PM Kisan Samman Nidhi Yojana: 'ಪ್ರಧಾನಿ ಮಂತ್ರಿ ಕಿಸಾನ್ ಯೋಜನೆ'ಯ ಹಣ ಬರುತ್ತಿಲ್ವಾ? ಕೂಡಲೇ ಹೀಗೆ ಮಾಡಿ

Published : Jul 16, 2025, 01:12 PM ISTUpdated : Jul 16, 2025, 01:14 PM IST
PM Kisan Samman Nidhi Yojana

ಸಾರಾಂಶ

ಬಡ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ಪಿಎಂ ಕಿಸಾನ್​ ಸಮ್ಮಾನ್​ ನಿಧಿ ಯೋಜನೆಯ ಹಣ ನಿಮಗೆ ಬರುತ್ತಿಲ್ವಾ? ಹಾಗಿದ್ದರೆ ಕೂಡಲೇ ಹೀಗೆ ಮಾಡಿ... 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಭಾರತ ಸರ್ಕಾರವು ಪ್ರಾರಂಭಿಸಿದ ಯೋಜನೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿಗಳ ಸಹಾಯವನ್ನು ಒದಗಿಸುವುದು ಇದರ ಉದ್ದೇಶ. ಈ ಯೋಜನೆಯಡಿಯಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎಲ್ಲ ರೈತರ ಖಾತೆಗಳಿಗೆ 2 ಸಾವಿರ ರೂಪಾಯಿ ಅರ್ಥಾತ್​ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಇಲ್ಲಿಯವರೆಗೆ ಸುಮಾರು 10 ಕೋಟಿ ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ 19ನೇ ಕಂತಿನಲ್ಲಿ ಅಂದಾಜು 22 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ಮಧ್ಯವರ್ತಿಗಳಿಲ್ಲದೆ ದೇಶಾದ್ಯಂತ ರೈತರನ್ನು ತಲುಪಿದೆ. ಈ ಯೋಜನೆಯ ಫಲವನ್ನು ನೀವೂ ಪಡೆಯಬೇಕು ಎಂದರೆ ಕೂಡಲೇ ಹೀಗೆ ಮಾಡಬೇಕಿದೆ.

ಯೋಜನೆಯ 20ನೇ ಕಂತನ್ನು ಇದೇ 19 ಅಥವಾ 20ರಂದು ಪ್ರಧಾನಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಕಂತನ್ನು ನೀವು ಪಡೆಯಬೇಕಾದರೆ ಕೆಲವೊಂದು ನಿಯಮ ಪಾಲನೆ ಮಾಡಬೇಕಿದೆ. ಕಂತು ಪಾವತಿ ನಿಮ್ಮ ಖಾತೆಗೆ ಬರುತ್ತಿಲ್ಲವಾದರೆ, ಖಾತೆಯಲ್ಲಿ ಸಮಸ್ಯೆ ಇದೆ ಎಂದರ್ಥ. ಇದಕ್ಕಾಗಿ ಕೂಡಲೇ ನೀವು ಹೀಗೆ ಮಾಡಬೇಕಿದೆ.

* ಇ-ಕೆವೈಸಿ ಪೂರ್ಣಗೊಳಿಸಿ: ಪಿಎಂ-ಕಿಸಾನ್ ಪ್ರಯೋಜನಗಳನ್ನು ಅಡೆತಡೆಗಳಿಲ್ಲದೆ ಪಡೆಯುವುದನ್ನು ಮುಂದುವರಿಸಲು ನಿಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಿ.

* ಆಧಾರ್ ಲಿಂಕ್ ಮಾಡುವಿಕೆ: ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಿ.

* ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ: ಪಾವತಿ ವೈಫಲ್ಯಗಳನ್ನು ತಪ್ಪಿಸಲು ನಿಮ್ಮ ಬ್ಯಾಂಕ್ ವಿವರಗಳನ್ನು ಎರಡು ಬಾರಿ ಪರಿಶೀಲಿಸಿ.

* ಭೂ ಸಮಸ್ಯೆಗಳನ್ನು ಪರಿಹರಿಸಿ: ಯಾವುದೇ ಭೂ ದಾಖಲೆಗಳಲ್ಲಿ ವ್ಯತ್ಯಾಸವಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಿ.

* ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸಿ: ನಿಮ್ಮ ಫಲಾನುಭವಿ ಸ್ಥಿತಿಯನ್ನು ಟ್ರ್ಯಾಕ್ ಮಾಡಲು pmkisan.gov.in ಗೆ ಭೇಟಿ ನೀಡಿ.

* ಮೊಬೈಲ್ ಸಂಖ್ಯೆಯನ್ನು ನವೀಕರಿಸಿ: OTP ಗಳು ಮತ್ತು ಇದರ ಕುರಿತಾದ ಯಾವುದೇ ಮಾಹಿತಿ ಸ್ವೀಕರಿಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್​ಡೇಟ್​ ಮಾಡಿ.

 

ಪಿಎಂ ಕಿಸಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹತೆಗಳು

-ಭಾರತೀಯ ಪ್ರಜೆಯಾಗಿರಬೇಕು.

-ನೀವು 2 ಹೆಕ್ಟೇರ್‌ವರೆಗೆ ಭೂಮಿ ಹೊಂದಿರುವ ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು.

-ನೀವು ಕೃಷಿಗೆ ಬಳಸಬಹುದಾದ ಭೂಮಿಯನ್ನು ಹೊಂದಿರಬೇಕು. ಈ ಯೋಜನೆಯ ಪ್ರಯೋಜನವು ಕೃಷಿಯೋಗ್ಯ ಭೂಮಿಯನ್ನು ಕೃಷಿಗಾಗಿ ಬಳಸುವ ರೈತ ಕುಟುಂಬಗಳಿಗೆ ಮಾತ್ರ ಲಭ್ಯವಿರುತ್ತದೆ. ಕೃಷಿ ಮಾಡಲು ಸಾಧ್ಯವಾಗದ -ಭೂಮಿಯನ್ನು ಹೊಂದಿರುವವರು ಅಥವಾ ಕೃಷಿಯೇತರ ಉದ್ದೇಶಗಳಿಗಾಗಿ ಭೂಮಿಯನ್ನು ಬಳಸುವವರು ಅರ್ಹರಲ್ಲ.

-ಕೃಷಿಯು ರೈತರ ಆದಾಯದ ಪ್ರಮುಖ ಭಾಗವಾಗಿರಬೇಕು. ಒಬ್ಬ ರೈತನ ಆದಾಯವು ಸರ್ಕಾರಿ ಉದ್ಯೋಗಗಳು, ವ್ಯವಹಾರ ಅಥವಾ ಕೃಷಿಯನ್ನು ಹೊರತುಪಡಿಸಿ ಯಾವುದೇ ಇತರ ಮೂಲಗಳಿಂದ ಬರುವ ಆದಾಯವನ್ನು ಒಳಗೊಂಡಿದ್ದರೆ, ಅವರು ಇದಕ್ಕೆ ಅರ್ಹರಲ್ಲ.

-ತಿಂಗಳಿಗೆ ₹10,000 ಅಥವಾ ಅದಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವವರು ಸಹ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ.

-ಆದಾಯ ತೆರಿಗೆ ಪಾವತಿಸುವ ಯಾರಾದರೂ ಈ ಕಾರ್ಯಕ್ರಮಕ್ಕೆ ಅರ್ಹರಲ್ಲ.

ಒಂದು ವೇಳೆ ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ pmkisan-ict@govi.in ಈ ಇಮೇಲ್ ಐಡಿಯನ್ನು ಸಂಪರ್ಕಿಸಿ. -ಪಿಎಂ ಕಿಸಾನ್ ಯೋಜನೆ ಸಹಾಯವಾಣಿ ಸಂಖ್ಯೆ- 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ
ಮೋದಿ-ಪುಟಿನ್ ಆರ್ಮರ್ಡ್ ಬದಲು ಸಾಮಾನ್ಯ ಟೊಯೋಟಾ ಫಾರ್ಚೂನ್ ಕಾರಿನಲ್ಲಿ ಪ್ರಯಾಣಿಸಿದ್ದೇಕೆ?