PM Narendra Modi: ಒಂದು ಭೂಮಿ, ಹಲವು ಯತ್ನ: ಮೋದಿ ಹೊಸ ಉದ್ಘೋಷ

Published : Jun 06, 2022, 03:00 AM IST
PM Narendra Modi: ಒಂದು ಭೂಮಿ, ಹಲವು ಯತ್ನ: ಮೋದಿ ಹೊಸ ಉದ್ಘೋಷ

ಸಾರಾಂಶ

‘ಎಲ್ಲರೂ ಪರಿಸರ ಸ್ನೇಹಿ ಜೀವನ ಕ್ರಮವನ್ನು ಅಳವಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವ ಪರಿಸರಸ್ನೇಹಿ ಜೀವನಶೈಲಿ ಜಾಗತಿಕ ಆಂದೋಲನಕ್ಕೆ (ಲೈಫ್‌ ಆಂದೋಲನ) ಎಂಬ ಮಹತ್ವಾಕಾಂಕ್ಷಿ ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ.

ನವದೆಹಲಿ (ಜೂ.06): ‘ಎಲ್ಲರೂ ಪರಿಸರ ಸ್ನೇಹಿ ಜೀವನ ಕ್ರಮವನ್ನು ಅಳವಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವ ಪರಿಸರಸ್ನೇಹಿ ಜೀವನಶೈಲಿ ಜಾಗತಿಕ ಆಂದೋಲನಕ್ಕೆ (ಲೈಫ್‌ ಆಂದೋಲನ) ಎಂಬ ಮಹತ್ವಾಕಾಂಕ್ಷಿ ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ. ಈ ವೇಳೆ ‘ಒಂದೇ ಭೂಮಿ, ಹಲವು ಪ್ರಯತ್ನ’ ಎಂಬ ಹೊಸ ಉದ್ಘೋಷ ಮಾಡಿದ್ದಾರೆ.

‘ಇರುವ ಒಂದು ಭೂಮಿಯನ್ನು ಉಳಿಸಿಕೊಳ್ಳಲು ಜನರು ಹಲವಾರು ಪ್ರಯತ್ನ ಕೈಗೊಳ್ಳಬೇಕು. ಜಾಗತಿಕ ಪರಿಸರವನ್ನು ಉತ್ತಮ ಪಡಿಸುವ ಹಾಗೂ ಜಾಗತಿಕ ಸ್ವಾಸ್ಥ್ಯ ಸುಧಾರಿಸುವ ಕ್ರಮಗಳಿಗೆ ಭಾರತವು ತನ್ನ ಬೆಂಬಲವನ್ನು ನೀಡಲು ಸಿದ್ಧವಾಗಿದೆ’ ಎಂದು ಹೇಳಿದ್ದಾರೆ.

Save Soil ಮಣ್ಣು ಸಂರಕ್ಷಣೆ ನಮ್ಮ ಬದ್ಧತೆ, ಮೋದಿ ಬೆಂಬಲದಿಂದ ಹೊಸ ಹುರುಪು, ಸದ್ಗುರು!

ವಿಶ್ವ ಪರಿಸರ ದಿನ ನಿಮಿತ್ತ ಬಿಲ್‌ಗೇಟ್ಸ್‌ ಹಾಗೂ ಇನ್ನಿತರ ಗಣ್ಯರು ಭಾಗಿಯಾಗಿದ್ದ ಆನ್‌ಲೈನ್‌ ಸಭೆಯಲ್ಲಿ ಮಾತನಾಡಿದ ಮೋದಿ, ‘ಭೂಮಿ ಎದುರಿಸುತ್ತಿರುವ ಸವಾಲುಗಳು ಎಲ್ಲರಿಗೂ ತಿಳಿಸಿದೆ. ಇದನ್ನು ಪರಿಹರಿಸಲು ಸುಸ್ಥಿರ ಅಭಿವೃದ್ಧಿಗಾಗಿ ಮಾನವ ಕೇಂದ್ರಿತ, ಸಾಮೂಹಿಕ ಪ್ರಯತ್ನಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ’ ಎಂದರು.

‘ಆರ್ಥಿಕತೆಯು ನಮ್ಮ ಸಂಸ್ಕೃತಿ ಹಾಗೂ ಜೀವನ ಶೈಲಿಯ ಭಾಗವಾಗಿದೆ. ಭಾರತದಲ್ಲಿ ದೇವರು ಪ್ರಾಣಿ, ಮರಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು, ದೇಶದ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ದೈವತ್ವದೊಂದಿಗೆ ಸಮೀಕರಿಸಲಾಗಿದೆ. ಈ ಹಿಂದೆ ಮಹಾತ್ಮಾ ಗಾಂಧಿಯವರು ಶೂನ್ಯ ಕಾರ್ಬನ್‌ ಜೀವನ ಶೈಲಿ ಅಳವಡಿಸಿಕೊಳ್ಳಲು ಕರೆ ನೀಡಿದ್ದರು. ‘ತಗ್ಗಿಸುವುದು, ಮರು ಬಳಕೆ ಹಾಗೂ ಮರು ಚಕ್ರೀಕರಣ’- ಈ ಮೂರು ಮಹತ್ವದ ಅಂಶಗಳನ್ನು ಪಾಲಿಸಿ ಸುಸ್ಥಿರ,ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳೋಣ’ ಎಂದರು.

world environment day ಪರಿಸರಕ್ಕೆ ಪೂರಕವಾದ ಜೀವನ ಶೈಲಿ ರೂಪಿಸಲು ಮೋದಿ ಕರೆ!

ಈ ನಿಟ್ಟಿನಲ್ಲಿ ಭಾರತವು ಈಗಾಗಲೇ ಸಾಕಷ್ಟು ಉಪ ಕ್ರಮಗಳನ್ನು ಕೈಗೊಂಡಿದೆ. ದೇಶದ ಅರಣ್ಯ ಪ್ರದೇಶದಲ್ಲಿ ಹೆಚ್ಚಳವಾಗುತ್ತಿದ್ದು, ಸಿಂಹ. ಹುಲಿ, ಚಿರತೆ, ಆನೆ ಹಾಗೂ ಘೇಂಡಾಮೃಗಗಳ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ. ನಿಗದಿತ ಸಮಯಕ್ಕಿಂತಲೂ 9 ವರ್ಷ ಮುಂಚೆಯೇ ಪಳೆಯುಳಿಕೆ ರಹಿತ ಇಂಧನ ಆಧಾರಿತ ಮೂಲಗಳಿಂದ ಶೇ. 40ರಷ್ಟು ವಿದ್ಯುತ್‌ ಪೂರೈಕೆಯ ಗುರಿ ಸಾಧಿಸಿದ್ದೇವೆ. ಪೆಟ್ರೋಲ್‌ನಲ್ಲಿ ಶೇ.10ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಗುರಿಯನ್ನು 5 ತಿಂಗಳ ಮುಂಚೆ ಸಾಧಿಸಿದ್ದೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌ : ನಂಬಿ ಮೋಸಹೋಗದಂತೆ ವಿನಂತಿ
ತಮಿಳುನಾಡಿನಲ್ಲಿ 97 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್, SIR ಶಾಕ್