ಜಪಾನ್ ಪ್ರಧಾನಿಗೆ 'ಕೃಷ್ಣ ಪಂಖಿ'ಯನ್ನು ಉಡುಗೊರೆಯಾಗಿ ಕೊಟ್ಟ ಪಿಎಂ ಮೋದಿ, ವಿಶೇಷತೆ ಏನು ಗೊತ್ತಾ?

Published : Mar 20, 2022, 05:23 PM ISTUpdated : Mar 20, 2022, 05:26 PM IST
ಜಪಾನ್ ಪ್ರಧಾನಿಗೆ 'ಕೃಷ್ಣ ಪಂಖಿ'ಯನ್ನು ಉಡುಗೊರೆಯಾಗಿ ಕೊಟ್ಟ ಪಿಎಂ ಮೋದಿ, ವಿಶೇಷತೆ ಏನು ಗೊತ್ತಾ?

ಸಾರಾಂಶ

* ಭಾರತಕ್ಕೆ ಭೇಟಿ ನೀಡುತ್ತಿರುವ ಜಪಾನ್ ಪ್ರಧಾನಿಗೆ ಮೋದಿ ವಿಶೇಷ ಗಿಫ್ಟ್ * ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಕೈಸೇರಿತು ಕೃಷ್ಣ ಪಂಖಿ * ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾದ ಕೃಷ್ಣ ಪಂಖಿಯ ವಿಶೇಷತೆ ಹೀಗಿದೆ

ನವದೆಹಲಿ(ಮಾ.20): ಭಾರತಕ್ಕೆ ಭೇಟಿ ನೀಡುತ್ತಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಉಡುಗೊರೆ 'ಕೃಷ್ಣ ಪಂಖಿ' ನೀಡಿದ್ದಾರೆ. ಜಪಾನಿನ ಪ್ರಧಾನಿಗೆ ಉಡುಗೊರೆಯಾಗಿ ನೀಡಿರುವ ಈ ಕೃಷ್ಣ ಪಂಖಿ ಅತ್ಯಂತ ಸುಂದರವಾಗಿದೆ. ಶ್ರೀಗಂಧದಿಂದ ಮಾಡಿದ ಈ ಕೃಷ್ಣ ಗರಿಯನ್ನು ರಾಜಸ್ಥಾನದ ಕುಶಲಕರ್ಮಿಗಳು ಬಹಳ ಶ್ರಮವಹಿಸಿ ತಯಾರಿಸಿದ್ದಾರೆ. ಮಾಹಿತಿ ಪ್ರಕಾರ, ಕುಶಲಕರ್ಮಿಗಳು ಇದನ್ನು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಿದ್ದಾರೆ. ಕೃಷ್ಣ ಪಂಖಿಯ ಮೇಲೂ ದೊಡ್ಡ ಕೆತ್ತನೆಗಳನ್ನು ಮಾಡಲಾಗಿದೆ.

ಇದು ಕೃಷ್ಣ ಪಂಖಿಯ ವಿಶೇಷತೆ ಹೀಗಿದೆ

ಈ ಸುಂದರವಾದ ಕೃಷ್ಣ ಗರಿಗಳ ಮೇಲ್ಭಾಗದಲ್ಲಿ, ಭಾರತದ ರಾಷ್ಟ್ರೀಯ ಪಕ್ಷಿ ನವಿಲುಳನ್ನು ಕೆತ್ತಲಾಗಿದೆ. ಈ ಸಂಪೂರ್ಣ ಆಕೃತಿಯು ಸಾಂಪ್ರದಾಯಿಕ ಕೈ ಚಾಲಿತ ಫ್ಯಾನ್‌ನಂತಿದೆ. ಇದರೊಂದಿಗೆ, ಶ್ರೀಕೃಷ್ಣನ ವಿವಿಧ ಭಂಗಿಗಳನ್ನು ಅದರ ಬದಿಗಳಲ್ಲಿ ಕಲಾತ್ಮಕ ಆಕೃತಿಗಳ ಮೂಲಕ ತೋರಿಸಲಾಗಿದೆ, ಇದು ಪ್ರೀತಿ, ದಯೆ ಮತ್ತು ಸಹಾನುಭೂತಿಯ ಸಂಕೇತವಾಗಿದೆ.

ಭಾರತದಲ್ಲಿ ಇವಿ ವಾಹನ ತಯಾರಿಕೆಗೆ ಸುಜುಕಿ ₹104 ಶತಕೋಟಿ ಹೂಡಿಕೆ

ಸುದ್ದಿ ಸಂಸ್ಥೆಯ ಪ್ರಕಾರ, 'ಪಂಖಿ' ಅಂದರೆ ಈ ಗರಿಯನ್ನು ಸಾಂಪ್ರದಾಯಿಕ ಉಪಕರಣಗಳೊಂದಿಗೆ ಉತ್ತಮವಾಗಿ ಕೆತ್ತಲಾಗಿದೆ. ಅದರ ಬದಿಗಳಲ್ಲಿ ಸಣ್ಣ 'ಘುಂಗಾರು' (ಸಣ್ಣ ಸಾಂಪ್ರದಾಯಿಕ ಗಂಟೆಗಳು) ಗಾಳಿಯ ಹರಿವಿನೊಂದಿಗೆ ರಿಂಗಣಿಸುತ್ತದೆ ಮತ್ತು ಒಳಗೆ ನಾಲ್ಕು ಗುಪ್ತ ಕಿಟಕಿಗಳನ್ನು ಹೊಂದಿದೆ.

ಶ್ರೀಗಂಧದ ಮೇಲೆ ಸಂಕೀರ್ಣವಾದ ಕೆತ್ತನೆಗಳನ್ನು ರಾಜಸ್ಥಾನದ ಚುರುನಲ್ಲಿ ಮಾಸ್ಟರ್ ಕುಶಲಕರ್ಮಿಗಳು ಮಾಡಿದ್ದಾರೆ ಎಂಬುವುದು ಉಲ್ಲೇಖನೀಯ. ಅಈ ಶ್ರೀಗಂಧದ ಕಲಾಕೃತಿಯನ್ನು ಸುಂದರವಾದ ಮತ್ತು ಸೊಗಸಾದ ಕಲಾಕೃತಿಯಾಗಿ ಕೆತ್ತಿದ್ದಾರೆ. ಶ್ರೀಗಂಧವು ತನ್ನ ಮನಮೋಹಕ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಶ್ರೀಗಂಧವನ್ನು ಶತಮಾನಗಳಿಂದ ಅಮೂಲ್ಯ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಇದಕ್ಕೆ ಧಾರ್ಮಿಕ ಮಹತ್ವವೂ ಇದೆ.

ಕಿಶಿದಾ-ಮೋದಿ ನಡುವೆ 6 ಒಪ್ಪಂದ

 

ಭಾರತದಲ್ಲಿ ಮುಂದಿನ 5 ವರ್ಷದಲ್ಲಿ 3.20 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಜಪಾನ್‌ ಪ್ರಧಾನಿ ಫ್ಯುಮಿಕೋ ಕಿಶೀದಾ ಘೋಷಿಸಿದ್ದಾರೆ. ಇದು ಎರಡೂ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟುಗಟ್ಟಿಗೊಳ್ಳುವ ದ್ಯೋತಕವಾಗಿದೆ,

India-Japan Annual Summit ಮುಂದಿನ 5 ವರ್ಷದಲ್ಲಿ ಭಾರತದಲ್ಲಿ 3.2 ಲಕ್ಷ ಕೋಟಿ ಹೂಡಿಕೆ ಮಾಡಲಿರುವ ಜಪಾನ್!

14ನೇ ಭಾರತ-ಜಪಾನ್‌ ಶೃಂಗದ ಹಿನ್ನೆಲೆಯಲ್ಲಿ ಜಪಾನ್‌ ಪ್ರಧಾನಿ ಫä್ಯಮಿಯೋ ಕಿಶಿದಾ ಅವರು ಶನಿವಾರ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಾಗತಿಕ ಮತ್ತು ಪ್ರಾದೇಶಿಕ ವಿಷಯ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿ 6 ಒಪ್ಪಂದಗಳಿಗೆ ಸಹಿ ಹಾಕಿದರು.

ಈ ವೇಳೆ ಭಾರತದಲ್ಲಿ ಮುಂದಿನ 5 ವರ್ಷದಲ್ಲಿ 5 ಟ್ರಿಲಿಯನ್‌ ಯೆನ್‌ (3.20 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ಕಿಶಿದಾ ಘೋಷಿಸಿದರು. ಜೊತೆಗೆ 300 ಬಿಲಿಯನ್‌ ಯೆನ್‌ ಸಾಲ ಮಂಜೂರಿಗೂ ಒಪ್ಪಿಗೆ ನೀಡಿದ್ದಲ್ಲದೆ, ಈಶಾನ್ಯ ಪ್ರದೇಶದ ಸುಸ್ಥಿರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಏತನ್ಮಧ್ಯೆ ಶುದ್ಧ ಇಂಧನ ಪೂರೈಕೆ ಸಂಬಂಧ ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ.

2014ರಲ್ಲಿಯೂ ಜಪಾನ್‌ ಪ್ರಧಾನಿ ಶಿಂಜೋ ಅಬೆ ಭಾರತದಲ್ಲಿ 3.5 ಟ್ರಿಲಿಯನ್‌ ಯೆನ್‌ ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು.

ಮುಕ್ತ, ಸ್ವತಂತ್ರ ಇಂಡೋ ಫೆಸಿಫಿಕ್‌:

ಪ್ರಧಾನಿ ಮೋದಿ ಜೊತೆ ಮಾತನಾಡಿದ ಕಿಶಿದಾ ಅವರು ಮುಕ್ತ ಮತ್ತು ಸ್ವತಂತ್ರ ಇಂಡೋ ಫೆಸಿಫಿಕ್‌ ರಾಷ್ಟ್ರ ನಿರ್ಮಾಣಕ್ಕಾಗಿ ಭಾರತ-ಜಪಾನ್‌ ಒಗ್ಗೂಡಿ ಕೆಲಸ ಮಾಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಭಾರತ-ಜಪಾನ್‌ ಸಹಭಾಗಿತ್ವವು ಇಂಡೋ ಫೆಸಿಫಿಕ್‌ ಮತ್ತು ಜಾಗತಿಕ ಮಟ್ಟದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಪ್ರೋತ್ಸಾಹಿಸುತ್ತದೆ ಎಂದರು. ಇದೇ ವೇಳೆ ಭಾರತ ಮತ್ತು ಜಪಾನ್‌ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸ್ಥಿರವಾದ ಇಂಧನ ಪೂರೈಕೆಯ ಮಹತ್ವವನ್ನು ಅರ್ಥಮಾಡಿಕೊಂಡಿವೆ ಎಂದೂ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌