ಮೋದಿ ಸರ್ಕಾರದಿಂದ ಸಹರಾ ರೀಫಂಡ್ ಪೋರ್ಟಲ್ ಆರಂಭ, ಹಣ ಕಳೆದುಕೊಂಡವರಿಗೆ 45 ದಿನದಲ್ಲಿ ವಾಪಸ್!

By Suvarna NewsFirst Published Jul 18, 2023, 10:16 PM IST
Highlights

ಸಹರಾ ಸಹಕಾರಿ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಕಳೆದುಕೊಂಡವರಿಗೆ ಮರುಪಾವತಿಸಲು ಮೋದಿ ಸರ್ಕಾರ ಇದೀಗ ಸಹರಾ ರೀಫಂಡ್ ಪೋರ್ಟಲ್ ಆರಂಭಿಸಿದೆ. ಈ ಮೂಲಕ ಹಲವರು ಬೆವರಿನ ಹಣ ಮರುಪಾವತಿಗೆ ಮಹತ್ವದ ಹೆಜ್ಜೆ ಇಟ್ಟಿದೆ. ಅರ್ಜಿ ಸಲ್ಲಿಸಿದ 45 ದಿನಕ್ಕೆ ಹೂಡಿಕೆ ಮಾಡಿದ ಹಣ ವಾಪಸ್ ಸಿಗಲಿದೆ.

ನವದೆಹಲಿ(ಜು.18)  ಸಹರಾ ಸಹಕಾರಿ ಸಂಸ್ಥೆ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಹಲವರು ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಕೈಸುಟ್ಟುಕೊಂಡಿದ್ದಾರೆ. ಹಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಲು ಪ್ರಧಾನಿ ಮೋದಿ ಸರ್ಕಾರ ಇದೀಗ ಸಹರಾ ರೀಫಂಡ್ ಪೋರ್ಟಲ್ ಆರಂಭಿಸಿದೆ. ಗೃಹ ಸಚಿವ ಅಮಿತ್ ಶಾ ನೂತನ ಸಹರಾ ರೀಫಂಡ್ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಹಣ ಕಳೆದುಕೊಂಡವರು ತಮ್ಮ ದಾಖಲೆ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ 45 ದಿನಕ್ಕೆ ಖಾತೆಗೆ ಹಣ ಜಮೆ ಆಗಲಿದೆ.

ಮಾರ್ಚ್ 29 ರಂದು ಸುಪ್ರೀಂ ಕೋರ್ಟ್ ಸಹರಾ ಪ್ರಕರಣದ ಕುರಿತು ಮಹತ್ವದ ಆದೇಶ ನೀಡಿತ್ತು. ಸೆಬಿ ಸಹರಾ ರೀಫಂಡ್ ಖಾತೆಯಲ್ಲಿದ್ದ 5,000 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ಹಂಚಲು ನಿರ್ದೇಶ ನೀಡಿತ್ತು. ಇದರಂತೆ ಕೇಂದ್ರ ಸರ್ಕಾರ ಇದಕ್ಕಾಗಿ ರೀಫಂಡ್ ಫೋರ್ಟಲ್ ಆರಂಭಿಸಿದೆ.

ITR Filing: ಅಧಿಕ ತೆರಿಗೆ ರೀಫಂಡ್ ಪಡೆಯಲು ಈ 5 ಟಿಪ್ಸ್ ಅನುಸರಿಸಿ

ಮೋದಿ ಸರ್ಕಾರ ಕೋಟ್ಯಂತರ ಜನರಿಗೆ ಭರವಸೆಯ ಹೊಸ ಬೆಳಕನ್ನು ನೀಡಿದೆ. ಸಹರಾ ಸಹಕಾರಿ ಸಂಘದಲ್ಲಿ ಹಣ ಹೂಡಿಕೆ ಮಾಡಿ ಸಿಗದೇ ಪರದಾಡಿದ ಜನರು, ಸುಲಭವಾಗಿ ಹಾಗೂ ಪಾರದರ್ಶಕ ರೀತಿಯಲ್ಲಿ ಹಣ ಮರಳಿ ಪಡೆಯಲಿದ್ದಾರೆ. ಇಧಕ್ಕಾಗಿ ಸಹಕಾರ ಮರುಪಾವತಿ ಪೋರ್ಟಲ್ ಆರಂಭಿಸಲಾಗಿದೆ. ಹೂಡಿಕೆದಾರರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆ ಬಳಿಕ ದಾಖಲೆ ಪರಿಶೀಲನೆ ನಡೆಯಲಿದೆ. ಅರ್ಜಿದಾರ ಆಧಾರ್ ಲಿಂಕ್ ಮಾಡಿದ ಖಾತೆಗೆ ಹೂಡಿಕೆ ಹಣ ವರ್ಗಾವಣೆ ಮಾಡಲಾಗುತ್ತದೆ. ಇದರಿಂದ ನೊಂದಿರುವ ಹಲವು ಕುಟುಂಬಗಳಿಗೆ ನೆಮ್ಮದಿ ಸಿಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.  

ಮೊದಲ ಹಂತದಲ್ಲಿ 10,000 ರೂಪಾಯಿ ಹೂಡಿಕೆ ಮಾಡಿದವರಿಗೆ ಹಣ ವಿತರಣೆ ಮಾಡಲಾಗುತ್ತದೆ. ಸುಮಾರು 1 ಕೋಟಿ ಮಂದಿ 10,000 ರೂಪಾಯಿಯಂತೆ ಹೂಡಿಕೆ ಮಾಡಿದ್ದಾರೆ. ಬಳಿಕ ಹಂತ ಹಂತವಾಗಿ ಹಣ ಮರುಪಾವತಿ ಮಾಡಲಾಗುತ್ತದೆ. 5,000 ಕೋಟಿ ರೂಪಾಯಿ ಹಣವನ್ನು ಹೂಡಿಕೆದಾರರಿಗೆ ನೀಡಲಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಆದಾಯ ತೆರಿಗೆ ವೆಬ್‌ಸೈಟ್‌ನ ಲೋಪ ಬಳಸಿಕೊಂಡು ಐಟಿ ರೀಫಂಡ್‌ ಸ್ಕ್ಯಾಮ್‌ ಮಾಡಿದ್ದ ವ್ಯಕ್ತಿ ಬಂಧನ!

ಸಹರಾ ಮರುಪಾವತಿ ಮೂಲಕ ಹೂಡಿಕೆ ಹಣ ವಾಪಸ್ ಪಡೆಯಲು ಕೆಲ ದಾಖಲೆ ಸಲ್ಲಿಕೆ ಮಾಡಬೇಕು
ಹೂಡಿಕೆಯ ಸದಸ್ಯತ್ವ ಸಂಖ್ಯೆ
ಹೂಡಿಕೆ ಮಾಡಿದ ಖಾತೆ ಸಂಖ್ಯೆ
ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ
ಪಾಸ್‌ಬುಕ್ ವಿವರ
50,000 ರೂಪಾಯಿಗಿಂತ ಮೇಲಿದ್ದರೆ ಪಾನ್ ಕಾರ್ಡ್ ಸಂಖ್ಯೆ

ಸುಬ್ರತೋ ರಾಯ್‌ ಸಹರಾ ಇಂಡಿಯಾ ಪರಿವಾರದ ಅಧ್ಯಕ್ಷರಾಗಿದ್ದರು. ರಿಯಲ್‌ ಎಸ್ಟೇಟ್‌, ಬ್ಯಾಂಕೇತರ ಹಣಕಾಸು ಸಂಸ್ಥೆ ಸೇರಿದಂತೆ ಹತ್ತಾರು ಉದ್ಯಮದಲ್ಲಿ ಏಕಕಾಲಕ್ಕೆ ಕಾಲಿಟ್ಟರು. ಇದೇ ವೇಳೆ ಸಹರಾ ವಿಮಾನಯಾನ ಸಂಸ್ಥೆ ಖರೀದಿಸಿದರು. ಈ ಪೈಕಿ ಹಲವು ಉದ್ಯಮಗಳು ಕೈಕೊಟ್ಟು, ಹಾಲಿ ಸಾವಿರಾರು ಕೋಟಿ ಸಾಲದಲ್ಲಿ ಮುಳುಗಿದ್ದಾರೆ. ಇದೇ ಪ್ರಕರಣಗಳ ಸಂಬಂಧ ಜೈಲು ಪಾಲಾಗಿದ್ದಾರೆ. ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ರಾಯ್ ಆರಂಭಿಸಿದ ಸಹರಾ ಸಹಕಾರಿ ಸಂಸ್ಥೆಯಲ್ಲಿ ಕೋಟ್ಯಾಂತರ ಮಂದಿ ಹೂಡಿಕೆ ಮಾಡಿದ್ದರು.

click me!