Anti terror operation; ಉಗ್ರರ ನೆರವು ನೀಡುತ್ತಿದ್ದ ಇಬ್ಬರು ಶ್ರೀನಗರ ಉದ್ಯಮಿಗಳ ಹತ್ಯೆ!

By Suvarna News  |  First Published Nov 16, 2021, 5:49 PM IST
  • ಶ್ರೀಗನಗರದಲ್ಲಿ ಎನ್‌ಕೌಂಟರ್ ಉಗ್ರರಿಗೆ ನೆರವು ನೀಡಿದ ಉದ್ಯಮಿಗಳ ಹತ್ಯೆ
  • ಇಬ್ಬರು ಉಗ್ರರು, ಇಬ್ಬರು ಉದ್ಯಮಿಗಳು ಸೇರಿ ನಾಲ್ವರ ಹತ್ಯೆ
  • ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಭಾರತದ ಭದ್ರತಾ ಪಡೆಗಳ ಮಿಂಚಿನ ಕಾರ್ಯಾಚರಣೆ

ಶ್ರೀನಗರ(ನ.16):  ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and Kashmir) ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಇತ್ತ ಅಸ್ಸಾಂ, ಮಣಿಪುರದಲ್ಲೂ ಭಾರತೀಯ ಸೇನೆ ಗುರಿಯಾಗಿಸಿ ದಾಳಿ ನಡೆಯುತ್ತಲೇ ಇದೆ. ಇತ್ತೀಚೀಗೆ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಮೇಲಿನ ಭೀಕರ ದಾಳಿ ಭದ್ರತಾ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಉಗ್ರ ಚಟುವಟಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡಡೆಸುತ್ತಿದೆ. ಇದೀಗ ಶ್ರೀನಗರದ ಹೈದರ್‌ಪೋರಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ(Hyderpora encounter) ಇಬ್ಬರು ಉಗ್ರರು ಹಾಗೂ ಉಗ್ರರಿಗೆ ನೆರವು ನೀಡುತ್ತಿದ್ದ ಇಬ್ಬರು ಉದ್ಯಮಿಗಳು ಹತರಾಗಿದ್ದಾರೆ.

ಉಗ್ರರ ಚಟುವಟಿಕೆ ಕುರಿತು ಖಚಿತ ಮಾಹಿತಿ ಪಡೆದ ಸೇನೆ ಹೈದರ್‌ಪೋರಾ ಕಾಂಪ್ಲೆಕ್ಸ್‌ ಬಳಿ ಸೇನೆ ಉಗ್ರ ವಿರೋಧಿ ಕಾರ್ಯಾಚರಣೆ ನಡೆಸಿದೆ(Anti terror operation). ಈ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಸೇನೆ ಹತ್ಯೆ ಮಾಡಿದೆ. ಉಗ್ರರು ಕೂಡ ತೀವ್ರ ಪ್ರತಿ ದಾಳಿ ನಡೆಸಿದ್ದಾರೆ. ಸೇನೆ ಮೇಲೆ ಗುಂಡಿನ ಸುರಿಮಳೆಗೈದಿದೆ. ಈ ಚಕಮಕಿಯಲ್ಲಿ ಉಗ್ರರಿಗೆ ನೆರವು ನೀಡುತ್ತಿದ್ದ ಇಬ್ಬರು ಉದ್ಯಮಿಗಳು ಹತರಾಗಿದ್ದಾರೆ.

Latest Videos

undefined

Manipur Terror Attack:ಉಗ್ರ ದಾಳಿಗೆ ಕರ್ನಲ್ ಕುಟುಂಬ, 4 ಯೋಧರು ಹುತಾತ್ಮ, ಘಟನೆ ಖಂಡಿಸಿದ ಮೋದಿ!

ಹತರಾದ ಉದ್ಯಮಿಗಳನ್ನು ಮುದಾಸಿರ್ ಗೌಲ್ ಹಾಗೂ ಅಲ್ತಾಫ್ ಭಟ್ ಎಂದು ಗುರುತಿಸಲಾಗಿದೆ. ಮುದಾರಿಸಿರ್ ಡೆಂಟಲ್ ಸರ್ಜನ್ ಆಗಿದ್ದು, ಹೈದರ್‌ಪೋರಾ ವಾಣಿಜ್ಯ ಕಟ್ಟಡದಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದ. ಇತ್ತ ಅಲ್ತಾಫ್ ಭಟ್ ವಾಣಿಜ್ಯ ಕಟ್ಟಡ ಮಾಲೀಕರಾಗಿದ್ದಾರೆ. ಇಬ್ಬರು ಉಗ್ರರಿಗೆ ಹಣಕಾಸು ಸೇರಿದಂತೆ ಹಲವು ನೆರವುಗಳನ್ನು ನೀಡುತ್ತಿದ್ದರು ಎಂದು ಜಮ್ಮ ಮತ್ತು ಕಾಶ್ಮೀರ ಪೊಲೀಸ್ ಹೇಳಿದೆ.

ಉಗ್ರ ವಿರೋಧಿ ಚಟುವಟಿಕೆಯಲ್ಲಿ ಇಬ್ಬರು ಉದ್ಯಮಿಗಳು ಹತರಾಗಿರುವುದು ಇದೀಗ ರಾಜಕೀಯ ಆರೋಪ ಪತ್ಯಾರೋಪಕ್ಕೆ ಕಾರಣವಾಗಿದೆ. ಸೇನೆ ಹಾಗೂ ಭದ್ರತಾ ಪಡೆ ಅಮಾಯಕ ನಾಗರೀಕರನ್ನು ಹತ್ಯ ಮಾಡಿದೆ. ಪ್ರತಿ ಕಾರ್ಯಾಚರಣೆಗಳಲ್ಲಿ ಭಾರತೀಯ ಸೇನೆ , ನಾಗರೀಕರನ್ನು ಗುರಾಣಿಗಳ ರೀತಿ ಬಳಸಿಕೊಳ್ಳುತ್ತಿದೆ. ಬಳಿಕ ಉಗ್ರರಿಗೆ ನೆರವು ನೀಡುತ್ತಿದ್ದ, ಶಂಕಿತ ಉಗ್ರನ ಹಣೆಪಟ್ಟಿ ಕಟ್ಟಲಾಗುತ್ತಿದೆ. ಇಬ್ಬರು ಉದ್ಯಮಿಗಳ ಹತ್ಯೆ ತನಿಖೆಯಾಗಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ.

ಮಗನ ಹುಟ್ಟುಹಬ್ಬಕ್ಕೆ ಮನೆಗೆ ಬರುತ್ತೇನೆ ಎಂದಿದ್ದರು : ಹುತಾತ್ಮ ಯೋಧನ ಪತ್ನಿಯ ಅಳಲು!

ಉದ್ಯಮಿಗಳ ಕುಟುಂಬ ನೇರವಾಗಿ ಭದ್ರತಾ ಪಡೆಗಳು ಉದ್ಯಮಿಗಳನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿದೆ. ಆದರೆ ಪೊಲೀಸರು ಉಗ್ರರು ನಡೆಸಿದ ಪ್ರತಿದಾಳಿಯಲ್ಲಿ ಉದ್ಯಮಿಗಳು ಹತ್ಯೆಯಾಗಿರುವ ಸಾಧ್ಯತೆ ಇದೆ. ಅಥವಾ ಗುಂಡಿನ ಚಕಮಕಿಯಲ್ಲಿ ಹತ್ಯೆಯಾಗಿರುವ ಸಾಧ್ಯತೆ ಇದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.

ಇತ್ತ ಭಾರತೀಯ ಭದ್ರತಾ ಪಡೆ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶವ ಸಂಸ್ಕಾರಕ್ಕೆ ಅವಕಾಶ ನೀಡಬೇಕು. ಹೀಗಾಗಿ ಮೃತದೇಹಗಳನ್ನು ಕುಟುಂಬಸ್ಥರಿಗೆ  ಹಸ್ತಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ. ಮುಗ್ದರನ್ನು ಹತ್ಯೆ ಮಾಡಿ ಇದೀಗ ಉಗ್ರರ ಹಣೆಪಟ್ಟಿ ಕಟ್ಟುತ್ತಿದೆ. ತಕ್ಷಣವೇ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿಬೇಕು, ತೀವ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದೆ. ಆದರೆ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮೃತದೇಹ ಕುಟುಂಬಕ್ಕೆ ಹಸ್ತಾಂತರ ಸಾಧ್ಯವಿಲ್ಲ. ಸೇನೆ ಮಾರ್ಗಸೂಚಿ ಪ್ರಕಾರ ನಡೆದುಕೊಳ್ಳಲಿದೆ. ಹೀಗಾಗಿ ಉತ್ತರ ಕಾಶ್ಮೀರದ ಹಂದ್ವಾರ ಪ್ರದೇಶದಲ್ಲಿ ನಾಲ್ವರ ಶವಗಳನ್ನು ಸಂಸ್ಕಾರ ಮಾಡಲಾಗುವುದು ಎಂದಿದೆ.

ಹೈದರ್‌ಪೋರಾ ವಾಣಿಜ್ಯ ಕಟ್ಟಡವನ್ನು ಉಗ್ರ ಚಟುವಟಿಕೆಗೆ ಬಳಲಾಗುತ್ತಿತ್ತು. ಈ ಕುರಿತು ಹಲವು ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಉಗ್ರರಿಗೆ ನೆರವು ನೀಡುತ್ತಿದ್ದ ಉದ್ಯಮಿಗಳ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿತ್ತು. ಭಾರಿ ವಿದ್ವಂಸಕ ಕೃತ್ಯಕ್ಕೆ ಸಜ್ಜಗುತ್ತಿದ್ದ ಮಾಹಿತಿ ಪಡೆದ ಭದ್ರತಾ ಪಡೆ ಉಗ್ರರ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಉಗ್ರರಿಗೆ ನೆರವು ನೀಡುತ್ತಿದ್ದ ಉದ್ಯಮಿಗಳು ಹತರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಐಜಿ ವಿಜಯ್ ಕುಮಾರ್ ಹೇಳಿದ್ದಾರೆ.
 

click me!