ಕರ್ನಾಟಕ ಸೇರಿ ದೇಶವ್ಯಾಪಿ ದಾಳಿಗೆ ಸಂಚು: 7 ಶಂಕಿತ ಐಸಿಸ್‌ ಉಗ್ರರ ವಿರುದ್ಧ ಚಾರ್ಜ್‌ಶೀಟ್‌

Published : Nov 06, 2023, 08:05 AM IST
ಕರ್ನಾಟಕ ಸೇರಿ ದೇಶವ್ಯಾಪಿ ದಾಳಿಗೆ ಸಂಚು: 7 ಶಂಕಿತ ಐಸಿಸ್‌ ಉಗ್ರರ ವಿರುದ್ಧ ಚಾರ್ಜ್‌ಶೀಟ್‌

ಸಾರಾಂಶ

ಕರ್ನಾಟಕದ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಉಗ್ರ ಚಟುವಟಿಕೆ ನಡೆಸುವ ಮೂಲಕ ದೇಶವ್ಯಾಪಿ ದಾಳಿಯ ಸಂಚು ರೂಪಿಸಿದ್ದ ‘ಪುಣೆ ಐಸಿಸ್‌ ಟೆರರ್‌ ಮಾಡ್ಯೂಲ್‌’ನ 7 ಶಂಕಿತ ಐಸಿಸ್‌ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆರೋಪಪಟ್ಟಿ ದಾಖಲಿಸಿದೆ.

ಮುಂಬೈ: ಕರ್ನಾಟಕದ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಉಗ್ರ ಚಟುವಟಿಕೆ ನಡೆಸುವ ಮೂಲಕ ದೇಶವ್ಯಾಪಿ ದಾಳಿಯ ಸಂಚು ರೂಪಿಸಿದ್ದ ‘ಪುಣೆ ಐಸಿಸ್‌ ಟೆರರ್‌ ಮಾಡ್ಯೂಲ್‌’ನ 7 ಶಂಕಿತ ಐಸಿಸ್‌ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆರೋಪಪಟ್ಟಿ ದಾಖಲಿಸಿದೆ.

ಮುಂಬೈನ ವಿಶೇಷ ಎನ್‌ಐಎ ಕೋರ್ಟ್‌ನಲ್ಲಿ (NIA court)ದಾಖಲಿಸಿದ ಆರೋಪಪಟ್ಟಿಯಲ್ಲಿ ಆರೋಪಪಟ್ಟಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ, ಸ್ಫೋಟಕ ಪದಾರ್ಥ ಕಾಯ್ದೆ (Explosive Substances Act), ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಇತರೆ ಕಾಯ್ದೆಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಆರೋಪಪಟ್ಟಿಯಲ್ಲಿ ಹೆಸರಿಸಲಾದ 7 ವ್ಯಕ್ತಿಗಳೆಂದರೆ ಮೊಹಮ್ಮದ್‌ ಇಮ್ರಾನ್- ಮೊಹಮ್ಮದ್‌ ಯೂಸುಫ್‌ ಖಾನ್‌ ಅಲಿಯಾಸ್‌ ಮಟ್ಕಾ ಅಲಿಯಾಸ್‌ ಅಮೀರ್‌ ಅಬ್ದುಲ್‌ ಹಮೀದ್‌ ಖಾನ್‌, ಮೊಹಮ್ಮದ್‌ ಯೂನಸ್- ಮೊಹಮ್ಮದ್‌ ಯಾಕುಬ್‌ ಸಕಿ ಅಲಿಯಾಸ್‌ ಆದಿಲ್‌ ಅಲಿಯಾಸ್‌ ಆದಿಲ್‌ ಸಲೀಂ ಖಾನ, ಕದೀರ್‌ ದಸ್ತಗೀರ್‌ ಪಠಾಣ್‌ ಅಲಿಯಾಸ್‌ ಅಬ್ದುಲ್‌ ಕದೀರ್‌, ಸೀಮಾಬ್‌ ನಾಸಿರುದ್ದೀನ್‌ ಕಜಿ, ಝುಲ್ಪಿಕರ್‌ ಅಲಿ ಬರೋಡಾವಾಲ ಅಲಿಯಾಸ್‌ ಲಾಲಾಭಾಯ್‌ ಅಲಿಯಾಸ್‌ ಸೈಫ್‌, ಶಮೀಲ್‌ ಸಾಖಿಬ್‌ ನಚನ್‌ (Shameel Sahib Nachan)ಮತ್ತು ಆಕಿಫ್‌ ಅತೀಕ್‌ ನಚನ್‌ (Akif Atiq Nachan) .

ಇವರ ಸುಮಾರ 3 ತಿಂಗಳ ಹಿಂದೆ ಪುಣೆ (Pune) ಹಾಗೂ ಮಹಾರಾಷ್ಟ್ರದ (Maharashtra) ಇತರ ಭಾಗಗಳಲ್ಲಿ ಬಂಧಿತರಾಗಿದ್ದರು. ಪುಣೆಯನ್ನು ಕೇಂದ್ರ ಸ್ಥಾನ ಮಾಡಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರು.

ಬಂಧಿತರಿಂದ ಕರ್ನಾಟಕದಲ್ಲಿ ಸ್ಥಳ ಪರಿಶೀಲನೆ:

ಬಂಧಿತರು ಐಸಿಸ್‌ ಸಂಘಟನೆಗಾಗಿ ಹಣ ಸಂಗ್ರಹಿಸುವ ಕೆಲಸದಲ್ಲಿ ಭಾಗಿಯಾಗಿದ್ದರು. ಇವರೆಲ್ಲಾ ಕರ್ನಾಟಕ, ಗೋವಾ, ತೆಲಂಗಾಣ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಸ್ಥಳ ಪರಿಶೀಲನಾ ಕಾರ್ಯ ನಡೆಸಿ, ಅಲ್ಲೆಲ್ಲ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ಹೇಳಿದೆ.

‘ಇವರ ಉದ್ದೇಶ ದೇಶದಲ್ಲಿ ಭಯೋತ್ಪಾದನೆ ಮತ್ತು ಹಿಂಸೆಯನ್ನು ಸೃಷ್ಟಿಸುವುದಾಗಿತ್ತು. ಜೊತೆಗೆ ಇವರೆಲ್ಲಾ ಉಗ್ರ ತರಬೇತಿ ಶಿಬಿರ ಆಯೋಜಿಸಿದ್ದರು, ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಉಗ್ರರ ಜೊತೆ ನಂಟು ಹೊಂದಿದ್ದರು ಮತ್ತು ಸ್ಫೋಟಕ ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇದರ ಜೊತೆಗೆ ಬಂಧಿತರ ಬಳಿ ಸ್ಫೋಟಕ, ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ’ ಎಂದು ಅದು ವಿವರಿಸಿದೆ.

‘ಈ ಎಲ್ಲಾ ಚಟುವಟಿಕೆಗಳ ಮೂಲಕ ಅವರು ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಮತ್ತಷ್ಟು ಕುಮ್ಮಕ್ಕು ನೀಡುವ ಉದ್ದೇಶ ಹೊಂದಿದ್ದರು. ಈ ಮೂಲಕ ಜನರಲ್ಲಿ ಭೀತಿ ಹುಟ್ಟಿಸುವ ಮತ್ತು ದೇಶದ ಭದ್ರತೆಗೆ ಸಮಗ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಉದ್ದೇಶ ಹೊಂದಿದ್ದು ಖಚಿತಪಟ್ಟಿದೆ’ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ದಾಖಲಿಸಿದೆ.

ಜೊತೆಗೆ ತನಿಖೆ ವೇಳೆ, ಬಂಧಿತರು ಅಂತಾರಾಷ್ಟ್ರೀಯ ನಂಟಿನ, ವಿದೇಶಿ ಐಸಿಸ್‌ ಹ್ಯಾಂಡ್ಲರ್‌ಗಳ ಸಂಪರ್ಕ ಇರುವುದು ಖಚಿತಪಟ್ಟಿದೆ. ಇವರೆಲ್ಲಾ ಭಾರತದಲ್ಲಿ ಐಸಿಸ್‌ ಸಿದ್ಧಾಂತವನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದು ಕೂಡಾ ಕಂಡುಬಂದಿದೆ ಎಂದು ಅದು ವಿವರಿಸಿದೆ.

ಹುಬ್ಬಳ್ಳಿ, ಮಲೆನಾಡಲ್ಲಿ 8ನೇ ಆರೋಪಿ ಶಹನವಾಜ್‌ ಸಂಚು:

ಈ ಪ್ರಕರಣದಲ್ಲಿ ಮೊದಲ 7 ಆರೋಪಿಗಳ ವಿರುದ್ಧ ಮಾತ್ರ ಈಗ ಚಾರ್ಜ್‌ಶೀಟ್‌ ದಾಖಲಾಗಿದೆ. ಇನ್ನು ಶಹನವಾಜ್‌ ಎಂಬ ಎಂಜಿನಿಯರ್‌ ಸೇರಿ 3 ಜನರನ್ನು ಅಕ್ಟೋಬರ್‌ 2ರಂದು ದಿಲ್ಲಿ ಪೊಲೀಸರು ಇದೇ ಪುಣೆ ಭಯೋತ್ಪಾದಕ ಸಂಚು ಪ್ರಕರಣದಲ್ಲಿ ದಿಲ್ಲಿಯಲ್ಲಿ ಬಂಧಿಸಿದ್ದರು. ಆಗ ಶಹನವಾಜ್‌ ಮತ್ತು ಇತರರು ಕರ್ನಾಟಕದ ಹುಬ್ಬಳ್ಳಿ, ಉಡುಪಿ ಹಾಗೂ ಶರಾವತಿ ಅರಣ್ಯ ಪ್ರದೇಶದಲ್ಲಿ ಸಂಚರಿಸಿ ಉಗ್ರ ಕೃತ್ಯಕ್ಕೆ ಸರ್ವೇಕ್ಷಣೆ ನಡೆಸಿದ್ದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ದೆಹಲಿಯಲ್ಲಿ ಎನ್‌ಐಎ ವಕ್ತಾರರು ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನ್ಯಾ। ಸ್ವಾಮಿನಾಥನ್‌ ವಾಗ್ದಂಡನೆಗೆ 56 ನಿವೃತ್ತ ಜಡ್ಜ್‌ಗಳ ಕಿಡಿ