ಅಗಲಿದ ವಿಜ್ಞಾನಿ ಪ್ರೊ. ಗೋವಿಂದ್ ಸ್ವರೂಪ್ ಸ್ಮರಿಸಿದ ಪ್ರಧಾನಿ

By Suvarna News  |  First Published Sep 8, 2020, 3:03 PM IST

ಹಿರಿಯ ವಿಜ್ಞಾನಿ ಡಾ.ಗೋವಿಂದ್ ಸ್ವರೂಪ್(91) ನಿಧನ/ ಪ್ರಧಾನಿ ನರೇಂದ್ರ ಮೋದಿ ಸಂತಾಪ/ ವಿಜ್ಞಾನಿಯ ಕೊಡುಗೆ ಸ್ಮರಿಸಿದ ರಾಷ್ಟ್ರಪತಿ/ ಭಾರತದ ರೇಡಿಯೊ ಖಗೋಳ ವಿಜ್ಞಾನ ಜನಕ ಎಂದೇ ಗುರುತಿಸಿಕೊಂಡಿದ್ದರು


ಪುಣೆ/ ನವದೆಹಲಿ(ಸೆ 08)  ಭಾರತದ ರೇಡಿಯೊ ಖಗೋಳ ವಿಜ್ಞಾನ ಜನಕ ಡಾ.ಗೋವಿಂದ್ ಸ್ವರೂಪ್(91)  ಪುಣೆಯಲ್ಲಿ ನಿಧನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಅನಾರೋಗ್ಯದ  ಕಾರಣ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಹಲವು ವಲಯಗಳಲ್ಲಿ ಮಹತ್ವದ ಸಂಶೋಧನೆಗಳ ಕೊಡುಗೆ ನೀಡಿರುವ ಡಾ. ಸ್ವರೂಪ್, ರೇಡಿಯೊ ಖಗೋಳ ವಿಜ್ಞಾನ ಮುಂಚೂಣಿಯ ವಿಜ್ಞಾನಿ. 

Tap to resize

Latest Videos

undefined

ಹಿಂದೂಸ್ತಾನಿ ಸಂಗೀತ ದಿಗ್ಗಜ ಜಸ್‌ರಾಜ್ ಜೀವನ-ಸಾಧನೆ

ವಿಜ್ಞಾನಿ ಡಾ. ಡಾ.ಗೋವಿಂದ್ ಸ್ವರೂಪ್ ಅವರ ಕೊಡುಗೆಯನ್ನು ಸ್ಮರಿಸಿರುವ ಪ್ರಧಾನಿ  ನರೇಂದ್ರ ಮೋದಿ ಅವರ ಹತ್ತಿರದವರಿಗೆ ಧೈರ್ಯ ತುಂಬಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ ಸಹ ಅಗಲಿದ ವಿಜ್ಞಾನಿಯನ್ನು ಸ್ಮರಿಸಿದ್ದಾರೆ.

ಪದ್ಮಶ್ರೀ, ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ, ಎಚ್.ಕೆ. ಫಿರೋಡಿಯಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಸ್ವರೂಪ್ ಭಾಜನರಾಗಿದ್ದಾರೆ.

 

 

Professor Govind Swarup was an exceptional scientist. His pioneering works in radio astronomy have attained global commendation. Anguished by his passing away. My thoughts are with his near and dear ones. This thread gives a glimpse of Professor Swarup’s brilliance. Do read. https://t.co/S0PAsdWp8A

— Narendra Modi (@narendramodi)

With the demise of Professor Govind Swarup, the world has lost an astronomy legend. A pioneer, he contributed to fundamental developments in radio astronomy and created two of the world's largest radio telescopes in India. Condolences to his family, friends and countless students

— President of India (@rashtrapatibhvn)
click me!