ಲಕ್ನೌ(ನ.16): ಬಹುನಿರೀಕ್ಷಿತ ಉತ್ತರ ಪ್ರದೇಸದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ವಿಶಿಷ್ಠವಾಗಿ ಉದ್ಘಾಟಿಸಿದ್ದಾರೆ. ಭಾರತೀಯ ಸೇನೆಯ ಸರಕು ಸೇನಾ ವಿಮಾನ IAF ಸಿ 130ಜೆ ಸೂಪರ್ ಹರ್ಕುಲಸ್ ಮೂಲಕ ಹೆದ್ದಾರಿ ಸ್ಟ್ರಿಪ್‌ನಲ್ಲಿ ಮೋದಿ ಲ್ಯಾಂಡ್ ಆಗಿದ್ದಾರೆ. ಮೋದಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಅನಂದಿ ಬೆನ್ ಪಟೇಲ್ ಸೇರಿದಂತೆ ಗಣ್ಯರು ಸ್ವಾಗತಿಸಿದ್ದಾರೆ.
ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಹೆದ್ದಾರಿ 341 ಕಿ.ಮೀ ಉದ್ದದ ರಸ್ತೆಯಾಗಿದೆ. 6 ಪಥದ ಹೆದ್ದಾರಿ ಇದಾಗಿದ್ದು, ಅತ್ಯಾಧುನಿಕ ಹಾಗೂ ಅತ್ಯುತ್ತಮ ಗುಣಮಟ್ಟದ ರಸ್ತೆ ಅನ್ನೋ ಹೆಗ್ಗಳಿಕೆಗೆ ಈ ಹೆದ್ದಾರಿ ಪಾತ್ರವಾಗಿದೆ. ಇದರಲ್ಲಿ 3.2 ಕಿ.ಮೀ ಉದ್ದದ ವಿಮಾನ ಲ್ಯಾಂಡಿಂಗ್ ಮಾಡಲು ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಲ್ಯಾಂಡಿಂಗ್ ಸ್ಟ್ರೀಪ್‌ನಲ್ಲಿ ಮೋದಿ ಸೇನಾ ಸರಕು ವಿಮಾನದಲ್ಲಿ ಬಂದಿಳಿದಿದ್ದಾರೆ.
undefined
Audit Diwas| 'ಹಿಂದಿನ ಸರ್ಕಾರಗಳ ಸತ್ಯ ನಾವು ಪ್ರಾಮಾಣಿಕವಾಗಿ ಇಟ್ಟುಕೊಂಡಿದ್ದೇವೆ'
ಜುಲೈ 14, 2018ರಲ್ಲಿ ಅಂದರೆ ಮೂರು ವರ್ಷಗಳ ಹಿಂದೆ ಪ್ರಧಾನಿ ಮೋದಿ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಕಾಮಾಗಾರಿ ಉದ್ಘಾಟನೆ ಮಾಡಿದ್ದರು. ಇದೀಗ ಅತ್ಯುತ್ತಮ ಹೆದ್ದಾರಿಯನ್ನು ಮೋದಿ ದೇಶಕ್ಕೆ ಲೋಕಾರ್ಪಣೆ ಮಾಡಿದ್ದಾರೆ. 22,500 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೆದ್ದಾರಿ ನಿರ್ಮಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ ಭಾರತೀಯ ವಾಯುಪಡೆಯ ವಿಮಾನ ಭೂ ಸ್ಪರ್ಶ ಮಾಡಲು ಅನುಕೂಲವಾಗುವಂತೆ ಲ್ಯಾಂಡಿಂಗ್ ಸ್ಟ್ರೀಪನ್ನು ನಿರ್ಮಿಸಲಾಗಿದೆ. 3.2 ಕಿಲೋಮೀಟರ್ ಉದ್ದದ ವಿಮಾನ ಲ್ಯಾಂಡಿಂಗ್ ಸ್ಟ್ರಿಪ್ ಹೆದ್ದಾರಿಯಲ್ಲೇ ನಿರ್ಮಾಣವಾಗಿದೆ. ಸುಲ್ತಾನಪುರದಲ್ಲಿರುವ ಈ ಲ್ಯಾಂಡಿಂಗ್ ಸ್ಟ್ರಿಪ್‌ನಲ್ಲಿ ಮೋದಿ ಲ್ಯಾಂಡ್ ಆದರು.
Purvanchal Expressway Inauguration| ಸೇನಾ ಸರಕು ವಿಮಾನದಲ್ಲಿ ಮೋದಿ ಲ್ಯಾಂಡಿಂಗ್!
ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ಮೋದಿ ಬಳಿಕ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನ ವೀಕ್ಷಿಸಿದರು. ಮಿರಾಜ್ 2,000, ಸುಖೋಯ್ 30 ಹಾಗೂ ಜಾಗ್ವಾರ್ ವಿಮಾನ ವೈಮಾನಿಕ ಪ್ರದರ್ಶನ ವೀಕ್ಷಿಸಿದರು.
ಸುಲ್ತಾಪುರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸರ್ಕಾರ ಅಭಿವೃದ್ಧಿ ವೇಗ ಹಾಗೂ ಹಿಂದಿನ ಸರ್ಕಾರದ ವೈಫಲ್ಯದ ಕುರಿತು ಮಾತನಾಡಿದರು. ಹಿಂದಿನ ಸರ್ಕಾರಗಳು ಅಭಿವೃದ್ಧಿಗಳನ್ನು ತಮ್ಮ ಕುಟುಂಬಕ್ಕೆ ಸೀಮಿತಗೊಳಿಸಿತ್ತು. ರಾಜ್ಯದ ಅಭಿವೃದ್ಧಿ ಮರೀಚಿಕೆಯಾಗಿತ್ತು ಎಂದು ಮೋದಿ ಹೇಳಿದರು.
ಮೂರು ವರ್ಷಗಳ ಹಿಂದೆ ಇದೇ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಹೆದ್ದಾರಿ ಕಾಮಾಗಾರಿ ಉದ್ಘಾಟನೆ ಮಾಡಿದ್ದೆ. ಆದರೆ ಇದೇ ರಸ್ತೆಯಲ್ಲಿ ವಿಮಾನದ ಮೂಲಕ ಲ್ಯಾಂಡಿಂಗ್ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಅತ್ಯಲ್ಪ ಅವಧಿಯಲ್ಲಿ ವಿಶ್ವದರ್ಜೆಯ ರಸ್ತೆ ನಿರ್ಮಾಣ ಮಾಡಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಭಿವೃದ್ಧಿ ರೀತಿ ಹಾಗೂ ವೇಗವನ್ನು ಇಲ್ಲಿ ಗಮನಸಿಬಹುದು ಎಂದು ಮೋದಿ ಹೇಳಿದ್ದಾರೆ.
2022ರ ಉತ್ತರ ಪ್ರದೇಶ ಚುನಾವಣೆಗೆ ಮೂರು ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದೆ. ಬಿಜೆಪಿ ಎಕ್ಸ್‌ಪ್ರೆಸ್‌ವೇ ಉದ್ಘಾಟನ ಮುಂದಿನ ಚುನಾವಣೆಯಲ್ಲಿ ಮತಗಳಿಸುವ ನಾಟಕ ಎಂದು ವಿಪಕ್ಷಗಳು ಆರೋಪಿಸಿದೆ.
ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿ ಬಲವರ್ಧನೆಗೆ ಬಿಜೆಪಿ ಈ ಕಸರತ್ತು ನಡೆಸಿದೆ ಎಂದು ವಿಪಕ್ಷಗಳು ಆರೋಪಿಸಿದೆ. ಹಿಂದಿನ ಸಮಾಜವಾದಿ ಪಕ್ಷದ ಅಭಿವೃದ್ಧಿಯನ್ನು ಬಿಜೆಪಿ ಮಾದರಿಯಾಗಿ ತೆಗೆದುಕೊಳ್ಳಬೇಕಿದೆ. ಖುಷಿನಗರ ವಿಮಾನ ನಿಲ್ದಾಣ ಯೋಜನೆ ಆರಂಭಿಸಿದ್ದು ಸಮಾಜವಾದಿ ಪಕ್ಷ. ಆದರೆ ಬಿಜೆಪಿ ಇದೀಗ ಅಭಿವೃದ್ಧಿ ಕ್ರಿಡಿಟ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ ಜನರು ಎಲ್ಲವನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.