ಸಂತ್ರಸ್ತೆಗೆ ರಾಖಿ ಕಟ್ಟುವ ಷರತ್ತು, ಆರೋಪಿಗಳಿಗೆ ಜಾಮೀನು: ಹೈಕೋರ್ಟ್‌ ತೀರ್ಪು ಪ್ರಶ್ನಿಸಿದ 9 ವಕೀಲೆಯರು!

By Suvarna NewsFirst Published Oct 11, 2020, 5:43 PM IST
Highlights

ಮಧ್ಯಪ್ರದೇಶದ ಹೈಕೋರ್ಟ್ 30 ವರ್ಷದ ವಿವಾಹಿತ ಮಹಿಳೆಗೆ ಕಿರುಕುಳ| ಆರೋಪಿಗಳೆದುರು ವಿಚಿತ್ರ ಷರತ್ತುಬ ಇರಿಸಿ ಜಾಮೂನು ಮಂಜೂರು ಮಾಡಿದ ಹೈಕೋರ್ಟ್| ಹೈಕೋರ್ಟ್‌ನ ಈ ತೀರ್ಪಿಗೆ ಒಂಭತ್ತು ವಕೀಲೆಯರು ಸವಾಲೆಸೆದಿದ್ದಾರೆ

ಭೋಪಾಲ್(ಅ.11): ಮಧ್ಯಪ್ರದೇಶದ ಹೈಕೋರ್ಟ್ 30 ವರ್ಷದ ವಿವಾಹಿತ ಮಹಿಳೆಗೆ ಕಿರುಕುಳ ನೀಡಿದ ಆರೋಪಿಗಳಿಗೆ ರಕ್ಷಾಬಂಧನದ ದಿನ ಮಹಿಳೆಯ ಮನೆಗೆ ತೆರಳಿ ರಾಖಿ ಕಟ್ಟುವ ಷರತ್ತಿನ ಮೇಲೆ ಜಾಮೀನು ನೀಡಿತ್ತು. ಆದರೀಗ ಹೈಕೋರ್ಟ್‌ನ ಈ ತೀರ್ಪಿಗೆ ಒಂಭತ್ತು ವಕೀಲೆಯರು ಸವಾಲೆಸೆದಿದ್ದಾರೆ.

ಸುಪ್ರೀಂ ಕೋರ್ಟ್‌ ವಕೀಲೆ ಅಪರ್ಣಾ ಭಟ್ ಸೇರಿ ಒಟ್ಟು ಒಂಭತ್ತು ವಕೀಲೆಯರು ಮಧ್ಯಪ್ರದೇಶ ಹೈಕೋರ್ಟ್ ಜುಲೈ 30ರಂದು ನೀಡಿದ ತೀರ್ಪನ್ನು ಪ್ರಶ್ನಿಸಿದ್ದಾರೆ. ಪ್ರಕರಣದ ಆರೋಪಿಗೆ ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳುವ ಷರತ್ತಿನ ಮೇರೆಗೆ ಜಾಮೀನು ಮಂಜೂರು ಮಾಡಲಾಗಿತ್ತು. ಆದರೀಗ ನಾವು ಆರೋಪಿಗೆ ಮಂಜೂರು ಮಾಡಲಾದ ಜಾಮೀನನ್ನು ವಿರೋಧಿಸುತ್ತಿಲ್ಲ, ಆದರೆ ರಾಖಿ ಕಟ್ಟುವ ತೀರ್ಪನ್ನು ಪ್ರಶ್ನಿಸುತ್ತಿದ್ದೇವೆ ಎಂದಿದ್ದಾರೆ. ಈ ಮೇಲ್ಮನವಿಯನ್ನು ಅಧಿಕೃತವಾಗಿ ರಮೇಶ್ ಕುಮಾರ್ ಸಲ್ಲಿಸಿದ್ದಾರೆ. ಇದರಲ್ಲಿ ಜಾಮೀನು ನೀಡುವ ಷರತ್ತನ್ನು ತಡೆ ಹಿಡಿಯುವಂತೆ ಮನವಿ ಮಾಡಲಾಗಿದೆ.

ಏನಿದು ಪ್ರಕರಣ?

ಉಜ್ಜಯನಿಯ ಭಾಟ್‌ಪಚ್ಲಾನಾ ಕ್ಷೇತ್ರದ ನಿವಾಸಿ ವಿಕ್ರಂ ಬಾಗ್ರೀ(26) ಎಂಬಾತ ಏಪ್ರಿಲ್  20ರಂದು ತನ್ನ ನೆರೆಮನೆ ಮಹಿಳೆ ಮನೆಗೆ ನುಗ್ಗಿ ಕಿರುಕುಳ ನೀಡಿದ ಪ್ರಕರಣ ದಾಖಲಾಗಿತ್ತು. ಅಲ್ಲದೇ ಆತನ ವಿರುದ್ಧ ಸೆಕ್ಷನ್  452ಹಾಗೂ 354 ರ ಅಡಿಯಲ್ಲಿ ಪ್ರಕರಣವೂ ದಾಖಲಾಗಿತ್ತು.

ವಿಚಿತ್ರ ಷರತ್ತು ಇಟ್ಟಿದ್ದ ಹೈಕೋರ್ಟ್

ಹೈಕೋರ್ಟ್‌ನ ಇಂದೋರ್ ಪೀಠದ ನ್ಯಾಯಮೂರ್ತಿ ರೋಹಿತ್ ಆರ್ಯ ಇಬ್ಬರ ಪಕ್ಷದ ವಾದ ಪ್ರತಿವಾದ ಆಲಿಸಿ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದರು. ಆದರೆ ಕೋರ್ಟ್‌ ಆತನೆದುರು ವಿಚಿತ್ರ ಷರತ್ತು ಇಟ್ಟಿತ್ತು. ಆರೋಪಿ ರಕ್ಷಾ ಬಂಧನದಂದು ಬೆಳಗ್ಗೆ 11 ಗಂಟೆಗೆ ತನ್ನ ಹೆಂಡತಿ ಜೊತೆಗೆ ರಾಖಿ ಹಾಗೂ ಸಿಹಿ ತಿಂಡಿ ತೆಗೆದುಕೊಂಡು ಅನುಚಿತವಾಗಿ ವರ್ತಿಸಿದ ಮಹಿಳೆ ಮನೆಗೆ ತೆರಳಿ, ಆಕೆ ಬಳಿ ರಾಖಿ ಕಟ್ಟಲು ಮನವಿ ಮಾಡಬೇಕು. ಅಲ್ಲದೇ ಅಣ್ಣನೊಬ್ಬ ತಂಗಿಗೆ ಉಡುಗೊರೆ ನೀಡುವಂತೆ  11,000 ರೂ. ನೀಡಿ ಆಶೀರ್ವಾದ ಪಡೆಯಬೇಕು ಎಂದು ತೂರ್ಪು ನೀಡಿತ್ತು.
 

click me!