11.71 ಲಕ್ಷ ದೀಪ ಬೆಳಗಿ ಶಿವರಾತ್ರಿ ಆಚರಣೆ... ಗಿನ್ನೆಸ್ ಪುಟ ಸೇರಿದ ಉಜ್ಜಿಯಿನಿ

Suvarna News   | Asianet News
Published : Mar 02, 2022, 02:29 PM IST
11.71 ಲಕ್ಷ ದೀಪ ಬೆಳಗಿ ಶಿವರಾತ್ರಿ ಆಚರಣೆ... ಗಿನ್ನೆಸ್ ಪುಟ ಸೇರಿದ ಉಜ್ಜಿಯಿನಿ

ಸಾರಾಂಶ

ಮಹಾಶಿವರಾತ್ರಿಯನ್ನು ವಿಭಿನ್ನವಾಗಿ ಆಚರಣೆ ಗಿನ್ನೆಸ್ ಪುಟ ಸೇರಿದ ದೇಗುಲನಗರಿ ಉಜ್ಜಿಯಿನಿ 11.71 ಲಕ್ಷ ದೀಪ ಬೆಳಗಿ ಶಿವರಾತ್ರಿ ಆಚರಣೆ

ಮಹಾಶಿವರಾತ್ರಿಯಂದು 11.71 ಲಕ್ಷ ದೀಪವನ್ನು ಬೆಳಗುವ ಮೂಲಕ ಮಧ್ಯಪ್ರದೇಶದ ಉಜ್ಜಿಯಿನಿಯ ಶಿವ ದೇಗುವೊಂದು ಗಿನ್ನೆಸ್‌ ವಿಶ್ವ ದಾಖಲೆ ಪುಟ ಸೇರಿದೆ. ದೇಗುಲ ನಗರಿ ಎಂದು ಕರೆಯಲ್ಪಡುವ ಉಜ್ಜಿಯಿನಿಯ ಶಿವ ದೇಗುಲಗಳಲ್ಲಿ ಈ ಸಾಧನೆ ಮಾಡಲಾಗಿದೆ. ಈ ದಾಖಲೆಯನ್ನು ದಾಖಲಿಸುವ ಸಲುವಾಗಿ ಗಿನ್ನೆಸ್ ವಿಶ್ಚ ದಾಖಲೆ ಸಂಸ್ಥೆ ತನ್ನ ಐದು ಜನ ಸದಸ್ಯರನ್ನು ಇಲ್ಲಿಗೆ ಕಳುಹಿಸಿ ಕೊಟ್ಟಿತ್ತು.

ಮಹಾಶಿವರಾತ್ರಿಯಂದು ನಡೆದ ಶಿವಜ್ಯೋತಿ ಅರ್ಪಣಾ ಕಾರ್ಯಕ್ರಮದಲ್ಲಿ ಒಟ್ಟು 11 ಲಕ್ಷದ 71 ಸಾವಿರ ದೀಪಗಳನ್ನು ಉರಿಸಲಾಯಿತು. ಈ ಸಾಧನೆ ಮಾಡುವ ಮೂಲಕ ಈ ಹಿಂದೆ ಅಯೋಧ್ಯೆಯಲ್ಲಿ ನಿರ್ಮಿಸಿದ್ದ ದಾಖಲೆಯನ್ನು ಉಜ್ಜಿಯಿನಿ ಮುರಿದಿದೆ. ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮ ನವಮಿಯಂದು 9.41 ಲಕ್ಷ ಮಣ್ಣಿನ ದೀಪಗಳನ್ನು ಉರಿಸಲಾಗಿತ್ತು. ಮಂಗಳವಾರ ಸಂಜೆ ಶಿವ ದೇಗುಲದ ಸಮೀಪವಿರುವ ರಾಮಘಾಟ್ (Ramghat) ಮತ್ತು ದತ್ ಅಖಾರಾ ಘಾಟ್‌ನಲ್ಲಿ (Dutt Akhara Ghat) 11,71,078 ದೀಪಗಳು ಮಿನುಗಿದವು. ಶಿವಜ್ಯೋತಿ ಅರ್ಪಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಮಕ್ಕಳು, ಹಿರಿಯರಿಂದ ಈ ಸಾಧನೆ ಸಾಧ್ಯವಾಗಿದೆ. ಈ ಸಾಧನೆಯನ್ನು ನಿರ್ಣಯಿಸಲು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ತನ್ನ ಐದು ಸದಸ್ಯರ ತಂಡವನ್ನು ಉಜ್ಜಯಿನಿಗೆ ಕಳುಹಿಸಿತ್ತು.

ಗಿನ್ನೆಸ್‌ ವಿಶ್ವದಾಖಲೆ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ನಿಶ್ಚಲ್ ಬೋರಟ್ (Nischal Borat) ಅವರು ಈ ಸಾಧನೆಯನ್ನು ದಾಖಲಿಕರಿಸಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರಿಗೆ ಪ್ರಮಾಣಪತ್ರವನ್ನು ನೀಡಿದರು. ಈ ಸಾಧನೆಯಲ್ಲಿ ಮಧ್ಯಪ್ರದೇಶ ರಾಜ್ಯ ಸಂಸ್ಕೃತಿ ಇಲಾಖೆಯು (state culture department) ಅತಿ ಹೆಚ್ಚು ಎಣ್ಣೆ ದೀಪಗಳನ್ನು ಪ್ರದರ್ಶಿಸಿದೆ.

ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಶಿವನ ಧ್ಯಾನ: ವಿವಿಧ ದೇಶಗಳಿಂದ 1 ಲಕ್ಷ ಭಕ್ತರು

ಪರಶಿವನ ಆಶೀರ್ವಾದ ಹಾಗೂ ಜನರ ಅನನ್ಯ ಭಕ್ತಿಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಇದು ಒಂದು ಸೌಭಾಗ್ಯ ಎಂದು ಚೌಹಾಣ್ ಹೇಳಿದ್ದಾರೆ. ಕ್ಷಿಪ್ರಾ (Kshipra)ನದಿ ಮತ್ತು ರಾಮಘಾಟ್(Ramghat) ದತ್ತಾಖರಾ(Dattaakhara) ಸುನ್ಹರಿ(Sunhari) ಘಾಟ್‌ನ ದಡದಲ್ಲಿ ದೀಪಗಳನ್ನು ಸಾಲುಗಳಲ್ಲಿ ಜೋಡಿಸಲಾಗಿದೆ. ದೀಪಾಲಂಕಾರದ ಫೋಟೋಗಳು ಇದೀಗ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಸಂಜೆ 6:42 ರ ಸಮಯಕ್ಕೆ ಸೈರನ್ ಬಾರಿಸಿದ ನಂತರ ಕೇವಲ 10 ನಿಮಿಷಗಳ ಅವಧಿಯಲ್ಲಿ 13 ಲಕ್ಷಕ್ಕೂ ಹೆಚ್ಚು ಜನರು 11 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Mount Kailash: ಶಿವನ ಮನೆ ಕೈಲಾಸವೇ ಜಗತ್ತಿನ ಕೇಂದ್ರಬಿಂದು!


ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಶಿವನಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಂತೆ ಕ್ಷಿಪ್ರಾ ನದಿಯ ಸಣ್ಣ ಸೇತುವೆಯ ಮೇಲಿನಿಂದ ಬಿಟ್ಟ ಸುಡುಮದ್ದುಗಳು ಆಕಾಶವನ್ನು ಬೆಳಗಿದವು. ಕ್ಷಿಪ್ರ ನದಿ ತೀರದ ಹೊರತಾಗಿ ಮಹಾಕಾಳೇಶ್ವರ (Mahakaleshwar)ದೇವಸ್ಥಾನದಲ್ಲಿ 51,000, ಮಂಗಳನಾಥ (Mangalnath) ದೇವಸ್ಥಾನದಲ್ಲಿ 11,000, ಕಾಲಭೈರವ (Kalbhairav) ದೇವಸ್ಥಾನ ಮತ್ತು ಘಾಟ್‌ನಲ್ಲಿ 10,000, ಗಡ್ಕಲಿಕಾ (Gadkalika) ದೇವಸ್ಥಾನದಲ್ಲಿ 1100, ಸಿದ್ಧವಟ್ (Siddhavat)  ದೇವಸ್ಥಾನ ಮತ್ತು ಘಾಟ್‌ನಲ್ಲಿ 6,000 ಮತ್ತು ಹರಸಿದ್ಧಿ(Harsiddhi) ದೇವಸ್ಥಾನದಲ್ಲಿ 5,000 ದೀಪಗಳನ್ನು ಬೆಳಗಿಸಲಾಯಿತು.

ಸ್ಥಳೀಯ ಅಂಗಡಿಗಳ ಮಾಲೀಕರು ಅಂಗಡಿಗಳಲ್ಲಿ ಮತ್ತು ಸ್ಥಳೀಯ ನಿವಾಸಿಗಳು ಮನೆಗಳಲ್ಲಿ ದೀಪಗಳನ್ನು ಬೆಳಗಿಸಿ ಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಿದರು. ಅಷ್ಟೇ ಅಲ್ಲ ಇಡೀ ಪ್ರದೇಶದಲ್ಲಿ ತಪಾಸಣೆ ನಡೆಸಲು ಐದು ಡ್ರೋನ್‌ಗಳನ್ನು ಬಳಸಲಾಗಿತ್ತು. ಉಜ್ಜಯಿನಿ ನಗರದ ಸ್ಥಾಪನಾ ದಿನವನ್ನು ಗುಡಿ ಪಾಡ್ವಾದಂದು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಚೌಹಾಣ್ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ