ಸಂಪಾದಿಸಿದ ಸಂಪತ್ತೆಲ್ಲಾ ತಾನು ಕಲಿತ ಮೆಡಿಕಲ್ ಕಾಲೇಜಿಗೆ ದಾನ ನೀಡಿದ ಆಂಧ್ರದ NRI ವೈದ್ಯೆ

Published : Oct 11, 2022, 06:35 PM ISTUpdated : Oct 11, 2022, 06:36 PM IST
ಸಂಪಾದಿಸಿದ  ಸಂಪತ್ತೆಲ್ಲಾ ತಾನು ಕಲಿತ ಮೆಡಿಕಲ್ ಕಾಲೇಜಿಗೆ ದಾನ ನೀಡಿದ ಆಂಧ್ರದ NRI ವೈದ್ಯೆ

ಸಾರಾಂಶ

ನೆರೆಯ ಗುಂಟೂರಿನ ಅನಿವಾಸಿ ಭಾರತೀಯ ವೈದ್ಯರೊಬ್ಬರು ತಮ್ಮ ಜೀವಮಾನದ ಸಂಪಾದನೆಯನ್ನೆಲ್ಲಾ ತಾನು ಕಲಿತ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾನ ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ.

ಆಂಧ್ರಪ್ರದೇಶ: ನೆರೆಯ ಗುಂಟೂರಿನ ಅನಿವಾಸಿ ಭಾರತೀಯ ವೈದ್ಯರೊಬ್ಬರು ತಮ್ಮ ಜೀವಮಾನದ ಸಂಪಾದನೆಯನ್ನೆಲ್ಲಾ ತಾನು ಕಲಿತ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾನ ನೀಡುವ ಮೂಲಕ ಔದಾರ್ಯ ಮೆರೆದಿದ್ದಾರೆ. ಗುಂಟೂರು ಮೂಲದವರಾದ ವೈದ್ಯೆ ಉಮಾದೇವಿ ಗವಿನಿ ಅವರು ಮೂಲತಃ ಅಮೆರಿಕಾದ ಡಲ್ಲಾಸ್‌ನಲ್ಲಿ ವೈದ್ಯರಾಗಿದ್ದಾರೆ. ಇವರು 1965 ರಲ್ಲಿ ಗುಂಟೂರು ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದ್ದರು. ನಂತರ ಉನ್ನತ ಶಿಕ್ಷಣವನ್ನು ಮುಂದುವರಿಸುವ ಸಲುವಾಗಿ 40 ವರ್ಷಗಳ ಅಂದರೆ ಸರಿ ಸುಮಾರು ನಾಲ್ಕು ದಶಕಗಳ ಹಿಂದೆ ಅಮೆರಿಕಾಗೆ ತೆರಳಿದ ಅವರು ಅಲ್ಲದೇ ಪ್ರಸ್ತುತ ರೋಗ ನಿರೋಧಕ ತಜ್ಞ ಹಾಗೂ ಅಲರ್ಜಿ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಗುಂಟೂರು ಮೆಡಿಕಲ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ನಾರ್ತ್ ಅಮೇರಿಕಾ (GMCANA) ವೂ ಡಲ್ಲಾಸ್‌ನಲ್ಲಿ 17ನೇ ಪುನರ್ಮಿಲನ ಕೂಟವನ್ನು ಕಳೆದ ತಿಂಗಳು ಆಯೋಜಿಸಿತ್ತು.  ಡಾ ಉಮಾ ದೇವಿ (Dr. Umadevi) ಅವರು ಈ ಸಭೆಯಲ್ಲಿ ಭಾಗವಹಿಸಿದರು ಮತ್ತು ಅವರು ತಮ್ಮ 20 ಕೋಟಿ ರೂಪಾಯಿ ಮೌಲ್ಯದ ಸಂಪೂರ್ಣ ಸಂಪತ್ತನ್ನು ತಾನು ಎಂಬಿಬಿಎಸ್ (MBBS) ಶಿಕ್ಷಣ ಪೂರೈಸಿದ ಮುಗಿಸಿದ ಗುಂಟೂರು ಸರ್ಕಾರಿ ಮೆಡಿಕಲ್ ಕಾಲೇಜಿಗೆ (Guntur government medical college) ದಾನ ಮಾಡುವ ನಿರ್ಧಾರವನ್ನು ಈ ಪುನರ್ಮಿಲನ ಕೂಟದಲ್ಲಿ ಅವರು ಘೋಷಿಸಿದ್ದರು. 

ಗದಗ: ಪುತ್ರನ ನೆನಪಿಗಾಗಿ ಬಡವರಿಗೆ ನಿವೇಶನ ದಾನ..!

ಅವರು 2008ರಲ್ಲಿ GMCANA ಕೂಟದ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದರು. GMCANA ಯ ಪ್ರಸ್ತುತ ಸದಸ್ಯರು, ಉಮಾದೇವಿ ಅವರು ನೀಡಿದ ಹಣದಿಂದ ಮುಂದೆ ನಿರ್ಮಿಸಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಉಮಾದೇವಿ ಅವರ ಹೆಸರನ್ನು ಹಾಕಲು ನಿರ್ಧರಿಸಿದರು. ಆದರೆ ಉಮಾದೇವಿ ಅವರು ಈ ಪ್ರಸ್ತಾಪವನ್ನು ನಿರಾಕರಿಸಿದರು. ಅಲ್ಲದೇ ಮೂರು ವರ್ಷಗಳ ಹಿಂದೆ ನಿಧನರಾದ ತಮ್ಮ ಪತಿ ಡಾ.ಕಾನೂರಿ ರಾಮಚಂದ್ರರಾವ್ (Kanuri Ramachandra Rao) ಅವರ ಹೆಸರನ್ನು ಇಡಲು ಒಪ್ಪಿದರು. ಉಮಾದೇವಿ ದಂಪತಿಗೆ ಮಕ್ಕಳಿರಲಿಲ್ಲ.

 Belagavi; ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅಥಣಿ ಯುವಕ

ಅನೇಕರು ತಮ್ಮ ಸಂಪತ್ತಿನ ಒಂದು ಭಾಗವನ್ನು ದಾನ ನೀಡುತ್ತಾರೆ. ಆದರೆ ಉಮಾದೇವಿ ಅವರು ತಮ್ಮ ಸಂಪೂರ್ಣ ಸಂಪತ್ತನ್ನು ಒಳ್ಳೆಯ ಕಾರ್ಯಕ್ಕೆ ದಾನ ಮಾಡುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana