ಸಾರಿಗೆ ಬಸ್‌ನಲ್ಲಿ ಭೂತ ಪ್ರಯಾಣ, ಸಿಸಿಟಿವಿಯಲ್ಲಿ ಪತ್ತೆಯಾದ ಅದೃಶ್ಯ ವ್ಯಕ್ತಿಯ ಸೆರೆ ಹಿಡಿದ ಕಂಡಕ್ಟರ್!

By Chethan Kumar  |  First Published Aug 15, 2024, 9:56 AM IST

ಸಿಟಿ ಬಸ್‌ನಲ್ಲಿ ವಿಚಿತ್ರ ಘಟನೆ ನಡೆದಿದೆ.ಬಸ್ ಸೀಟಿನಲ್ಲಿ ಅದೃಶ್ಯ ವ್ಯಕ್ತಿಯೊಬ್ಬರು ಕುಳಿತಿರುವ ಚಿತ್ರ ಬಸ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾರಿಗೆ ಬಸ್‌ನಲ್ಲಿ ಭೂತ ಪ್ರಯಾಣ ಮಾಡುತ್ತಿರುವ ಈ ವಿಡಿಯೋವನ್ನು ಕಂಡಕ್ಟರ್ ಸೆರೆ ಹಿಡಿದ್ದಾರೆ. 


ದೆಹಲಿ(ಆ.15) ಸಾರಿಗೆ ಬಸ್‌ನಲ್ಲಿ ಭೂತದ ಪ್ರಯಾಣ ಮಾಡಿರುವ ವಿಚಿತ್ರ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ರಾತ್ರಿ ವೇಳೆ ಈ ಘಟನೆ ನಡೆದಿದೆ. ಬಸ್ ನಿಲ್ಲಿಸಿದ ಬಳಿಕ ಕಂಡಕ್ಟರ್ ನಿತ್ಯದ ಕೆಲಸದಂತೆ ಸಂಪೂರ್ಣ ಬಸ್ ಪರಿಶೀಲಿಸಿದ್ದಾರೆ. ಈ ವೇಳೆ ಎಲ್ಲಾ ಸೀಟುಗಳು ಖಾಲಿ ಖಾಲಿಯಾಗಿತ್ತು. ಆದರೆ ಡ್ರೈವರ್ ಪಕ್ಕದಲಿರುವ ಸಿಸಿಟಿವಿ ದೃಶ್ಯದಲ್ಲಿ ಸೀಟಿನಲ್ಲಿ ವ್ಯಕ್ತಿಯೊಬ್ಬರು ಕುಳಿತಿರುವು ದೃಶ್ಯ ಪತ್ತೆಯಾಗಿದೆ. ಮತ್ತೆ ಸೀಟಿನ ಬಳಿ ಬಂದರೆ ಯಾರೂ ಇಲ್ಲ. ಈ ವಿಡಿಯೋವನ್ನು ಕಂಡಕ್ಟರ್ ರೆಕಾರ್ಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ದೆಹಲಿ ಸಿಟಿ ಬಸ್‌ನಲ್ಲಿ ಭೂತ ಪ್ರಯಾಣ ಮಾಡುತ್ತಿದೆ ಅನ್ನೋ ಚರ್ಚೆ ಹುಟ್ಟು ಹಾಕಿದೆ.

ಬಿಇನ್ ಫಾರೆವರ್ ಅನ್ನೋ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಸಾರಿಗೆ ಬಸ್‌ನಲ್ಲಿ ಭೂತ ಪ್ರತ್ಯಕ್ಷ ಎಂದು ಉಲ್ಲೇಖಿಸಿದ್ದಾರೆ. ಘಟನೆ ಕುರಿತು ವಿವರಣೆಯನ್ನೂ ನೀಡಲಾಗಿದೆ. ದೆಹಲಿಯ ಸಾರಿಗೆ ಬಸ್ ದಿನದ ಕರ್ತವ್ಯ ಮುಗಿಸಿದ ಬಳಿಕ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಮಧ್ಯ ರಾತ್ರಿಯಲ್ಲಿ ಬಸ್ ಪಾರ್ಕ್ ಮಾಡಿದ ಬಳಿಕ ಕಂಡಕ್ಟರ್, ಬಸ್ ಪರಿಶೀಲಿಸುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ. ಇದೇ ರೀತಿ ಬಸ್ ಪರಿಶೀಲಿದ ಕಂಡಕ್ಟರ್‌ಗೆ ಭೂತದ ಅನುಭವವಾಗಿದೆ ಎಂದು ಹೇಳಲಾಗಿದೆ.

Tap to resize

Latest Videos

ಸ್ಮಶಾನದ ಪಕ್ಕದಲ್ಲಿರುವ ರಾಜಸ್ಥಾನ ವಿಧಾನಸಭೆಗೆ ಭೂತದ ಕಾಟ, 200 ಸಂಖ್ಯಾಬಲಕ್ಕೆ ಸಾವಿನ ಶಾಕ್!

ಸಂಪೂರ್ಣ ಬಸ್ ಪರಿಶೀಲನೆ ವೇಳೆ ಎಲ್ಲಾ ಸೀಟುಗಳು ಖಾಲಿ ಖಾಲಿಯಾಗಿತ್ತು. ಆದರೆ ಡ್ರೈವರ್ ಸೀಟು ಬಳಿ ಬರುತ್ತಿದ್ದಂತೆ ಕಂಡಕ್ಟರ್‌ಗೆ ಅಚ್ಚರಿಯಾಗಿದೆ. ಕಾರಣ ಡ್ರೈವರ್ ಸೀಟಿನ ಬಳಿ ಇರುವ ಸಿಸಿಟಿವಿಯಲ್ಲಿ ವ್ಯಕ್ತಿಯೊಬ್ಬರು ಸೀಟಿನಲ್ಲಿ ಕುಳಿತಿರುವಂತೆ ಕಂಡಿದೆ. ಮತ್ತೊಮ್ಮೆ ಪರಿಶೀಲಿಸಿದಾಗ ಸೀಟಿನಲ್ಲಿ ಯಾರೂ ಇಲ್ಲ ಅನ್ನೋ ಖಾತ್ರಿಯಾಗಿದೆ. ಆದರೆ ಸೀಟಿನಲ್ಲಿ ನೀರಿನ ಬಾಟಲಿ ಇಡಲಾಗಿತ್ತು. ಸಿಸಿಟಿವಿಯಲ್ಲಿ ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬರು ಕುಳಿತಿರುವ ದೃಶ್ಯ ಕಾಣುತ್ತಿದೆ.

 

 
 
 
 
 
 
 
 
 
 
 
 
 
 
 

A post shared by Bien_forever (@bien_forever)

 

ಇದು ಭೂತ ಎಂದು ಕಂಡಕ್ಟರ್ ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಎರಡೆರಡು ಬಾರಿ ಸೀಟಿನ ಬಳಿ ತೆರಳಿ ಖಾಲಿ ಇರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಆದರೆ ಸಿಸಿಟಿವಿಯಲ್ಲಿ ಮಾತ್ರ ಅದೃಶ್ಯ ವ್ಯಕ್ತಿ ಕಾಣುತ್ತಿದ್ದಾರೆ. ಈ ವಿಡಿಯೋ ಬೆನ್ನಲ್ಲೇ ಭಾರಿ ಚರ್ಚೆ ಶುರುವಾಗಿದೆ. ಇದು ನಕಲಿ ಅನ್ನೋ ವಾದ ಒಂದಡೆಯಾದರೆ, ಮತ್ತೊಂದೆಡೆ ಇತ್ತೀಚೆಗೆ ಮಹಿಳೆಯೊಬ್ಬರು ರಾತ್ರಿ ವೇಳೆ ದೆಹಲಿ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಿದ ಘಟನೆ ನಡೆದಿದೆ ಎಂದು ಕೆಲವರು ವರದಿ ಮಾಡಿದ್ದಾರೆ. ದೆಹಲಿ ಬಸ್‌ನಲ್ಲಿ ಭೂತ ಪ್ರಯಾಣಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ಬಾಯ್‌ಫ್ರೆಂಡ್ ಭೂತದ ಜೊತೆ ಮದುವೆ: ಗೆಳತಿ ನಿರ್ಧಾರಕ್ಕೆ ಭಾರಿ ಮೆಚ್ಚುಗೆ!

click me!