3 ಸಾವಿರ ಕೋಟಿ ಸಾಲ ತೀರಿಸಲು ಯೆಸ್‌ ಬ್ಯಾಂಕ್‌ ಅಧಿಕಾರಿಗಳಿಗೆ ಲಂಚ ನೀಡಿದ ಅನಿಲ್‌ ಅಂಬಾನಿ!

Published : Jul 24, 2025, 12:37 PM ISTUpdated : Jul 24, 2025, 12:44 PM IST
Anil Ambani

ಸಾರಾಂಶ

Anil Ambani Bribe ಮೂಲಗಳ ಪ್ರಕಾರ, ಕೇಂದ್ರೀಯ ಸಂಸ್ಥೆಯು ಯೆಸ್ ಬ್ಯಾಂಕ್ ಪ್ರಮೋಟರ್‌ ಮತ್ತು ಅನಿಲ್ ಅಂಬಾನಿ ಅವರ ಕಂಪನಿಗಳ ನಡುವೆ "ಅಕ್ರಮ ಕ್ವಿಡ್ ಪ್ರೊ ಕ್ವೋ ವ್ಯವಸ್ಥೆ"ಯನ್ನು ಪತ್ತೆಹಚ್ಚಿದೆ.

ನವದೆಹಲಿ (ಜು.24): ಯೆಸ್‌ ಬ್ಯಾಂಕ್‌ (Yes Bank) ಉನ್ನತ ಅಧಿಕಾರಿಗಳಿಗೆ ಅನಿಕ್‌ ಅಂಬಾನಿ (Anil Ambani) ನೇತೃತ್ವದ ಕಂಪನಿಗಳು ಲಂಚ (Bribe) ನೀಡಿದ ಬಳಿಕ ಅವರ ಸರಿಯಾದ ಕ್ರಮವಿಲ್ಲದೆ, ಅನಿಲ್‌ ಅಬಾನಿ ಕಂಪನಿಗಳ 3 ಸಾವಿರ ಕೋಟಿ ರೂಪಾಯಿ ಸಾಲವನ್ನು ಕ್ಲಿಯರ್‌ ಮಾಡಿದ್ದಾರೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ. ದೇಶದ ಪ್ರಖ್ಯಾತ ಉದ್ಯಮಿಯ ವ್ಯವಹಾರಗಳಲ್ಲಿನ ಅಕ್ರಮಗಳ ಕುರಿತು ಜಾರಿ ನಿರ್ದೇಶನಾಲಯದ (ED) ತನಿಖೆಯು (Enforcement Directorate) ಈ ಬೃಹತ್ ಸಾಲಗಳನ್ನು 2017 ಮತ್ತು 2019 ರ ನಡುವೆ ತೀರಿಸಲಾಗಿದೆ ಎಂದು ಕಂಡುಕೊಂಡಿದ್ದಾರೆ.

ಮೂಲಗಳ ಪ್ರಕಾರ, ಕೇಂದ್ರೀಯ ಸಂಸ್ಥೆಯು "ಅಕ್ರಮ ಕ್ವಿಡ್ ಪ್ರೊ ಕ್ವೋ ವ್ಯವಸ್ಥೆ"ಯನ್ನು ಪತ್ತೆಹಚ್ಚಿದೆ, ಇದರ ಭಾಗವಾಗಿ ಯೆಸ್ ಬ್ಯಾಂಕ್ ಪ್ರಮೋಟರ್‌ಗಳು ಸಾಲಗಳನ್ನು ಮಂಜೂರು ಮಾಡುವ ಮೊದಲು ಖಾಸಗಿಯಾಗಿ ಹೊಂದಿರುವ ಕಂಪನಿಗಳಲ್ಲಿ ಹಣವನ್ನು ಸ್ವೀಕರಿಸಿದ್ದರು ಎಂದು ತಿಳಿಸಲಾಗಿದೆ.

ತನಿಖೆಯು ಸಾಲ ಅನುಮೋದನೆ ಪ್ರಕ್ರಿಯೆಯಲ್ಲಿ "ಗಂಭೀರ ಉಲ್ಲಂಘನೆ"ಗಳನ್ನು ಕಂಡುಹಿಡಿದಿದೆ. ಕ್ರೆಡಿಟ್ ಅನುಮೋದನೆ ಎಂಓಯುಗಳನ್ನು ಬ್ಯಾಕ್‌ಡೇಟ್‌ ಅಂದರೆ ಹಿಂದಿನ ದಿನಾಂಕಕ್ಕೆ ಹಾಕಲಾಗಿದೆ ಮತ್ತು ಬ್ಯಾಂಕಿನ ನೀತಿಗಳನ್ನು ಉಲ್ಲಂಘಿಸಿ ಸರಿಯಾದ ಕ್ರಮ ಅಥವಾ ಕ್ರೆಡಿಟ್ ವಿಶ್ಲೇಷಣೆ ಇಲ್ಲದೆ ಹೂಡಿಕೆಗಳನ್ನು ಮುಂದೂಡಲಾಗಿದೆ. ಅಲ್ಲದೆ, ಸಾಲದ ಹಣವನ್ನು ಮೂಲ ಸಾಲದ ನಿಯಮಗಳನ್ನು ಉಲ್ಲಂಘಿಸಿ ಶೆಲ್ ಕಂಪನಿಗಳು ಮತ್ತು ಇತರ ಗುಂಪು ಘಟಕಗಳಿಗೆ ರವಾನಿಸಲಾಗಿದೆ.

ಸಾಲ ತೀರಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ತಪ್ಪುಗಳನ್ನು ಇಡಿ ಕಂಡು ಹಿಡಿದಿದೆ. ಕೆಟ್ಟ ಹಣಕಾಸು ಇತಿಹಾಸ ಹೊಂದಿರುವ ಕಂಪನಿಗಳಿಗೆ ಹಣ ನೀಡಲಾಗಿದೆ. ಕೆಲವು ಕಂಪನಿಗಳು ಒಂದೇ ವಿಳಾಸವನ್ನು ಹೊಂದಿರುವುದು ಮಾತ್ರವಲ್ಲದೆ, ಅದರ ಸಾಲ ಪಡೆದುಕೊಂಡ ಕಂಪನಿಗಳ ನಿರ್ದೇಶಕರು ಕೂಡ ಒಬ್ಬರೇ ಆಗಿದ್ದಾರೆ. ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆ ಆಗಿಲ್ಲ. ಅದರೊಂದಿಗೆ ಗ್ರೂಪ್‌ನ ಕಾರ್ಪೋರೇಟ್‌ ಲೋನ್‌ಗಳನ್ನು ಆದಷ್ಟು ಎವರ್‌ ಎಂಗೇಜಿಂಗ್‌ ಆಗಿಡಲು ಪ್ರಯತ್ಮಿಸಲಾಗಿದೆ. ಕೆಲವು ಸಾಲಗಳನ್ನು ಔಪಚಾರಿಕ ಅನುಮೋದನೆಗೆ ಮೊದಲೇ ವಿತರಿಸಲಾಗಿದೆ, ಆದರೆ ಇನ್ನು ಕೆಲವು ಸಾಲಗಳನ್ನು ಅವುಗಳಿಗೆ ಅರ್ಜಿ ಸಲ್ಲಿಸಿದ ದಿನದಂದೇ ವಿತರಣೆ ಮಾಡಲಾಗಿದೆ.

ಅನಿಲ್ ಅಂಬಾನಿ ನೇತೃತ್ವದ ಕಂಪನಿಗಳ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ಸಂಸ್ಥೆಯು 35 ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಬೃಹತ್ ಆರ್ಥಿಕ ಅಕ್ರಮಗಳು ಮತ್ತು ಬ್ಯಾಂಕ್ ಸಾಲಗಳ ಹಣ ವರ್ಗಾವಣೆ ಆರೋಪ ಹೊತ್ತಿರುವ ಎರಡು ಸಿಬಿಐ ಪ್ರಕರಣಗಳನ್ನು ಇಡಿ ತನಿಖೆ ಆಧರಿಸಿದೆ. ಇದು ರಾಷ್ಟ್ರೀಯ ವಸತಿ ಬ್ಯಾಂಕ್, ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ, ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ ಮತ್ತು ಬ್ಯಾಂಕ್ ಆಫ್ ಬರೋಡಾದಿಂದ ಸಹ ಮಾಹಿತಿಯನ್ನು ಪಡೆದುಕೊಂಡಿದೆ.

ಸಾಲದ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಬ್ಯಾಂಕುಗಳು, ಹೂಡಿಕೆದಾರರು, ಷೇರುದಾರರು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ವಂಚಿಸಲು ಏಜೆನ್ಸಿಯು "ಲೆಕ್ಕಾಚಾರದ ಯೋಜನೆ"ಯನ್ನು ಕಂಡುಹಿಡಿದಿದೆ ಎಂದು ಮೂಲಗಳು ತಿಳಿಸಿವೆ. ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ, ಸಂಸ್ಥೆಯು 50 ಕ್ಕೂ ಹೆಚ್ಚು ಕಂಪನಿಗಳನ್ನು ಶೋಧಿಸಿದೆ ಮತ್ತು 25 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಪ್ರಶ್ನಿಸಿದೆ. ತನಿಖೆ ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!