ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ ವಿರುದ್ಧದ ಕೇಸ್‌ ವಜಾಕ್ಕೆ ನಿರಾಕರಿಸಿದ ಅಲಹಾಬಾದ್‌ ಹೈಕೋರ್ಟ್

By Suvarna News  |  First Published Mar 2, 2022, 5:51 PM IST
  • ಪ್ರಧಾನಿ ನರೇಂದ್ರ ಮೋದಿ ಪೋಟೋವನ್ನು ಹಂದಿಯಂತೆ ಎಡಿಟ್
  • ಫೋಟೋ ಎಡಿಟ್ ಮಾಡಿ ವಾಟ್ಸಾಪ್‌ ಗ್ರೂಪ್‌ಗೆ ಕಳುಹಿಸಿದ ಸದಸ್ಯ
  • ಗ್ರೂಪ್‌ ಅಡ್ಮಿನ್‌ ವಿರುದ್ಧ ಪ್ರಕರಣ ದಾಖಲಾಗಿತ್ತು
     

ಉತ್ತರಪ್ರದೇಶ(ಮಾ.2): ವಾಟ್ಸಾಪ್‌ ಗ್ರೂಪ್‌ನಲ್ಲಿ ಸದಸ್ಯನೋರ್ವ ಹಂದಿಯ ಮುಖವನ್ನು ಹೊಂದಿರುವಂತೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಎಡಿಟ್ ಮಾಡಿ ಶೇರ್‌ ಮಾಡಿದ್ದಕ್ಕೆ ವಾಟ್ಸಾಪ್‌ ಗ್ರೂಪ್ ಅಡ್ಮಿನ್‌ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಅಲಹಾಬಾದ್‌ ಹೈಕೋರ್ಟ್ (Allahabad High Court)ನಿರಾಕರಿಸಿದೆ. ಆರೋಪಿಯು ವಾಟ್ಸಾಪ್ ಗ್ರೂಪ್ ಅಡ್ಮಿನ್ ಮತ್ತು ಗುಂಪಿನ ಸದಸ್ಯನಾಗಿರುವುದರಿಂದ ಈ ಪ್ರಕರಣವನ್ನು ಹಿಂಪಡೆಯಲು ಕೋರ್ಟ್‌ ನಿರಾಕರಿಸಿದೆ. 

ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ವಾಟ್ಸಾಪ್ ಗುಂಪಿನ ನಿರ್ವಾಹಕನ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸಲು ನಿರಾಕರಿಸಿತು. ವಾಟ್ಸಾಪ್‌ ಗ್ರೂಪ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಮುಖವನ್ನು ಹಂದಿಯಂತೆ ಚಿತ್ರಿಸಲಾಗಿದೆ ಎಂದು ಆರೋಪಿಸಲಾಗಿದೆ. ಉತ್ತರಪ್ರದೇಶದ (Uttar Pradesh) ಮೊಹಮ್ಮದ್ ಇಮ್ರಾನ್ ಮಲಿಕ್ (Mohd Imran Malik) ಎಂಬಾತ ತನ್ನ ವಿರುದ್ಧದ ಪ್ರಕರಣ ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿದ್ದ. ಆರೋಪಿ ಮಲಿಕ್ ಅವರ ಮನವಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ಮೊಹಮ್ಮದ್ ಅಸ್ಲಾಮ್ (Mohd Aslam) ಈ ವಿಚಾರವನ್ನು ಗಮನಿಸಿದರು.

PM Narendra Modi's Image Shared Allegedly With A Pig's Face: Allahabad HC Denies Relief To WhatsApp Group Admin , https://t.co/LaRYKwGWIg

— Live Law (@LiveLawIndia)

Tap to resize

Latest Videos

undefined

ದಾಖಲೆಯ ಪರಿಶೀಲನೆಯಿಂದ ಅರ್ಜಿದಾರರು 'ಗ್ರೂಪ್ ಅಡ್ಮಿನ್' ಆಗಿದ್ದರು ಮತ್ತು ಅವರು ಸಹ ಸದಸ್ಯರಾಗಿದ್ದಾರೆ ಎಂದು ತೋರುತ್ತದೆ. ಹಾಗಾಗಿ ಈ  ದೃಷ್ಟಿಯಿಂದ, ನಾನು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸ್ಪಷ್ಟವಾದ ಕಾರಣವನ್ನು ಕಂಡುಕೊಂಡಿಲ್ಲ ಹಾಗಾಗಿ ಪ್ರಕರಣ ವಜಾಗೊಳಿಸಲು ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಹೇಳಿದರು. ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವಂತೆ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 482ರ ಅಡಿಯಲ್ಲಿ ಮಲಿಕ್ ಅವರು ಸಲ್ಲಿಸಿದ ಮನವಿಯನ್ನು ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಮಲಿಕ್‌ ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ (Information Technology Act) ಸೆಕ್ಷನ್ 66 ರ(ಕಂಪ್ಯೂಟರ್ ಸಂಬಂಧಿತ ಅಪರಾಧಗಳು) ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.

Sexual assault; ಹೇಗೆ ಮೈ ಸ್ಪರ್ಶಿಸಿದರೂ ಅದು ಲೈಂಗಿಕ ದೌರ್ಜನ್ಯ, ಸುಪ್ರೀಂ ಮಹತ್ವದ ಆದೇಶ!
 

ಹೈಕೋರ್ಟಿನಲ್ಲಿ ಆರೋಪಿಗಳ ಪರ ವಕೀಲರು, ಈ ಸಂದೇಶವನ್ನು ಅವರು ಕಳುಹಿಸಿಲ್ಲ, ಆದರೆ ಬೇರೆಯವರು ಕಳುಹಿಸಿದ್ದಾರೆ ಮತ್ತು ಅವರು ಗ್ರೂಪ್ ಅಡ್ಮಿನ್ (group admin) ಮಾತ್ರ ಎಂದು ಹೇಳಿದ್ದರು.ಅಲ್ಲದೇ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲದ ಕಾರಣ ಅವರ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ವಾದಿಸಿದ್ದರು.  ಮತ್ತೊಂದೆಡೆ, ಮಲಿಕ್‌ ಅರ್ಜಿಯನ್ನು ವಿರೋಧಿಸಿದ ಹೆಚ್ಚುವರಿ ಸರ್ಕಾರಿ ವಕೀಲರು, ಸಂದೇಶ ಕಳುಹಿಸುವವರ ಸಂದೇಶದ ಹೊಣೆಗಾರಿಕೆ ಗ್ರೂಪ್ ಅಡ್ಮಿನ್ ಮೇಲೂ ಇರುತ್ತದೆ. ಐಟಿ ಕಾಯ್ದೆಯ ಸೆಕ್ಷನ್ 66 ರ ಅಡಿಯಲ್ಲಿ ಇದು ಅಪರಾಧವಲ್ಲ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದರು. ಆರೋಪಿ ಪರ ವಕೀಲ ಸುಶೀಲ್ ಕುಮಾರ್ ಪಾಂಡೆ (Sushil Kumar Pandey) ವಾದ ಮಂಡಿಸಿದ್ದರು.

ಮುಸ್ಲಿಂ ಹುಡುಗ-ಹಿಂದು ಯುವತಿ ಪ್ರೇಮ ಪ್ರಕರಣ : ಹೈಕೋರ್ಟ್ ಮಹತ್ವದ ಆದೇಶ   

ಆದರೆ ಕೆಲ ದಿನಗಳಹಿಂದಷ್ಟೇ ವಾಟ್ಸಾಪ್ (Whatsapp) ಗ್ರೂಪ್ ಸದಸ್ಯರು ಪೋಸ್ಟ್ ಮಾಡುವ ಯಾವುದೇ ನಿಂದನಾತ್ಮಕ ಸಂದೇಶಗಳಿಗೆ ವಾಟ್ಸಾಪ್ ರಚಿಸಿದವರು (Creater) ಅಥವಾ ಗ್ರೂಪ್ ಅಡ್ಮಿನ್ (Group Admin) ಅವರನ್ನು ಹೊಣೆಗಾರರನ್ನಾಗಿ ಮಾಡಲು ಬರುವುದಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ತೀರ್ಪುನೀಡಿತ್ತು. ವಾಟ್ಸಾಪ್ ಗ್ರೂಪಿ (Whatsapp Group)ನಲ್ಲಿ   ಸದಸ್ಯರೊಬ್ಬರು ಚೈಲ್ಡ್ ಪೋರ್ನೋಗ್ರಫಿ (Child Pornography) ಪೋಸ್ಟ್ ಮಾಡಿದ ಪ್ರಕರಣದ ವಿಚಾರಣೆ ಸಂಬಂಧ ಹೈಕೋರ್ಟ್ ಈ ಆದೇಶವನ್ನು ಮಾಡಿತ್ತು.

 

click me!