ಜಗತ್ತಿನ ಅಭಿವೃದ್ಧಿಯ ಇಂಜಿನ್‌ ಆಗುವ ಶಕ್ತಿ ಭಾರತಕ್ಕಿದೆ: ಪ್ರಧಾನಿ ನರೇಂದ್ರ ಮೋದಿ

By Santosh NaikFirst Published Jan 9, 2023, 3:28 PM IST
Highlights

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಧ್ಯಪ್ರದೇಶದ ಇಂದೋರ್‌ನಲ್ಲಿ ಪ್ರವಾಸಿ ಭಾರತೀಯ ದಿವಸ್ ಸಮಾವೇಶದ 17 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು.
 

ಇಂದೋರ್‌ (ಜ.9): ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ 17ನೇ ಪ್ರವಾಸಿ ಭಾರತೀಯ ಸಮ್ಮೇಳನ 2ನೇ ದಿನ ಭಾಗಯಾಗಿದ್ದರು.ಇಂದು ಜಗತ್ತು ಭಾರತದ ಮಾತನ್ನು ಕೇಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ವೇಳೆ ಹೇಳಿದರು. ಭಾರತವು ಕೌಶಲ್ಯ ರಾಜಧಾನಿಯಾಗುವ ಸಾಮರ್ಥ್ಯವನ್ನು ಹೊಂದಿದೆ, ಅದರೊಂದಿಗೆ ಭಾರತ ಪ್ರಪಂಚದ ಅಭಿವೃದ್ಧಿಯ ಎಂಜಿನ್ ಆಗಬಹುದು. ಇಂದು ಭಾರತವು ಹೆಚ್ಚಿನ ಸಂಖ್ಯೆಯ ಸಮರ್ಥ ಯುವಕರನ್ನು ಹೊಂದಿದೆ. ನಮ್ಮ ಯುವಕರು ಕೌಶಲ್ಯ ಹಾಗೂ ಮೌಲ್ಯಗಳನ್ನು ಹೊಂದಿದ್ದಾರೆ. ಕೆಲಸ ಮಾಡಲು ಉತ್ಸಾಹ ಮತ್ತು ಪ್ರಾಮಾಣಿಕತೆಯೂ ಬೇಕು ಎಂದು ಹೇಳಿದ್ದಾರೆ. ಇಂದೋರ್ ವಿಶ್ವದಲ್ಲೇ ವಿಶಿಷ್ಟವಾಗಿದೆ ಎಂದು ಪ್ರಧಾನಿ ಹೇಳಿದರು. ಇಂದೋರ್ ಒಂದು ನಗರ ಎಂದು ಜನರು ಹೇಳುತ್ತಾರೆ, ಆದರೆ ನಾನು ಇಂದೋರ್ ಒಂದು ಯುಗ ಎಂದು ಹೇಳುತ್ತೇನೆ, ಅದು ಸಮಯಕ್ಕಿಂತ ಮುಂದಿದೆ. ಈ ವರ್ಷ ಭಾರತವು ವಿಶ್ವದ G-20 ಗುಂಪಿನ ಅಧ್ಯಕ್ಷತೆಯನ್ನು ವಹಿಸಿದೆ. ಭಾರತವು ಈ ಜವಾಬ್ದಾರಿಯನ್ನು ದೊಡ್ಡ ಅವಕಾಶವಾಗಿ ನೋಡುತ್ತಿದೆ. ಭಾರತವನ್ನು ಜಗತ್ತಿಗೆ ತಿಳಿಸಲು ಇದು ನಮಗೆ ಒಂದು ಅವಕಾಶ. ನಾವು ಜಿ-20 ಅನ್ನು ಕೇವಲ ರಾಜತಾಂತ್ರಿಕ ಕಾರ್ಯಕ್ರಮವನ್ನಾಗಿ ಮಾಡದೆ, ಸಾರ್ವಜನಿಕ ಸಹಭಾಗಿತ್ವದ ಕಾರ್ಯಕ್ರಮವನ್ನಾಗಿ ಮಾಡಬೇಕು ಎಂದರು.

ಬ್ರಿಲಿಯಂಟ್ ಕನ್ವೆನ್ಷನ್ ಸೆಂಟರ್‌ನ ಗ್ರ್ಯಾಂಡ್ ಹಾಲ್‌ನಲ್ಲಿರುವ ವೇದಿಕೆಗೆ ಮೋದಿ ಆಗಮಿಸಿದಾಗ, ಸಭಾಂಗಣವು ಮೋದಿ-ಮೋದಿ ಘೋಷಣೆಗಳಿಂದ ಪ್ರತಿಧ್ವನಿಸಿತು. ಪ್ರೀತಿಪಾತ್ರರನ್ನು ಮುಖಾಮುಖಿ ಭೇಟಿಯಾಗುವುದರಲ್ಲಿ ವಿಭಿನ್ನವಾದ ಸಂತೋಷ ಮತ್ತು ಮಹತ್ವವಿದೆ ಎಂದು ಪ್ರಧಾನಿ ಹೇಳಿದರು. ಮಧ್ಯಪ್ರದೇಶ ಮಾ ನರ್ಮದೆಯ ನೀರು, ಕಾಡು, ಬುಡಕಟ್ಟು ಸಂಪ್ರದಾಯ ಮತ್ತು ಇನ್ನೂ ಅನೇಕವನ್ನು ಹೊಂದಿದೆ. ಇದು ನಿಮ್ಮ ಭೇಟಿಯನ್ನು ಅವಿಸ್ಮರಣೀಯವಾಗಿಸುತ್ತದೆ ಎಂದು ಅವರು ಅನಿವಾಸಿ ಭಾರತೀಯರಿಗೆ ತಿಳಿಸಿದರು. ಉಜ್ಜಯಿನಿಯಲ್ಲಿ ಮಹಾಕಾಲ್ ಲೋಕವೂ ವಿಸ್ತರಿಸಿದೆ. ನೀವೆಲ್ಲರೂ ಅಲ್ಲಿಗೆ ಹೋಗಿ ಮಹಾಕಾಲನ ಆಶೀರ್ವಾದವನ್ನು ಪಡೆದುಕೊಳ್ಳಿ ಎಂದರು.

ಇಂದೋರ್ ಅನ್ನು ಶ್ಲಾಘಿಸಿದ ಪ್ರಧಾನಿ, ಇಂದೋರ್ ಅದ್ಭುತವಾಗಿದೆ ಎಂದು ಹೇಳಿದರು. ಜನರು ಇಂದೋರ್ ಒಂದು ನಗರ ಎಂದು ಹೇಳುತ್ತಾರೆ, ಆದರೆ ನಾನು ಇಂದೋರ್ ಒಂದು ಯುಗ ಎಂದು ಹೇಳುತ್ತೇನೆ, ಅದು ಕಾಲವನ್ನು ಮೀರಿದ ನಗರವಾದರೂ ಇನ್ನೂ ಪರಂಪರೆಯನ್ನು ಹಿಡಿದಿಟ್ಟುಕೊಂಡಿದೆ. ಇಂದೋರ್ ಇಡೀ ಪ್ರಪಂಚದಲ್ಲಿ ಅದ್ಭುತವಾಗಿದೆ. ಇಂದೋರಿ ನಮ್ಕೀನ್, ಸಾಬುದಾನ ಖಿಚಡಿ, ಕಚೋರಿ, ಸಮೋಸ, ಶಿಕಂಜಿ... ಇದರ ಸವಿಯನ್ನು ಸವಿದವನೇ ಬಲ್ಲ. ಇಂದೋರ್‌ ರುಚಿಗೆ ಮಾತ್ರವಲ್ಲ ಸ್ವಚ್ಛತೆಗೂ ರಾಜಧಾನಿ. ನೀವು ಇಲ್ಲಿನ ಅನುಭವವನ್ನು ಮರೆಯುವುದಿಲ್ಲ ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಮರೆಯುವುದಿಲ್ಲ ಎಂದು ಹೇಳಿದ್ದಾರೆ.

ವಿದ್ಯಾರ್ಥಿನಿಯಾಗಿ ನಟಿಸಿ ರ‍್ಯಾಗಿಂಗ್ ಕೇಸ್‌ ಆರೋಪಿಗಳನ್ನು ಪತ್ತೆಹಚ್ಚಿದ ಮಹಿಳಾ ಪೊಲೀಸ್‌..!

ಭಾರತದಲ್ಲಿ ಇರುವ ಯುವಕರ ಜೊತೆಗೆ, ಭಾರತದೊಂದಿಗೆ ಸಂಪರ್ಕ ಹೊಂದಿರುವ ವಿದೇಶಿ ಮೂಲದ ಯುವಕರನ್ನು ಸಹ ಭಾರತ ಹೊಂದಿದೆ. ವಿದೇಶದಲ್ಲಿ ಹುಟ್ಟಿ ಬೆಳೆದ ಮುಂದಿನ ಪೀಳಿಗೆಯ ಯುವಕರು ತಮ್ಮ ತಂದೆ ತಾಯಿಯ ದೇಶದ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದಾರೆ. ಅವರಿಗೆ ಭಾರತದ ಬಗ್ಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅವರಿಗೂ ಭಾರತವನ್ನು ತೋರಿಸಿ. ಈ ಯುವಕರು ಭವಿಷ್ಯದ ಜಗತ್ತಿಗೆ ಭಾರತದ ಬಗ್ಗೆ ಚೆನ್ನಾಗಿ ತಿಳಿಸುತ್ತಾರೆ. ಯುವಕರಲ್ಲಿ ಕುತೂಹಲ ಹೆಚ್ಚಿದಷ್ಟೂ ಪ್ರವಾಸೋದ್ಯಮ ಹೆಚ್ಚುತ್ತದೆ. ಸಂಶೋಧನೆ ಹೆಚ್ಚಲಿದೆ. ಇದರಿಂದ ಭಾರತದ ಹೆಮ್ಮೆ ಹೆಚ್ಚುತ್ತದೆ. ಭಾರತದ ಹಬ್ಬ ಹರಿದಿನಗಳಲ್ಲಿ, ಜಾತ್ರೆಗಳಲ್ಲಿ ಯುವಕರೂ ಬರಬಹುದು. ಇಂದು ಇದು ಭಾರತದ ಭರವಸೆಯಾಗಿದೆ, ನೀವು ಜಗತ್ತಿನಲ್ಲಿ ಎಲ್ಲಿಯೇ ವಾಸಿಸುತ್ತೀರೋ, ನಿಮ್ಮ ಹಿತಾಸಕ್ತಿಯಲ್ಲಿ ದೇಶವು ನಿಮ್ಮೊಂದಿಗೆ ಇರುತ್ತದೆ ಎಂದರು.

ಹಿಮ ಸರೋವರದ ಮೇಲೆ ಫೋಟೋ ತೆಗೆಯಲು ಹೋಗಿ ಮೂವರು NRIಗಳು ಸಾವು

ಈ ವರ್ಷ ಭಾರತವು ವಿಶ್ವದ ಜಿ-20 ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುತ್ತಿದೆ. ಭಾರತವು ಈ ಜವಾಬ್ದಾರಿಯನ್ನು ಒಂದು ಅವಕಾಶವಾಗಿ ನೋಡುತ್ತಿದೆ. ಭಾರತವನ್ನು ಜಗತ್ತಿಗೆ ತಿಳಿಸಲು ಇದು ನಮಗೆ ಒಂದು ಅವಕಾಶ. ಭಾರತದ ಅನುಭವಗಳಿಂದ ಕಲಿಯಲು, ಹಿಂದಿನ ಅನುಭವಗಳಿಂದ ಸುಸ್ಥಿರ ಭವಿಷ್ಯದ ದಿಕ್ಕನ್ನು ನಿರ್ಧರಿಸಲು ಜಗತ್ತಿಗೆ ಇದು ಒಂದು ಅವಕಾಶ. ನಾವು ಜಿ-20 ಅನ್ನು ಕೇವಲ ರಾಜತಾಂತ್ರಿಕ ಕಾರ್ಯಕ್ರಮವನ್ನಾಗಿ ಮಾಡದೆ, ಸಾರ್ವಜನಿಕ ಸಹಭಾಗಿತ್ವದ ಕಾರ್ಯಕ್ರಮವನ್ನಾಗಿ ಮಾಡಬೇಕು. ಅದಕ್ಕಾಗಿಯೇ ಭಾರತ ದೇಶವು ಅತಿಥಿ ದೇವೋ ಭವ ಎಂಬ ಸಾರ್ವಜನಿಕ ಮನೋಭಾವವನ್ನು ನೋಡುತ್ತದೆ ಎಂದು ಹೇಳಿದರು.

click me!