ನೊಬೆಲ್ ಶಾಂತಿ ಪ್ರಶಸ್ತಿ ರೇಸ್‌ನಲ್ಲಿ ಪ್ರಧಾನಿ ಮೋದಿ: ಮೋದಿಯೇ ಪ್ರಮುಖ ಸ್ಪರ್ಧಿ ಎಂದ ಪ್ರಶಸ್ತಿ ಸಮಿತಿ ಉಪ ನಾಯಕ

By BK Ashwin  |  First Published Mar 16, 2023, 9:21 AM IST

ಭಾರತವನ್ನು ಶಾಂತಿಯ ಪರಂಪರೆ ಎಂದು ಕರೆದ ಆಸ್ಲೆ ಟೋಜೆ, ದೇಶವು ಜಗತ್ತಿನ ಸೂಪರ್ ಪವರ್ ಆಗುವತ್ತ ಮುನ್ನಡೆದಿದೆ ಎಂದು ಹೇಳಿದರು.


ಹೊಸದೆಹಲಿ (ಮಾರ್ಚ್‌ 16, 2023): ಪ್ರಧಾನಿ ಮೋದಿ ವಿಶ್ವ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ ಎಂಬುದಕ್ಕೆ ಇತ್ತೀಚೆಗೆ ಹಲವು ವರದಿಗಳು ಸಾಕ್ಷಿಯಾಗುತ್ತಿವೆ. ರಷ್ಯಾ - ಉಕ್ರೇನ್‌ ಯುದ್ಧದ ಭೀಕರ ಪರಿಣಾಮ ತಗ್ಗಿಸಲು ಪ್ರಧಾನಿ ಮೋದಿ ಪ್ರಮುಖ ಕಾರಣ ಎಂದು ವಿಶ್ವದ ಪ್ರಬಲ ರಾಷ್ಟ್ರ ನಾಯಕರೇ ಹೇಳಿಕೊಂಡಿದ್ದರು. ಅಲ್ಲದೆ, ವಿಶ್ವದ ಶಾಂತಿಯ ವಿಚಾರದಲ್ಲಿ ಪ್ರಧಾನಿ ಮೋದಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಈಗ ಪ್ರಧಾನಿ ಮೋದಿಗೆ ನೊಬೆಲ್‌ ಶಾಂತಿ ಪ್ರಶಸ್ತ ಸಿಗಲಿದೆ ಎಂದು ಹೇಳಲಾಗುತ್ತಿದೆ. ಹೀಗಂತ ನಾವ್‌ ಹೇಳ್ತಿರೋದಲ್ಲ.

ನೊಬೆಲ್ ಪ್ರಶಸ್ತಿ ಸಮಿತಿಯ ಉಪ ನಾಯಕ ಆಸ್ಲೆ ಟೋಜೆ ಅವರು ಪ್ರಧಾನಿ ಮೋದಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದು, ನೊಬೆಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ಮೋದಿಯೇ ದೊಡ್ಡ ಸ್ಪರ್ಧಿ ಎಂದಿದ್ದಾರೆ. ಹಾಗೂ, ರಷ್ಯಾ - ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಸಹ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. 

Tap to resize

Latest Videos

undefined

ಇದನ್ನು ಓದಿ: 8 ವರ್ಷಕ್ಕೆ ದುಪ್ಪಟ್ಟಾದ ಭಾರತೀಯರ ಆದಾಯ: ಪ್ರಧಾನಿ ಮೋದಿ ಆಡಳಿತದಲ್ಲಿ ಭರ್ಜರಿ ಆರ್ಥಿಕ ಪ್ರಗತಿ

ಪ್ರಧಾನಿ ಮೋದಿ ಇಂದು ವಿಶ್ವದ ಶಾಂತಿಯ ಅತ್ಯಂತ ವಿಶ್ವಾಸಾರ್ಹ ಮುಖ ಎಂದೂ ಅವರು ಹೇಳಿದ್ದು, ಅಷ್ಟೇ ಅಲ್ಲದೆ ತನ್ನನ್ನು ತಾನು ಭಾರತದ ಪ್ರಧಾನ ಮಂತ್ರಿಯ ದೊಡ್ಡ ಅಭಿಮಾನಿ ಎಂದೂ ನೊಬೆಲ್ ಪ್ರಶಸ್ತಿ ಸಮಿತಿಯ ಉಪ ನಾಯಕ ಆಸ್ಲೆ ಟೋಜೆ ಅವರು ಹೇಳಿಕೊಂಡಿದ್ದಾರೆ. 
 
ಕದನ ಕಣದಲ್ಲಿರುವ ಅಥವಾ ಯುದ್ಧ ಮಾಡ್ತಿರುವ  ದೇಶಗಳ ನಡುವೆ ಯುದ್ಧವನ್ನು ನಿಲ್ಲಿಸಿ ಶಾಂತಿ ಸ್ಥಾಪಿಸುವ ಅತ್ಯಂತ ವಿಶ್ವಾಸಾರ್ಹ ನಾಯಕ ಪ್ರಧಾನಿ ಮೋದಿ. ಪ್ರಧಾನಿ ಮೋದಿಯವರ ಆಡಳಿತವನ್ನು ಶ್ಲಾಘಿಸಿದ ಅವರು, ಪ್ರಧಾನಿ ಮೋದಿಯವರ ನೀತಿಯಿಂದಾಗಿ ಭಾರತವು ಶ್ರೀಮಂತ ಮತ್ತು ಶಕ್ತಿಯುತ ದೇಶವಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಈ ಶತಮಾನ ಭಾರತಕ್ಕೆ ಸೇರಿದ್ದು: ವೆಂಚರ್ ಕ್ಯಾಪಿಟಲ್ ಜೀನಿಯಸ್ ಬ್ರೆಂಡನ್ ರೋಜರ್ಸ್ ಭವಿಷ್ಯ

ಭಾರತವನ್ನು ಶಾಂತಿಯ ಪರಂಪರೆ ಎಂದು ಕರೆದ ಆಸ್ಲೆ ಟೋಜೆ, ದೇಶವು ಜಗತ್ತಿನ ಸೂಪರ್ ಪವರ್ ಆಗುವತ್ತ ಮುನ್ನಡೆದಿದೆ ಎಂದು ಹೇಳಿದರು. ಇದಲ್ಲದೆ, ಪ್ರಧಾನಿ ಮೋದಿ ಅವರು ಯುದ್ಧವನ್ನು ನಿಲ್ಲಿಸಲು ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದಾರೆ ಮತ್ತು ಅವರು ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಹೇಳಿದರು.  ಪ್ರಧಾನಿ ಮೋದಿಯವರ ನೀತಿಗಳಿಂದಾಗಿ ಭಾರತ ಶ್ರೀಮಂತ - ಶಕ್ತಿಶಾಲಿ ರಾಷ್ಟ್ರವಾಗುತ್ತಿದೆ ಎಂದೂ ಅವರು ಹೇಳಿದರು. ಅಲ್ಲದೆ, ಅತ್ಯಂತ ಅರ್ಹ ನಾಯಕ ಪ್ರಧಾನಿ ಮೋದಿ ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದರೆ ಅದು ಐತಿಹಾಸಿಕವಾಗಲಿದೆ ಎಂದೂ ಆಸ್ಲೆ ಟೋಜೆ ಅವರು ಹೇಳಿದ್ದಾರೆ.

ಆಸ್ಲೆ ಟೋಜೆ ಯಾರು..?
ಆಸ್ಲೆ ಟೋಜೆ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಜವಾಬ್ದಾರರಾಗಿರುವ ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕರಾಗಿದ್ದಾರೆ. ಅವರು ಜರ್ಮನಿ, ಫ್ರಾನ್ಸ್, ಬೆಲ್ಜಿಯಂ, ಇಂಗ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುವ ಹಾಗೂ ಕೆಲಸ ಮಾಡಿದ ವಿದ್ವಾಂಸರು ಮತ್ತು ಲೇಖಕರು. ಅವರು ಓಸ್ಲೋ ಮತ್ತು ಟ್ರೋಮ್ಸೋ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದಿದ್ದಾರೆ. ಜತೆಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದಲೂ ಅವರು ಪಿಎಚ್‌ಡಿ ಪಡೆದುಕೊಂಡಿದ್ದು, ಅವರು ಇಂಗ್ಲಿಷ್ ಮತ್ತು ನಾರ್ವೇಜಿಯನ್ ಭಾಷೆ ಮಾತನಾಡುತ್ತಾರೆ. ಜತೆಗೆ, ಜರ್ಮನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿಯೂ ಅವರು ಸಂವಹನ ನಡೆಸುತ್ತಾರೆ. 

click me!