
ನವದೆಹಲಿ(ಮಾ.07) ಭಾರತದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿ ತನಿಖೆಯಲ್ಲಿ ಪ್ರಮುಖವಾಗಿ ಮೊಹಮ್ಮದ್ ಖಾಸಿಮ್ ಗುಜ್ಜರ್ ಹೆಸರು ಕೇಳಿಬಂದಿದೆ. ಭಯೋತ್ಪಾದನಾ ದಾಳಿಗೆ ಹಣಕಾಸು ನೆರವು, ಡ್ರೋನ್ ನೆರವು, ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಹಲವು ರೀತಿಯಲ್ಲಿ ಈ ಮೊಹಮ್ಮದ್ ಖಾಸಿಮ್ ಗುಜ್ಜರ್ ನೆರವಾಗಿದ್ದಾನೆ. ನೇರವಾಗಿ ಉಗ್ರ ಕೃತ್ಯಗಳಲ್ಲಿ ಕಾಣಿಸಿಕೊಳ್ಳದ ಗುಜ್ಜರ್, ತೆರೆಮರೆಯಲ್ಲಿ ದಾಳಿಯ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿರುವುದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಲಷ್ಕರ್ ಇ ತೈಬಾ ಸದಸ್ಯ ಮೊಹಮ್ಮದ್ ಖಾಸಿಮ್ ಗುಜ್ಜರ್ ಭಯೋತ್ಪಾದಕ ಎಂದು ಘೋಷಿಸಿದೆ.
ಭಾರತದಲ್ಲಿ ನಡೆದೆ ಕೆಲ ಪ್ರಮುಖ ಉಗ್ರ ದಾಳಿಯ ಹಿಂದೆ ಇದೇ ಮೊಹಮ್ಮದ್ ಖಾಸಿಮ್ ಗುಜ್ಜರ್ ಕೈವಾಡ ಬಯಲಾಗಿದೆ. ಹಲವು ಸಾವು ನೋವುಗಳಿಗೆ ಈತ ಕಾರಣನಾಗಿದ್ದಾನೆ. ಭಾರತದ ಸಾರ್ವಭೌಮತ್ವ, ಏಕತೆಗೆ ಧಕ್ಕೆ ತರುವ ಯಾವುದೇ ಶಕ್ತಿಯನ್ನು ಭಾರತ ಸಹಿಸುವುದಿಲ್ಲ. ಅಂತರವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಮಿತ್ ಶಾ ಘೋಷಿಸಿದ್ದಾರೆ.
ಪ್ರಧಾನಿ ಸಿಂಗ್ ಕೈಕುಲುಕಿ ಆತಿಥ್ಯ ಸ್ವೀಕರಿಸಿದ ಉಗ್ರ ಯಾಸಿನ್ ಮಲಿಕ್‌ಗೆ ಸಂಕಷ್ಟ, 1990ರ ಹತ್ಯೆ ಸಾಕ್ಷಿ ಲಭ್ಯ!
ಮೊಹಮ್ಮದ್ ಖಾಸಿಮ್ ಗುಜ್ಜರ್, ಗಡಿಯೊಳಗೆ ನಡೆದಿರುವ ಹಲವು ಕೃತ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿದ್ದಾರೆ. ಉಗ್ರರಿಗೆ ಹಣಕಾಸಿನ ನರೆವು, ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ ಸ್ಫೋಟಗಳ ಪೂರೈಕೆಯನ್ನು ಈತ ಮಾಡಿದ್ದಾರೆ. ದೇಶದಲ್ಲಿನ ಭಯೋತ್ಪಾದಕ ಕೃತ್ಯಕ್ಕೆ ಪ್ಲಾನ್ ರೂಪಿಸಿದ್ದಾನೆ. ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಭಯೋತ್ಪಾದಕ ಸಂಘಟನೆಗೆ ನೇಮಕ ಮಾಡುವುದು, ಯುವಕರಿಗೆ ಹಣದ ಆಮಿಷ ನೀಡಿ ಉಗ್ರ ಕೃತ್ಯಕ್ಕೆ ಬಳಸಿಕೊಳ್ಳುವುದನ್ನು ಈತ ಮಾಡಿದ್ದಾನೆ.
32 ವರ್ಷದ ಮೊಹಮ್ಮದ್ ಖಾಸಿಮ್ ಗುಜ್ಜರ್ ಜಮ್ಮು ಮತ್ತು ಕಾಶ್ಮೀರದ ರೆಸಾಯಿ ಜಿಲ್ಲೆಯವನಾಗಿದ್ದು, ಕಾಶ್ಮೀರದ ಬಹುತೇಕ ಕಡೆಗಳಲ್ಲಿನ ಉಗ್ರ ದಾಳಿಯಲ್ಲಿ ತೆರೆ ಮೆರೆಯಲ್ಲಿ ಕೆಲಸ ಮಾಡಿದ್ದಾನೆ. ಭಾರತೀಯ ಸೇನೆಯ ಕಣ್ತಪ್ಪಿಸಿಕೊಂಡಿರುವ ಈತ ಪಾಕಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಲೆಸಿದ್ದಾನೆ. ಭಾರತೀಯ ಸೇನೆ ಮೇಲೆ ನಡೆದ ಹಲವು ಭಯೋತ್ಪಾದನಾ ಕೃತ್ಯಕ್ಕೆ ಹಲವು ಮಾಹಿತಿ ನೀಡಿ ದಾಳಿಯನ್ನು ಯಶಸ್ವಿಗೊಳಿಸಿದ ಮೊಹಮ್ಮದ್ ಖಾಸಿಮ್ ಗುಜ್ಜಾರ್ ಉಗ್ರ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ಮಂಗಳೂರಿನ ಏಜೆಂಟ್‌ರಿಂದ ಪಾಕ್‌ನಲ್ಲಿ ಇಬ್ಬರು ಉಗ್ರರ ಹತ್ಯೆ: ದಾಖಲೆ ಬಿಡುಗಡೆ ಮಾಡಿದ ಪಾಕಿಸ್ತಾನ
ಈ ಕುರಿತು ಕೇಂದ್ರ ಗೃಹ ಸಚಿವಾಲಯ ಪ್ರಕಣೆ ಹೊರಡಿಸಿದೆ. ಭಯೋತ್ಪಾದನೆಯನ್ನು ಮೋದಿ ಸರ್ಕಾರ ಎಳ್ಳಷ್ಟು ಸಹಿಸುವುದಿಲ್ಲ. ಭಾರತದಲ್ಲಿ ನಡೆದ ಹಲವು ಉಗ್ರದಾಳಿಯಲ್ಲಿ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡಿರುವ ಮೊಹಮ್ಮದ್ ಖಾಸಿಮ್ ಗುಜ್ಜರ್ ಭಯೋತ್ಪಾದಕ ಎಂದು ಗೃಹ ಸಚಿವಾಲಯ ಘೋಷಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ