PM Modi Gujarat Visit ಮೊಧೆರಾ ಭಾರತದ ಮೊದಲ ಸೌರಶಕ್ತಿ ಗ್ರಾಮ, ಪ್ರಧಾನಿ ಮೋದಿ ಘೋಷಣೆ

By Suvarna News  |  First Published Oct 9, 2022, 7:05 PM IST

3 ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಮೊಧೆರಾದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇದೇ ವೇಳೆ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ ಮೋದಿ, ಮೊಧೆರಾ ಗ್ರಾಮನವನ್ನು ಭಾರತದ ಮೊದಲ ಸೋಲಾರ್ ಗ್ರಾಮ ಎಂದು ಘೋಷಿಸಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.


ಅಹಮ್ಮದಾಬಾದ್(ಅ.09):  ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಗುಜರಾತ್ ಪ್ರವಾಸ ಇಂದಿನಿಂದ ಆರಂಭಗೊಂಡಿದೆ. ಮೋದಿ ಹತ್ತು ಹಲವು ಕಾರ್ಯಕ್ರಮಗಳ ಉದ್ಘಾಟನೆ, ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದರ ಅಂಗವಾಗಿ ಮೊಧೆರಾದಲ್ಲಿ ಆಯೋಜಿಸಿದ ಸಾರ್ವಜನಿಕ ಕಾರ್ಯಕ್ರಮದನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ ಮೊಧೆರಾ ಇದೀಗ ದಿನದ 24 ಗಂಟೆಯೂ ಸೌರಶಕ್ತಿ ಚಾಲಿತವಾಗಿರುವ ಭಾರದ ಮೊದಲ ಗ್ರಾಮ ಎಂದು ಘೋಷಿಸಿದ್ದಾರೆ. ಭಾರತದಲ್ಲಿ ಮೊಧೆರಾ ಸೂರ್ಯ ದೇವಸ್ಥಾನಕ್ಕೆ ಪ್ರಸಿದ್ಧಿಯಾಗಿದೆ. ಇದೇ ಸೂರ್ಯ ಮಂದಿರದ ನಾಡು ಇದೀಗ ಸೌರಶಕ್ತಿ ಚಾಲಿತ ಗ್ರಾಮವಾಗಿದೆ ಎಂದು ಮೋದಿ ಹೇಳಿದ್ದಾರೆ. ಗ್ರಾಮದಲ್ಲಿ ನೆಲದ ಮೇಲಿಟ್ಟಿರುವ ಸೋಲಾರ್ ಪ್ಲಾಂಟ್, 1,300 ರೂಫ್ ಟಾಪ್ ಸೋಲಾರ್ ಸಿಸ್ಟಮ್, ಸರ್ಕಾರಿ ಕಚೇರ ಮೇಲೆ ಸೇರಿದಂತೆ ಬಹುತೇಕ ಕಟ್ಟಡಗಳ ಮೇಲೆ ಸೋಲಾರ್ ಸಿಸ್ಟಮ್ ಅಳವಡಿಸಲಾಗಿದೆ.

ಮೊಧೆರಾದಲ್ಲಿ ಪ್ರಧಾನಿ ಮೋದಿ 3,900 ಕೋಟಿ ರೂಪಾಯಿ ಅಭಿವೃದ್ಧಿ ಯೋಜೆಗಳನ್ನು ಉದ್ಘಾಟಿಸಿದ್ದಾರೆ. ಕೆಲ ಯೋಜನಗಳಿಗೆ ಶಿಲನ್ಯಾಸ ಮಾಡಿದ್ದಾರೆ. ಅಹಮ್ಮದಾಬಾದ್ ಮೆಹ್ಸನಾ ಗೇಜ್ ಪರಿವರ್ತನೆ ಯೋಜನೆ, ಸಬರಮತಿ ಜಗುಡಾನ್ ಗೇಜ್ ಪರಿವರ್ತನೆ, ಒಎನ್‌ಜಿಸಿ ಭೂವೈಜ್ಞಾನಿಕಾ ತೈಲಾ ಉತ್ಪಾದನಾ ಯೋಜನೆ,  ಸುಜಲಾಂ ಸುಫಲಾಂ ಕಾಲುವೆ, ಧರೋಯ್ ಅಣೆಕಟ್ಟು, ಮೊಧೆರಾ ಚನಾಸ್ಮಾ ರಾಜ್ಯ ಹೆದ್ದಾರಿ, ಪ್ರಾದೇಶಿಕ ತರಬೇತಿ ಕೇಂದ್ರ, ಸರ್ದಾರ್ ಪಟೇಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಸೇರಿದಂತೆ ಹಲವು ಯೋಜನೆ ಉದ್ಘಾಟಿಸಲಿದ್ದಾರೆ.

Tap to resize

Latest Videos

PM Narendra Modi: 21 ವರ್ಷದಲ್ಲಿ ಒಂದೂ ಸೋಲು ಕಾಣದ ಗೆಲುವಿನ ಸರದಾರ!
3 ದಿನಗಳ ಗುಜರಾತ್ ಪ್ರವಾಸದಲ್ಲಿ ಪ್ರಧಾನಿ ಮೋದಿ ಬರೋಬ್ಬರಿ 14,500 ಕೋಟಿ ರೂಪಾಯಿ ವೆಚ್ಚದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಒಟ್ಟು 14,500 ಕೋಟಿ ರೂಪಾಯಿ ಮೊತ್ತದ ಯೋಜನೆ ಉದ್ಘಾಟಿಸಲಿದ್ದಾರೆ. 

 ಅ.11ಕ್ಕೆ ಉಜ್ಜಯಿನಿ ‘ಮಹಾಕಾಲ ಲೋಕ’ ಉದ್ಘಾಟನೆ
ಕಾಶಿ ಕಾರಿಡಾರ್‌ ಮಾದರಿಯಲ್ಲೇ ಮಧ್ಯಪ್ರದೇಶದ ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯವನ್ನು ಒದಗಿಸುವ ಹಾಗೂ ದೇವರ ದರ್ಶನವನ್ನು ಆರಾಮದಾಯಕವಾಗಿಸುವ ಮೆಗಾ ಕಾರಿಡಾರ್‌ ‘ಮಹಾಕಾಲ ಲೋಕ’ವನ್ನು ಅ. 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ.

ಈವರೆಗೆ ಮಹಾಕಾಲ ದೇಗುಲದ ಸುತ್ತ ಇಕ್ಕಟ್ಟಾದ ಜಾಗವಿತ್ತು. ಇದನ್ನು ತೆರವುಗೊಳಿಸಿ ವಿಶಾಲವಾದ ಕಾರಿಡಾರ್‌ ನಿರ್ಮಿಸಲಾಗಿದೆ. ಇದರಿಂದ ಭಕ್ತರಿಗೆ ಆರಾಮವಾಗಿ ದೇಗುಲಕ್ಕೆ ಸಾಗಿಬರಲು ಅನುಕೂಲವಾಗಲಿದೆ. ಇದು ಸುಮಾರು 900 ಮೀ. ಉದ್ದದ ಕಾರಿಡಾರ್‌ ಆಗಿದ್ದು, ದೇಶದ ಅತಿದೊಡ್ಡ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಇದು 2 ಪ್ರಮುಖ ಗೇಟ್‌ವೇ- ನಂದಿ ದ್ವಾರ ಹಾಗೂ ಪಿನಾಕಿ ದ್ವಾರವನ್ನು ಒಳಗೊಂಡಿದೆ. ಮೇಲ್ಭಾಗದಲ್ಲಿ ತ್ರಿಶೂಲ ಶೈಲಿಯ ವಿನ್ಯಾಸವಿರುವ ಹಾಗೂ ಶಿವನ ಮುದ್ರೆಗಳಿರುವ 108 ಅಲಂಕೃತ ಮರಳುಗಲ್ಲುಗಳ ಸ್ತಂಭಗಳಿಂದ ಕಾರಿಡಾರ್‌ ಅನ್ನು ಅಲಂಕರಿಸಲಾಗಿದೆ. ಇದು ದೇವತೆಗಳ ಕಲಾತ್ಮಕ ಶಿಲ್ಪ ಹಾಗೂ ಪ್ರಕಾಶಿತ ಭಿತ್ತಿಚಿತ್ರಗಳಿಂದ ಆವೃತವಾದ ಕಾರಂಜಿಯನ್ನು ಒಳಗೊಂಡಿದೆ. ಕಾಶಿ ಕಾರಿಡಾರ್‌ ಮಾದರಿಯಲ್ಲೇ ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯವನ್ನು ಒದಗಿಸಲು ಇದನ್ನು ನಿರ್ಮಿಸಲಾಗಿದೆ.

click me!