ಕೊರೋನಾ ವೈರಸ್ ದೇಶದಲ್ಲಿ ನಿಯಂತ್ರಣಕ್ಕೆ ಮೀರಿ ಸಾಗುತ್ತಿದೆ. ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದರೂ ಇದೀಗ ವೈರಸ್ ಸಂಖ್ಯೆ ಇಳಿಕೆಯಾಗುತ್ತಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8 ಗಂಟೆಗೆ ಕೊರೋನಾ ನಿಯಂತ್ರಣ ಕುರಿತು ಚರ್ಚಿಸಲು ಮಹತ್ವದ ಸಭೆ ಕರೆದಿದ್ದಾರೆ. ಕುರಿತ ಹೆಚ್ಚಿನ ವಿವರ ಇಲ್ಲಿದೆ
ನವದೆಹಲಿ(ಏ.17): ದೇಶದಲ್ಲಿ ಕೊರೋನಾ ಪರಿಸ್ಥಿತಿ ಅತ್ಯಂತ ಭೀಕರವಾಗುತ್ತಿದೆ. ದಿನವೊಂದಕ್ಕೆ 2 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಆದರೆ ಕೊರೋನಾ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಕೊರೋನಾ ನಿಯಂತ್ರಣ, ಕೊರೋನಾ ಲಸಿಕೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮಹತ್ವದ ಸಭೆ ಕರೆದಿದ್ದಾರೆ.
ಕೊರೋನಾ ಸಭೆ ಬಳಿಕ ಮಹತ್ವದ ಸೂಚನೆ ನೀಡಿದ ಪ್ರಧಾನಿ ಮೋದಿ!.
undefined
ಇಂದು(ಏ.17) ರಾತ್ರಿ 8 ಗಂಟೆಗೆ ಸಭೆ ಕರೆಯಲಾಗಿದೆ. ಉನ್ನತ ಅಧಿಕಾರಿಗಳು, ತಜ್ಞರು, ಹಾಗೂ ಪ್ರಮುಖ ಸಚಿವರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೇಶದಲ್ಲಿನ ಕೊರೋನಾ ಪರಿಸ್ಥಿತಿ, ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕೊರೋನಾ ಲಸಿಕೆ ವಿತರಣೆ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಒಂದು ಡೋಸ್ ಲಸಿಕೆಯನ್ನು ವ್ಯರ್ಥ ಮಾಡಬೇಡಿ: ನರೇಂದ್ರ ಮೋದಿ!
ದೇಶದಲ್ಲಿ 2ನೇ ಅಲೆ ಆರಂಭಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದ್ದರು. ಪ್ರಮುಖ ಅಧಿಕಾರಿಗಳು, ತಜ್ಞರ ಜೊತೆ ಸಭೆ ನಡೆಸಿದ ಮೋದಿ, ಬಳಿಕ ಎಲ್ಲಾ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಹತ್ವದ ಸಲಹೆ ನೀಡಿದ್ದರು. ಇದೀಗ ದೇಶದಲ್ಲಿನ ಕೊರೋನಾ ಪರಿಸ್ಥಿತಿ ಪರಾಮರ್ಶಿಸಿಲು ಮತ್ತೊಂದು ಸಭೆ ಕರೆಯಲಾಗಿದೆ.
ಮೋದಿ ಐಡಿಯಾ, 2 ವಾರದಲ್ಲಿ ಮ್ಯಾಜಿಕ್: 1000ಕ್ಕೂ ಹೆಚ್ಚು ಕೇಸಿದ್ದರೂ ಮಣಿಪಾಲ ಸೋಂಕುಮುಕ್ತ!