* ಭಾರತೀಯ ವಾಯುಪಡೆಗೆ (IAF) ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳ (LCH) ಹಸ್ತಾಂತರ
* ಲಘು ಯುದ್ಧ ಹೆಲಿಕಾಪ್ಟರ್‌ಗಳ ಮೊದಲ 15 ಸೀಮಿತ ಸರಣಿ ಉತ್ಪಾದನೆ ಇದು
* ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (HAL) ನಿಂದ ಹೊರಬರುತ್ತಿರುವ ಮೊದಲ ದಾಳಿಕಾರ ಹೆಲಿಕಾಪ್ಟರ್
ಗಿರೀಶ್ ಲಿಂಗಣ್ಣ
ಬೆಂಗಳೂರು(ಡಿ.01): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ವಾಯುಪಡೆಗೆ (IAF) ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳ (LCH) ಮೊದಲ ತಂಡವನ್ನು ಹಸ್ತಾಂತರಿಸಿದ್ದಾರೆ - ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗಾಗಿ ಲಘು ಯುದ್ಧ ಹೆಲಿಕಾಪ್ಟರ್‌ಗಳ ಮೊದಲ 15 ಸೀಮಿತ ಸರಣಿ ಉತ್ಪಾದನೆ (LSP) ಇದಾಗಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (HAL) ನಿಂದ ಹೊರಬರುತ್ತಿರುವ ಮೊದಲ ದಾಳಿಕಾರ ಹೆಲಿಕಾಪ್ಟರ್ ಇದಾಗಿದೆ. ಇದರ ಧನಾತ್ಮಕ ಅಂಶಗಳನ್ನು ಪರಿಗಣಿಸಿದರೆ, ನಕಾರಾತ್ಮಕತೆ ಅಷ್ಟೇನೂ ಅಲ್ಲ.
LCH ಒಂದು ಅವಳಿ-ಎಂಜಿನ್ ಹೆಲಿಕಾಪ್ಟರ್ ಆಗಿದ್ದು, ಐದರಿಂದ ಎಂಟು ಟನ್‌ಗಳ ನಡುವೆ ತೂಗುತ್ತದೆ ಮತ್ತು 5,000-ಮೀಟರ್‌ಗಳಷ್ಟು (16,400-ಅಡಿ) ಎತ್ತರದಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಏಕೈಕ ದಾಳಿ ಹೆಲಿಕಾಪ್ಟರ್ ಎಂದು ಬಣ್ಣಿಸಲಾಗಿದೆ. ಇದು ವಿವಿಧ -ಒಣ ಮರುಭೂಮಿಯ ಪರಿಸ್ಥಿತಿಗಳಲ್ಲಿ ಮೈನಸ್ 50 ಡಿಗ್ರಿ ಸೆಲ್ಸಿಯಸ್‌ನಿಂದ ಪ್ಲಸ್ 50 ಡಿಗ್ರಿ ಸೆಲ್ಸಿಯಸ್- ತಾಪಮಾನಗಳಲ್ಲಿ ಕಾರ್ಯನಿರ್ವಹಿಸಬಲ್ಲದು. ಸ್ವದೇಶಿ ಹೆಲಿಕಾಪ್ಟರ್‌ನಲ್ಲಿ ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ನೆಲಕ್ಕೆ ದಾಳಿ ಮಾಡುವ ಕ್ಷಿಪಣಿಗಳನ್ನು ಅಳವಡಿಸಲಾಗಿದೆ ಮತ್ತು 20 ಎಂಎಂ ಗನ್ ಮತ್ತು 70 ಎಂಎಂ ರಾಕೆಟ್‌ಗಳನ್ನು ಹೊಂದಿದೆ.
Indian Navy: ಭಾರತೀಯ ನೌಕಾಪಡೆಗೆ ಬೇಕಿದೆ ಖಾಸಗಿ ಸಹಯೋಗ!
ಸುಧಾರಿತ ಏವಿಯಾನಿಕ್ಸ್ ಮತ್ತು ಶಸ್ತ್ರಾಸ್ತ್ರಗಳ ಸಹಾಯದಿಂದ LCH ಗಾಳಿ ಮತ್ತು ನೆಲದ ಗುರಿಗಳನ್ನು ಪಡೆದುಕೊಳ್ಳಬಹುದು ಮತ್ತು ತಟಸ್ಥಗೊಳಿಸಬಹುದು.
ಪೂರ್ಣ 360 ಡಿಗ್ರಿಗಳ ಪರಿಭ್ರಮಣ ಸಾಮರ್ಥ್ಯವನ್ನು LCH ಹೊಂದಿದೆ; ಇದರರ್ಥ, ಚಾಪರ್ ಅನ್ನು ಗಾಳಿಯಲ್ಲಿಯೇ ವೇಗವಾಗಿ ತಿರುಗಿಸಬಹುದು. HAL ಹೇಳುವಂತೆ, LCH ಭಾರತದಲ್ಲಿ ಮೊದಲ ಬಾರಿಗೆ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಲಾದ ಒಂದು ಸಮರ್ಪಿತ ಯುದ್ಧ ಹೆಲಿಕಾಪ್ಟರ್ ಆಗಿದೆ. ಭಾರತೀಯ ಸಶಸ್ತ್ರ ಪಡೆಗಳ ನಿರ್ದಿಷ್ಟ ಆವಶ್ಯಕತೆಗಳನ್ನು ಪೂರೈಸುವ ಶಸ್ತ್ರಾಸ್ತ್ರಗಳು ಮತ್ತು ಇಂಧನದ ಗಣನೀಯ ಹೊರೆಯೊಂದಿಗೆ 5,000 ಮೀ. (16,400 ಅಡಿ) ಎತ್ತರದಲ್ಲಿ ಲ್ಯಾಂಡ್ ಆಗಬಲ್ಲ ಮತ್ತು ಟೇಕ್-ಆಫ್ ಮಾಡಬಲ್ಲ ವಿಶ್ವದ ಏಕೈಕ ದಾಳಿ ಹೆಲಿಕಾಪ್ಟರ್ ಇದಾಗಿದೆ.
ಎಲ್ಲ 15 ಹೆಲಿಕಾಪ್ಟರ್‌ಗಳ ತಯಾರಿಗೆ ಅಗತ್ಯವಿರುವ ಸಾಮಗ್ರಿಗಳ ಸಂಗ್ರಹಣೆ ಪೂರ್ಣಗೊಂಡಿದೆ. ಬಳಕೆದಾರರಿಗೆ ತಲುಪಿಸಲು ಮೂರು ಹೆಲಿಕಾಪ್ಟರ್‌ಗಳು ಸಿದ್ಧವಾಗಿವೆ ಮತ್ತು ಬಾಕಿ ಉಳಿದಿರುವ ಹೆಲಿಕಾಪ್ಟರ್‌ಗಳು ಉತ್ಪಾದನೆಯ ಮುಂದುವರಿದ ಹಂತದಲ್ಲಿವೆ.ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಎಂಐ-35 ಹಿಂದ್ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ಸಾಧ್ಯವಾಗಲಿಲ್ಲ. ಅಂತಹ ಎತ್ತರದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ಶಕ್ತಿಯ ಕೊರತೆ ಅವುಗಳಲ್ಲಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಅಗತ್ಯಗಳಿಗೆ ಅನುಸಾರವಾಗಿ ರೂಪುಗೊಂಡಿರುವ ಈ ಹೆಲಿಕಾಪ್ಟರ್‌ಗಳು ತಮ್ಮೆಲ್ಲ ಅಭಿವೃದ್ಧಿ ಪ್ರಯೋಗಗಳನ್ನು ಪೂರ್ಣಗೊಳಿಸಿವೆ. ಆದರೆ ವಿಪರ್ಯಾಸವೆಂದರೆ, ಪ್ರಸ್ತುತ ಚೀನೀ ಸೇನೆಯೊಂದಿಗೆ ಬಿಕ್ಕಟ್ಟಿನಲ್ಲಿರುವ ಪ್ರದೇಶದಲ್ಲಿ ಗೇಮ್ ಚೇಂಜರ್ ಆಗಿ ಬರಬಹುದಾದ ಶಸ್ತ್ರಾಸ್ತ್ರ ವ್ಯವಸ್ಥೆಗಳಿಗೆ ಆದೇಶಗಳನ್ನು ನೀಡಲು ಭಾರತೀಯ ಸೇನೆಯು ಯಾವುದೇ ಆತುರವನ್ನು ತೋರುತ್ತಿಲ್ಲ.
ರಷ್ಯಾ ನಿರ್ಮಿತ ಫೈಟರ್ ಜೆಟ್‌ಗೆ ಹೊಸ ರೂಪ ಕೊಟ್ಟ HAL: ಇದು ಸ್ವದೇಶೀ ಸುಖೋಯ್ ಕಥೆ!
ಮೂಲಗಳ ಪ್ರಕಾರ ಭಾರತೀಯ ಸೇನೆಯು ALH-ಧ್ರುವದ ಸಶಸ್ತ್ರ ರೂಪಾಂತರವಾಗಿರುವ ALH- ರುದ್ರ ಹೆಲಿಕಾಪ್ಟರ್ ಅನ್ನು ಇಷ್ಟಪಟ್ಟಿದೆ, ಇದನ್ನು ಎರಡು-ಉದ್ದೇಶಗಳ ಹಾರಾಟ ವಾಹನವಾಗಿ ಬಳಸಬಹುದು. ಏಕೆಂದರೆ, ಇಬ್ಬರು ಪೈಲಟ್‌ಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರಯಾಣಿಕರನ್ನು ಇದು ಸಾಗಿಸಬಲ್ಲದು. ಸೇನೆಯು 65 ALH-ರುದ್ರ ಹೆಲಿಕಾಪ್ಟರ್‌ಗಳನ್ನು ಸೇರ್ಪಡೆಗೊಳಿಸಿದೆ ಮತ್ತು LCH ಕಡೆಗೆ ಒಲವು ತೋರಲು ಹಿಂಜರಿಯುತ್ತಿದೆ.
LCH ವೆಪನ್ಸ್ ಪ್ರೋಗ್ರಾಂನಲ್ಲಿ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿಗಳ (ATGM) ಕೊರತೆ ಮತ್ತು DRDO ನಿಂದ ಹೆಲಿಕಾಪ್ಟರ್‌ಗಳಿಗಾಗಿ ATGM ಅಭಿವೃದ್ಧಿಯ ನಿಧಾನಗತಿಯು ಈ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ಸಿದ್ಧವಾಗಿಲ್ಲದಿರುವುದಕ್ಕೆ ಕಾರಣಗಳಾಗಿವೆ. DRDO ನೇತೃತ್ವದ ATGM ಕಾರ್ಯಕ್ರಮದ ನಿರಂತರ ವಿಳಂಬದಿಂದಾಗಿ ALH-ರುದ್ರ ಮತ್ತು LCH ಅನ್ನು 'ಹಲ್ಲಿಲ್ಲದ ಹಾವು' ಎಂದು ಸೇನಾ ಮಾಜಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ವಿವರಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಭಾರತೀಯ ಸೇನೆಯು LCH ನ ಅತಿದೊಡ್ಡ ನಿರ್ವಾಹಕರಾಗಬೇಕಾಗಿರುವುದರಿಂದ, IAF ಭಾರತೀಯ ಸೇನೆಯ ಆದೇಶದ ಬೆನ್ನಿನ ಮೇಲೆ ಜೋತು ಬೀಳುತ್ತಿರುವಂತೆ ಮಾತ್ರ ತೋರುತ್ತಿದೆ. ಸೇನೆಯು ಬದ್ಧತೆಯನ್ನು ತೋರಿಲ್ಲವಾದ್ದರಿಂದ, IAFನ ಪರಿಸ್ಥಿತಿಯು ಹಾಗೇ ಇರುತ್ತದೆ.
ಸಶಸ್ತ್ರ ಪಡೆಗಳಿಂದ ಇಂತಹ ತಣ್ಣನೆಯ ಪ್ರತಿಕ್ರಿಯೆಗಳು LCH ಪ್ರೋಗ್ರಾಂಗೆ ಉಪಯುಕ್ತವಾಗುವುದಿಲ್ಲ. ಇದರಿಂದ, ಅವುಗಳ ಸಂಗ್ರಹಣೆಗೆ ಆಸಕ್ತಿ ಹೊಂದಿರುವ ಇತರ ನಿರೀಕ್ಷಿತ ಗ್ರಾಹಕರ ದೃಷ್ಟಿಯಲ್ಲೂ ಅದರ ಇಮೇಜ್‌ಗೆ ಧಕ್ಕೆಯಾಗುತ್ತದೆ.
ಕೊನೆಯದಾಗಿ, ಸೈನ್ಯವು ಅದನ್ನು ಖರೀದಿಸುವ ಉದ್ದೇಶದ ಪತ್ರವನ್ನು ನೀಡದ ಕಾರಣ, ನಮ್ಮ ಜನರಲ್‌ಗಳು ಮತ್ತು ವಾಯುಪಡೆಯ ಮೇಲಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವ್ಯವಸ್ಥೆಯನ್ನು ಸಂಗ್ರಹಿಸಲು ಇನ್ನೂ ಸಾಧ್ಯವಾಗದ ಕಾರಣ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ಹಣವನ್ನು ಎರವಲು ಪಡೆಯಬೇಕಾದ ಆಂತರಿಕ ನಿಧಿಯಿಂದ HAL ಅದನ್ನು ತಯಾರಿಸಿದೆ.
- ಲೇಖಕರು- ಗಿರೀಶ್ ಲಿಂಗಣ್ಣ, ನಿರ್ದೇಶಕರು, ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್.