
ಮಧ್ಯಪ್ರದೇಶ(ಅ.11): ಭಾರತ ಗತವೈಭವ ಮತ್ತೆ ಮರುಕಳಿಸುತ್ತಿದೆ. ಹಿಂದೂ ದೇವಸ್ಥಾನಗಳು ಅದೇ ಹೇಳೆ ಗತವೈಭವದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣ ಹಂತದಲ್ಲಿದ್ದರೆ, 6000 ವರ್ಷಗಳ ಹಿಂದಿನ ಇತಿಹಾಸವಿರುವ ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಈಗಾಗಲೇ ಉದ್ಘಾಟನೆಗೊಂಡಿದೆ. ಇದೀಗ ಮಧ್ಯ ಪ್ರದೇಶದ ಮಹಾಕಾಲೇಶ್ವರ ದೇವಾಲಯದ ಕಾರಿಡಾರ್‌ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಮೊದಲ ಹಂತದ ಕಾರಿಡಾರ್ ಯೋಜನೆಯನ್ನು 856 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿ ಮಹಾಕಾಲೇಶ್ವರ ದೇಗುಲ ಸನತಾನ ಧರ್ಮ ಹಾಗೂ ಭಕ್ತಿಯ ಕೇಂದ್ರದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಇದೀಗ ಮೋದಿ ಈ ಐತಿಹಾಸಿಕ ಮಹಾಕಾಲ ಕಾರಿಡಾರ್ ಉದ್ಘಾಟಿಸಿದ್ದಾರೆ. ಬೃಹತ್ ಆಕಾರದ ಶಿವಲಿಂಗವನ್ನು ಪವಿತ್ರ ಮೋಲಿಯಿಂದ ಸುತ್ತಿಡಲಾಗಿತ್ತು. ಈ ಶಿವಲಿಂಗ ಅನಾವರಣಗೊಳಿಸಿದ ಮೋದಿ ಕಾರಿಡಾರ್ ಉದ್ಘಾಟಿಸಿದರು. ಈ ವೇಳೆ ಮಂತ್ರಘೋಷಗಳು ಮೊಳಗಿತು. ಬಳಿಕ ಮೋದಿ ಸಂಪೂರ್ಣ ಕಾರಿಡಾರ್ ವೀಕ್ಷಿಸಿದರು. ಈ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಕಾರಿಡಾರ್ ಮಾಹಿತಿ ನೀಡಿದರು.
ಮಹಾಕಾಲ ಕಾರಿಡಾರ್(mahakal corridor) ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ಮೋದಿ(PM Narendra Modi) ಮಹಾಕಾಲ ಸನ್ನಿದ್ಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಹಾಕಾಲ(Mahakaleshwar Temple Madhya Pradesh) ಸನ್ನಿಧಿ ಮುಂದೆ ಕುಳಿತ ಮೋದಿ ಭಕ್ತಿಯಿಂದ ಪಾರ್ಥನೆ ಸಲ್ಲಿಸಿದರು. ಬಳಿಕ ಕಾರಿಡಾರ್ ಉದ್ಘಾಟನೆ ಮಾಡಿದರು. ನಾಳೆಯಿಂದ ಭಕ್ತರಿಂದ ಮಹಾಕಾಲ ಸನ್ನಿಧಿ ಕಾರಿಡಾರ್ ಮುಕ್ತವಾಗಲಿದೆ.
Ujjain mahakal corridor: ನೋಡ ಬನ್ನಿ ‘ಮಹಾಕಾಲನ ಮಹಾಲೋಕ’
ಕಾರಿಡಾರ್ ಉದ್ಘಾಟನೆಗೆ ಮದ್ಯಪ್ರದೇಶದ ಇಂದೋರ್ ವಿಮಾನ ನಿಲ್ದಾಣಕ್ಕೆ ಬಂದಿಳದ ಮೋದಿಯನ್ನು ಸಚಿವ ನರೋತ್ತಮ್ ಮಿಶ್ರಾ, ತುಳಸಿ ರಾಮ್ ಸಿಲಾವತ್, ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರ ಮಹಾಜನ್ ಸೇರಿದಂತೆ ಹಲವು ಗಣ್ಯರು ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಮಹಾಕಾಲನ ಸನ್ನಿಧಿಗೆ ಆಗಮಿಸಿ ಮಹಾಕಾಲೇಶ್ವರನಿಗೆ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಮೊದಲ ಹಂತದ ದೇಗುಲದ ಕಾರಿಡಾರ್ ಉದ್ಘಾಟಿಸಿದರು. ವಿಶೇಷ ಕಾರ್ಯಕ್ರಮದಲ್ಲಿಆಯೋಜಿಸಿದ್ದ ಕಾರ್ತಿಕ್ ಮೇಳದಲ್ಲಿ ಮೋದಿ ಪಾಲ್ಗೊಂಡರು.
ಈವರೆಗೆ ಮಹಾಕಾಲ ದೇಗುಲದ ಸುತ್ತ ಇಕ್ಕಟ್ಟಾದ ಜಾಗವಿತ್ತು. ಇದನ್ನು ತೆರವುಗೊಳಿಸಿ ವಿಶಾಲವಾದ ಕಾರಿಡಾರ್ ನಿರ್ಮಿಸಲಾಗಿದೆ. ಇದರಿಂದ ಭಕ್ತರಿಗೆ ಆರಾಮವಾಗಿ ದೇಗುಲಕ್ಕೆ ಸಾಗಿಬರಲು ಅನುಕೂಲವಾಗಲಿದೆ. ಇದು ಸುಮಾರು 900 ಮೀ. ಉದ್ದದ ಕಾರಿಡಾರ್ ಆಗಿದ್ದು, ದೇಶದ ಅತಿದೊಡ್ಡ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಇದು 2 ಪ್ರಮುಖ ಗೇಟ್‌ವೇ- ನಂದಿ ದ್ವಾರ ಹಾಗೂ ಪಿನಾಕಿ ದ್ವಾರವನ್ನು ಒಳಗೊಂಡಿದೆ. ಮೇಲ್ಭಾಗದಲ್ಲಿ ತ್ರಿಶೂಲ ಶೈಲಿಯ ವಿನ್ಯಾಸವಿರುವ ಹಾಗೂ ಶಿವನ ಮುದ್ರೆಗಳಿರುವ 108 ಅಲಂಕೃತ ಮರಳುಗಲ್ಲುಗಳ ಸ್ತಂಭಗಳಿಂದ ಕಾರಿಡಾರ್ ಅನ್ನು ಅಲಂಕರಿಸಲಾಗಿದೆ. ಇದು ದೇವತೆಗಳ ಕಲಾತ್ಮಕ ಶಿಲ್ಪ ಹಾಗೂ ಪ್ರಕಾಶಿತ ಭಿತ್ತಿಚಿತ್ರಗಳಿಂದ ಆವೃತವಾದ ಕಾರಂಜಿಯನ್ನು ಒಳಗೊಂಡಿದೆ. ಕಾಶಿ ಕಾರಿಡಾರ್ ಮಾದರಿಯಲ್ಲೇ ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯವನ್ನು ಒದಗಿಸಲು ಇದನ್ನು ನಿರ್ಮಿಸಲಾಗಿದೆ.
Mathura Vrindavan Work: ಅಯೋಧ್ಯೆಯಂತೆ ಮಥುರಾ, ವೃಂದಾವನದಲ್ಲೂ ದೇಗುಲ ನಿರ್ಮಾಣ: ಯೋಗಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ