ಗ್ರಾಮೀಣ ಜನರಿಗೆ ಮೋದಿಯಿಂದ ಹೊಸ ಆರ್ಥಿಕ ಭದ್ರತೆ,  ಪ್ರಾಪರ್ಟಿ ಕಾರ್ಡ್!

By Suvarna News  |  First Published Oct 12, 2020, 12:54 AM IST

ಗ್ರಾಮ ರಾಜ್ಯದ ಹೊಸ ಆಲೋಚನೆ/ ಗ್ರಾಮೀಣರಿಗೆ ಹೊಸ ಹಕ್ಕು/ ಸ್ವಾಮಿತ್ವ ಯೋಜನೆ/ ಗ್ರಾಮ ಪ್ರದೇಶದ ಜನರಿಗೆ ಆಸ್ತಿ ಕಾರ್ಡ್/ ಗ್ರಾಮೀಣರಿಗೆ ಆರ್ಥಿಕ ಭದ್ರತೆ ನೀಡುವ ಯೋಜನೆ


ನವದೆಹಲಿ(ಅ. 11)  ಗ್ರಾಮ ಪ್ರದೇಶಗಳಲ್ಲಿ ಆಸ್ತಿ ಕಾರ್ಡ್ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.   ಗ್ರಾಮೀಣ ಜನರಿಗೆ ಹಕ್ಕು ದಯಪಾಲಿಸುವ ಯೋಜನೆ ಹಲವು ಬದಲಾವಣೆಗಳನ್ನು ತರಲಿದೆ.  ದೇಶದ ಮೂರರಲ್ಲಿ ಎರಡು ಭಾಗ ಜನ ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದು ಅವರ ಜೀವನಕ್ಕೆ ಶಕ್ತಿ ತುಂಬಲಿದೆ.

'ಸ್ವಾಮಿತ್ವ'  ಯೋಜನೆ ಗ್ರಾಮೀಣ ಜನರು ಆಸ್ತಿಯನ್ನು ಆರ್ಥಿಕ ಆಸ್ತಿಯಾಗಿ ಬಳಸಲು ಅವಕಾಶ ನೀಡಲಿದೆ. ಯೋಜನೆಯಿಂದ 6.62 ಲಕ್ಷ ಗ್ರಾಮಗಳಿಗೆ ಲಾಭವಾಗಲಿದ್ದು, ಯೋಜನೆಯಡಿಯಲ್ಲಿ ರೈತರ ಜಮೀನುಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿದೆ. 

Tap to resize

Latest Videos

undefined

ಮೋದಿ ಮೇಲೆ ಜನರಿಗೆ ಎಷ್ಟು ವಿಶ್ವಾಸ? ಸಮೀಕ್ಷೆ ಬಹಿರಂಗ

ಈ ಯೋಜನೆ ಜಾರಿಯಿಂದ ಗ್ರಾಮೀಣ ಭಾಗದ ಚಿತ್ರಣವೇ ಬದಲಾಗಲಿದ್ದು, ಗ್ರಾಮೀಣ ಭಾಗದಲ್ಲಿ ದೊಡ್ಡ ಪರಿವರ್ತನೆಗೆ ಈ ಯೋಜನೆ ಕಾರಣವಾಗಲಿದೆ ಎಂದು ಮೋದಿ ತಿಳಿಸಿದ್ದಾರೆ.

ತಮ್ಮ ಆಸ್ತಿಗಳ ಮಾಲೀಕತ್ವವನ್ನು ಈ ಕಾರ್ಡ್‌ಗಳಿಂದ ಗ್ರಾಮೀಣ ಜನ ಸಾಲ  ಸೇರಿದಂತೆ ಆರ್ಥಿಕ ನೆರವನ್ನು ಪಡೆಯಲು ಅನುಕೂಲವಾಗುತ್ತದೆ ಎಂಬುದನ್ನು ಮೋದಿ ತಿಳಿಸಿದ್ದಾರೆ.

ಆರು ರಾಜ್ಯಗಳ  763 ಹಳ್ಳಿಯ ಜನರಿಗೆ ಇದು ಅನುಕೂಲ ತಂದುಕೊಡಲಿದೆ. ಉತ್ತರ ಪ್ರದೇಶ, ಹರ್ಯಾಣ, ಮಧ್ಯ ಪ್ರದೇಶ, ಉತ್ತರಾಖಂಡದ ರೈತರಿಗೆ ಪ್ರಾಯೋಗಿಕವಾಗಿ ಇದರ ಲಾಭ ಆರಂಭದಲ್ಲಿಯೇ ಸಿಗಲಿದೆ.

click me!