ವೇದಿಕೆ ಇಲ್ಲ, ವೈಭವ ಇಲ್ಲ, ಅಚಾನಕ್ ಬ್ರಿಟನ್ ಗೆ ಭೇಟಿ ನೀಡಿದ್ದ ಮೋದಿ –ಆಗ ಬಿತ್ತಿದ್ದ ಬೀಜವೇ ಈಗ ಮರವಾಯ್ತು

Published : Jul 24, 2025, 01:06 PM ISTUpdated : Jul 24, 2025, 01:15 PM IST
Narendra Modi

ಸಾರಾಂಶ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಬ್ರಿಟನ್ ಪ್ರವಾಸದಲ್ಲಿದ್ದಾರೆ. ಮೊದಲ ಬಾರಿ ಮೋದಿ ಯುಕೆಗೆ ಹೋಗಿದ್ದು ಫೋಟೋ ಈಗ ವೈರಲ್ ಆಗ್ತಿದೆ. ಯಾವಾಗ, ಯಾಕೆ ಎನ್ನುವ ಮಾಹಿತಿ ಇಲ್ಲಿದೆ. 

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಎರಡು ದಿನಗಳ ಬ್ರಿಟನ್ (Britain) ಪ್ರವಾಸದಲ್ಲಿದ್ದಾರೆ. ಭಾರತ-ಬ್ರಿಟನ್ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆ ಇಡಲಾಗ್ತಿದೆ. ವಿಶೇಷವಾಗಿ, ಅವರು ಮುಕ್ತ ವ್ಯಾಪಾರ ಒಪ್ಪಂದದ (FTA) ಮೂಲಕ ದ್ವಿಪಕ್ಷೀಯ ವ್ಯಾಪಾರಕ್ಕೆ ಹೊಸ ಆಯಾಮ ನೀಡಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಿ ಮೋದಿಯವರು ನಾಲ್ಕನೇ ಬಾರಿ ಬ್ರಿಟನ್ಗೆ ಭೇಟಿ ನೀಡಿದ್ದು, ಕೀರ್ ಸ್ಟಾರ್ಮರ್ ಪ್ರಧಾನಿಯಾದ ನಂತ್ರ ಇದು ಮೊದಲ ಭೇಟಿ. ಪ್ರಧಾನಿ ಮೋದಿ ಲಂಡನ್ ತಲುಪ್ತಿದ್ದಂತೆ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ವಿಶೇಷವಾಗಿ ಭಾರತೀಯ ನಾಗರಿಕರು ಅವರಿಗಾಗಿ ಕಾತರದಿಂದ ಕಾಯುತ್ತಿದ್ದರು. ಈ ಸಮಯದಲ್ಲಿ ಲಂಡನ್ನ ವಾತಾವರಣ ಸಂಪೂರ್ಣವಾಗಿ ಮೋದಿ ಪ್ರೀತಿಯಲ್ಲಿ ಮುಳುಗಿತ್ತು. ನರೇಂದ್ರ ಮೋದಿ ಬ್ರಿಟನ್ ಗೆ ಭೇಟಿ ನೀಡ್ತಿದ್ದಂತೆ ಅವರ ಕೆಲ ಹಳೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ನರೇಂದ್ರ ಮೋದಿ, ಪ್ರಧಾನಿಯಾಗುವ ಮುನ್ನ 1993 ರಲ್ಲಿ ಬ್ರಿಟನ್ ಹೆ ಭೇಟಿ ನೀಡಿದ್ದರು. ಮೋದಿ ಆರ್ಕೈವ್ ಈ ಹಳೆ ಫೋಟೋಗಳನ್ನು ಹಂಚಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಲಂಡನ್ ಭೇಟಿ : ಪ್ರಧಾನಿ ಮೋದಿ 1993 ರಲ್ಲಿ ಮೊದಲ ಬಾರಿಗೆ ಬ್ರಿಟನ್ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ರಾಷ್ಟ್ರೀಯ ರಾಜಕೀಯದಲ್ಲಿ ಉದಯೋನ್ಮುಖ ವ್ಯಕ್ತಿಯಾಗಿದ್ದರು. ತಮ್ಮ ಮೊದಲ ಯುಎಸ್ ಭೇಟಿ ಮುಗಿಸಿ ಹಿಂದಿರುಗುವಾಗ, ಅವರು ಇದ್ದಕ್ಕಿದ್ದಂತೆ ಬ್ರಿಟನ್ಗೆ ಭೇಟಿ ನೀಡಿದರು. ಅಲ್ಲಿ ಅವರು ಸ್ವಲ್ಪ ಕಾಲ ತಂಗಿದ್ದರು. ಯಾವುದೇ ನಿಗದಿತ ಕಾರ್ಯಕ್ರಮವಿರಲಿಲ್ಲ, ಭವ್ಯ ವೇದಿಕೆ ಇರಲಿಲ್ಲ. ಅಮೆರಿಕದಿಂದ ಹಿಂದಿರುಗುವಾಗ ಅದು ಕೇವಲ ಸ್ವಯಂಪ್ರೇರಿತ, ಅನೌಪಚಾರಿಕ ಭೇಟಿಯಾಗಿತ್ತು.

ವಲಸಿಗರನ್ನು ಭೇಟಿಯಾಗಿದ್ದ ಮೋದಿ : ತಮ್ಮ ಮೊದಲ ಯುಕೆ ಪ್ರವಾಸದಲ್ಲಿ ನರೇಂದ್ರ ಮೋದಿ, ಭಾರತೀಯ ವಲಸಿಗರನ್ನು ಭೇಟಿಯಾಗಿದ್ದರು. ಅವರು ಸನ್ರೈಸ್ ರೇಡಿಯೋ ಮತ್ತು ಗುಜರಾತಿ ಪತ್ರಿಕೆ ಕಚೇರಿಗಳಿಗೂ ಭೇಟಿ ನೀಡಿದ್ದರು. ಇಷ್ಟೇ ಅಲ್ಲದೆ ಅವರು ಕ್ರಾಯ್ಡನ್ ಮತ್ತು ಹೇಸ್ಟಿಂಗ್ಸ್ನಲ್ಲಿ ಹಲವಾರು ಕುಟುಂಬಗಳನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದರು. ಆಗ ನರೇಂದ್ರ ಮೋದಿ ಬಿತ್ತಿದ ಬೀಜಗಳು ಈಗ ಭಾರತದ ಸಾಗರೋತ್ತರ ರಾಜತಾಂತ್ರಿಕತೆಯನ್ನು ಬಲಪಡಿಸಲು ನೆರವಾಗಿವೆ.

ಬಿಜೆಪಿ ತಳಮಟ್ಟದಲ್ಲಿ ತನ್ನನ್ನು ತಾನು ಬಲಪಡಿಸಿಕೊಳ್ಳುತ್ತಿದ್ದಾಗ, ನರೇಂದ್ರ ಮೋದಿ ಗುಜರಾತ್ನಲ್ಲಿ ಬಿಜೆಪಿಯನ್ನು ಬಲಪಡಿಸುವ ಜವಾಬ್ದಾರಿ ಹೊತ್ತಿದ್ದರು. 1985 ಮತ್ತು 1995 ರ ನಡುವೆ, ಪಕ್ಷದ ತಳಮಟ್ಟದ ವ್ಯಾಪ್ತಿ ಒಂದರಿಂದ 16 ಸಾವಿರಕ್ಕೂ ಹೆಚ್ಚು ಗ್ರಾಮ ಘಟಕಗಳಿಗೆ ಬೆಳೆದಿತ್ತು. 1999 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇದರ ಲಾಭವನ್ನು ಪಡೆಯಿತು. ಆ ಸಮಯದಲ್ಲಿ, ನರೇಂದ್ರ ಮೋದಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಿಜೆಪಿ ಗುಜರಾತ್ನಲ್ಲಿ ಅದ್ಭುತ ಪ್ರದರ್ಶನ ನೀಡಿ 26 ಲೋಕಸಭಾ ಸ್ಥಾನಗಳಲ್ಲಿ 20 ಸ್ಥಾನಗಳನ್ನು ಗೆದ್ದಿತ್ತು. ಈ ಅದ್ಭುತ ಗೆಲುವಿನ ನಂತರ, ಮೋದಿ 1999 ರಲ್ಲಿ ಎರಡನೇ ಬಾರಿಗೆ ಬ್ರಿಟನ್ಗೆ ಭೇಟಿ ನೀಡಿದ್ದರು. ನೀಸ್ಡೆನ್ನ ಸ್ವಾಮಿನಾರಾಯಣ ಶಾಲೆಯಲ್ಲಿ ಆಯೋಜಿಸಲಾದ ಓವರ್ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ (ಯುಕೆ) 5 ದಿನಗಳ ಬ್ರಿಟನ್ ಪ್ರವಾಸದ ಕೇಂದ್ರಬಿಂದುವಾಗಿತ್ತು. ಆ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಸಂಕೇತ ಎಂದು ಘೋಷಿಸಿದ್ದರು.

ಸೆಪ್ಟೆಂಬರ್ 2000 ರಲ್ಲಿ, ನರೇಂದ್ರ ಮೋದಿ, ಲಂಡನ್ ಗೆ ಒಂದು ಸಣ್ಣ ಭೇಟಿ ನೀಡಿದ್ದರು. ಇದಾದ್ಮೇಲೆ ಆಗಸ್ಟ್ 2003 ರಲ್ಲಿ ಭೂಕಂಪ ಇಡೀ ಗುಜರಾತ್ ಅನ್ನು ನಡುಗಿಸಿತ್ತು. ಆ ಸಮಯದಲ್ಲಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಭುಜ್ ಭೂಕಂಪದ ನಂತ್ರ ನೆರವಿಗೆ ಧನ್ಯವಾದ ಹೇಳಲು ಬ್ರಿಟನ್ ಪ್ರವಾಸ ಕೈಗೊಂಡಿದ್ದರು.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..