ಬಳಸಲಾಗುವ ತಂತ್ರಜ್ಞಾನ ಅಭಿವೃದ್ಧಿಗೆಂದು 824.77 ಕೋಟಿ. ಮೊತ್ತದ ಪ್ರತ್ಯೇಕ ಎಫ್‌ಐಎಟಿ ನಿಧಿ ಸ್ಥಾಪಿಸಲಾಗಿದೆ. ಇದನ್ನು ಬೆಳೆ ಹಾನಿ ಮೌಲ್ಯಮಾಪನ, ಕ್ಲೈಂಗಳ ಸೆಟಲ್‌ಮೆಂಟ್, ನೋಂದಣಿ ಪ್ರಕ್ರಿಯೆ ಸರಳೀಕರಣಕ್ಕೆ, ಯೆಸ್-ಟೆಕ್, ಹವಾಮಾನ ಮಾಹಿತಿ ಮತ್ತು ನೆಟ್‌ವರ್ಕ್ ಡೇಟಾ ವ್ಯವಸ್ಥೆ (ವಿಂಡ್ಸ್), ಸಂಶೋಧನೆ ಮತ್ತು ಅಭಿವೃದ್ಧಿ ಅಧ್ಯಯನಗಳಿಗೆ ಬಳಸಲಾಗುವುದು. ರೈತರಿಗೆ ಕೈಗೆಟುಕುವ ದರದಲ್ಲಿ ಗೊಬ್ಬರ ಒದಗಿಸುವ ಸಲುವಾಗಿ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ಗೊಬ್ಬರವನ್ನು ಇನ್ನೂ ಒಂದು ವರ್ಷಗಳ ಕಾಲ ಸಬ್ಸಿಡಿ ದರದಲ್ಲಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 3850 ಕೋಟಿ ರು. ನೆರವು ನೀಡಲು ಸಂಪುಟ ಸಭೆ ನಿರ್ಧರಿಸಿದೆ. ಪ್ರಸ್ತುತ ಪ್ರತಿ 50 ಕೆಜಿ ಡಿಎಪಿ ಗೊಬ್ಬರವನ್ನು ರೈತರಿಗೆ ಸರ್ಕಾರ 1350 ರು.ಗೆ ವಿತರಣೆ ಮಾಡುತ್ತಿದೆ. ಇದಕ್ಕಾಗಿ ಪ್ರತಿ ಟನ್‌ಗೆ 3500 ರು.ನಷ್ಟು ಸಬ್ಸಿಡಿ ನೀಡುತ್ತಿದೆ.