ವಿವಾಹ ನಂತರ ಮತಾಂತರವಾದ್ರೆ ವೈವಾಹಿಕ ಹಕ್ಕಿಲ್ಲ: ಮದ್ವೆಯೂ ಅಸಿಂಧು ಜೀವನಾಂಶ ನೀಡಬೇಕಿಲ್ಲ: ಹೈಕೋರ್ಟ್‌

 ಹಿಂದು ಧರ್ಮದ ಅನುಸಾರ ವಿವಾಹವಾದ ನಂತರ ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಪತಿಯ ಜೊತೆಗಿನ ಎಲ್ಲ ವೈವಾಹಿಕ ಹಕ್ಕುಗಳನ್ನು ಕಳೆದುಕೊಂಡಂತಾಗುತ್ತದೆ ಎಂದು ಹೈಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

Karnataka High Court significant verdict No matrimonial right if one converted after marriage No need to pay alimony Marriage also dismissed akb

ಬೆಂಗಳೂರು:  ಹಿಂದು ಧರ್ಮದ ಅನುಸಾರ ವಿವಾಹವಾದ ನಂತರ ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಪತಿಯ ಜೊತೆಗಿನ ಎಲ್ಲ ವೈವಾಹಿಕ ಹಕ್ಕುಗಳನ್ನು ಕಳೆದುಕೊಂಡಂತಾಗುತ್ತದೆ ಎಂದು ಹೈಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಕೌಟುಂಬಿಕ ದೌರ್ಜನ್ಯ ನಡೆಸದಿದ್ದರೂ ಪತ್ನಿಗೆ ನಾಲ್ಕು ಲಕ್ಷ ರು. ಪರಿಹಾರ ನೀಡಲು ನಿರ್ದೇಶಿಸಿದ್ದ ಬೆಂಗಳೂರಿನ 57ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್‌ (Justice Rajendra Badamikar) ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪತಿ ದೌಜನ್ಯ ಎಸಗಿರುವುದು ಸಾಬೀತಾಗದ ಹೊರತು ಕೌಟುಂಬಿಕ ದೌರ್ಜನ್ಯ (Domestic Violence) ಪ್ರಕರಣಗಳಲ್ಲಿ ಪತ್ನಿಗೆ ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ’ಯಡಿ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್‌, ಪ್ರಕರಣದಲ್ಲಿ ಪತ್ನಿಗೆ ಪರಿಹಾರ ಪಾವತಿಸಲು ಅರ್ಜಿದಾರ ಪತಿಗೆ ನಿರ್ದೇಶಿಸಿದ್ದ ಸೆಷನ್ಸ್‌ ನ್ಯಾಯಾಲಯದ ಆದೇಶ ರದ್ದುಪಡಿಸಿದೆ.

ಅಯೋಧ್ಯೆ ರಾಮಮಂದಿರದಲ್ಲಿ ಅಕ್ಷತೆ ಪೂಜೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ

ಪ್ರಕರಣದ ಹಿನ್ನೆಲೆ:

ಹಿಂದು ಧರ್ಮಕ್ಕೆ ಸೇರಿದ ಬೆಂಗಳೂರಿನ ರಾಜಾಜಿನಗರದ (Rajajinagar)ನಿವಾಸಿಯಾದ ಅರ್ಜಿದಾರ ರವಿ ಮತ್ತು ವಿದ್ಯಾರಣ್ಯಪುರದ ಸೌಮ್ಯಾ (ಇಬ್ಬರ ಹೆಸರು ಬದಲಿಸಲಾಗಿದೆ) 2000ರ ಸೆ.10ರಂದು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಮಗು ಜನಿಸಿತ್ತು. ಆದರೆ, ಚಿಕ್ಕ ವಯಸ್ಸಿನಲ್ಲಿ ಗಂಡು ಮಗು ಸಾವನ್ನಪ್ಪಿತ್ತು. ನಂತರ ಭಿನ್ನಾಭಿಪ್ರಾಯಗಳು ಏರ್ಪಟ್ಟು ಪತ್ನಿ ಮತ್ತು ಪತಿ ನಡುವೆ ಕಂದಕ ಸೃಷ್ಟಿಯಾಗಿತ್ತು. 2013ರಲ್ಲಿ ಪತಿ ವಿರುದ್ದ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಸೆಕ್ಷನ್‌ 12 ಅಡಿಯಲ್ಲಿ ಪರಿಹಾರ ಕೋರಿ ಪತ್ನಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ (Magistrate Court)ಅರ್ಜಿ ಸಲ್ಲಿಸಿದ್ದರು.

ಮದುವೆ ಸಂದರ್ಭದಲ್ಲಿ ತಮ್ಮ ಪೋಷಕರು ಪತಿಗೆ ನಗದು ಮತ್ತು ಚಿನ್ನಾಭರಣ ರೂಪದಲ್ಲಿ ಸಾಕಷ್ಟು ವರದಕ್ಷಿಣೆ ನೀಡಿದ್ದಾರೆ. ಇದರ ಹೊರತಾಗಿಯೂ ಪತಿ ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆಯಿಟ್ಟು, ತನ್ನನ್ನು ಅನುಚಿತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಆಧ್ದರಿಂದ ಪರಿಹಾರ ನೀಡಲು ಪತಿಗೆ ಆದೇಶಿಸುವಂತೆ ಪತ್ನಿ ಕೋರಿದ್ದರು.  ಪತ್ನಿಯ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದ ಪತಿ, ಪತ್ನಿ ತಾನಾಗಿಯೇ ನನ್ನನ್ನು ಬಿಟ್ಟು ಹೋಗಿದ್ದಾರೆ. ಆಕೆಯ ನಿರ್ಲಕ್ಷ್ಯದಿಂದಲೇ ಗಂಡು ಮಗು ಸಾವನ್ನಪ್ಪಿದೆ. ಆಕೆ ಕ್ರೈಸ್ತ (Christianity) ಧರ್ಮಕ್ಕೆ ಮತಾಂತರಗೊಂಡಿದ್ದು, ಹೆಣ್ಣು ಮಗುವನ್ನು ಸಹ ಮತಾಂತರ ಮಾಡಲು ಯತ್ನಿಸಿದ್ದಾರೆ. ಪಾರ್ಶ್ವವಾಯುನಿಂದ ಬಳಲುತ್ತಿರುವ ಕಾರಣ ನನ್ನ ಜೀವನ ನಿರ್ವಹಣೆ ಮಾಡಿಕೊಳ್ಳಲು ಅಸಮರ್ಥನಾಗಿದ್ದೇನೆ. ಆಧ್ದರಿಂದ ಪತ್ನಿಯ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದ ತೀರ್ಪು ಕೇಳಿ ಎದೆ ಒಡೆದೋಯ್ತು; ನಟಿ ಲಕ್ಷ್ಮಿ ಮಂಚು ಹೇಳಿದ್ದೇನು?

ಆ ಅರ್ಜಿ ಸಂಬಂಧ ಪತಿ ಮತ್ತು ಪತ್ನಿಯ ವಾದ ಆಲಿಸಿದ್ದ ಹಾಗೂ ಅವರು ಒದಗಿಸಿದ್ದ ಸಾಕ್ಷ್ಯಾಧಾರ ಪರಿಶೀಲಿಸಿದ್ದ ಮ್ಯಾಜಿಸ್ಟ್ರೇಟ್‌ ಕೋರ್ಟ್‌, ಪತಿಯ ಕೌಟುಂಬಿಕ ದೌರ್ಜನ್ಯವನ್ನು ಸಾಬೀತುಪಡಿಸುವಲ್ಲಿ ಪತ್ನಿ ವಿಫಲವಾಗಿದ್ದಾರೆ. ಹಾಗಾಗಿ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಹಾರ ಪಡೆಯಲು ಪತ್ನಿ ಅರ್ಹವಾಗಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿಯ ವಿಚಾರಣೆ ನಡೆಸಿದ್ದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ಪತಿಯಿಂದ ಪತ್ನಿಯ ಮೇಲೆ ಕೌಟುಂಬಿಕ ದೌರ್ಜನ್ಯ ನಡೆದಿಲ್ಲ ಎಂದು ತೀರ್ಮಾನಿಸಿ, ಜೀವನಾಂಶ ಘೋಷಿಸಲು ನಿರಾಕರಿಸಿತ್ತು. ಆದರೆ, ತನ್ನ ಜೀವನ ನಿರ್ವಹಣೆ ಮಾಡಿಕೊಳ್ಳಲು ಪತ್ನಿ ಅಸಮರ್ಥಳಾಗಿರುವ ಕಾರಣ ಪತಿಯು ನಾಲ್ಕು ಲಕ್ಷ ರು. ಪರಿಹಾರ ಪಾವತಿಸಬೇಕೆಂದು 2015ರ ನ.13ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

'ದೇಶಭಕ್ತ ಎನಿಸಿಕೊಳ್ಳಲು ನೆರೆಯ ದೇಶವನ್ನು ವಿರೋಧಿಸಲೇಬೇಕು ಅಂತೇನಿಲ್ಲ..', ಬಾಂಬೆ ಹೈಕೋರ್ಟ್‌ ತೀರ್ಪು!

ಅದರ ವಿಚಾರಣೆ ನಡೆಸಿದ ಹೈಕೋರ್ಟ್‌, ಕೌಟುಂಬಿಕ ದೌರ್ಜನ್ಯ ಕಾಯ್ದೆ-2005ರ ಸೆಕ್ಷನ್‌ 22 ಪ್ರಕಾರ ಕೌಟುಂಬಿಕ ದೌರ್ಜನ್ಯ ಕೃತ್ಯ ಸಾಬೀತಾದರೆ ಮಾತ್ರ ಕಾಯ್ದೆಯ ಸೆಕ್ಷನ್‌ 12ರಡಿ ನೊಂದ ವ್ಯಕ್ತಿಗಳು ಸಲ್ಲಿಸಿದ ಅರ್ಜಿ ಸಂಬಂಧ ಮಂಜೂರು ಮಾಡಲಾದ ಇತರೆ ಪರಿಹಾರದ ಜೊತೆಗೆ ಹೆಚ್ಚುವರಿ ಪರಿಹಾರ ಮಂಜೂರು ಮಾಡಬಹುದಾಗಿದೆ. ಆದರೆ, ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಎರಡು ಸಹ ಪತ್ನಿಯ ಮೇಲೆ ಪತಿ ಕೌಟುಂಬಿಕ ದೌರ್ಜನ್ಯ ಎಸಗಿಲ್ಲ ಎಂಬುದಾಗಿ ತೀರ್ಮಾನಿಸಿವೆ. ಇಂತಹ ಸನ್ನಿವೇಶದಲ್ಲಿ ಪರಿಹಾರ ಘೋಷಿಸಲು ಅವಕಾಶವಿಲ್ಲ ಎಂದು ಆದೇಶಿಸಿದೆ.

2008ರ ಪತ್ರಕರ್ತೆ ಸೌಮ್ಯ ವಿಶ್ವನಾಥನ್‌ ಹತ್ಯೆ ಪ್ರಕರಣದಲ್ಲಿ ಐವರು ದೋಷಿ: ದೆಹಲಿ ಹೈಕೋರ್ಟ್‌

ಮತಾಂತರದಿಂದ ಮದುವೆಯೇ ಅಸಿಂಧು

ಮದುವೆ ಅಸ್ವಿತ್ವದಲ್ಲಿದೆ ಮತ್ತು ಜೀವನ ನಿರ್ವಹಣೆ ಮಾಡಲು ಪತ್ನಿ ಅಸಮರ್ಥರಾಗಿದ್ದಾರೆ ಎಂಬ ಏಕೈಕ ಆಧಾರದ ಮೇಲೆ ಜೀವನಾಂಶ ಪಾವತಿಸಲು ಪತಿಗೆ ಸೆಷನ್ಸ್‌ ನ್ಯಾಯಾಲಯ ನಿರ್ದೇಶಿಸಿದೆ. ಆದರೆ, ಪತ್ನಿಯು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಆಕೆಯು ಪತಿಯೊಂದಿಗೆ ಹೊಂದಿದ್ದ ಎಲ್ಲ ವೈವಾಹಿಕ ಹಕ್ಕುಗಳನ್ನು ಕಳೆದುಕೊಂಡಂತಾಗುತ್ತದೆ. ವಿವಾಹ ವಿಚ್ಛೇದನ ಮಂಜೂರಾಗದಿದ್ದರೂ ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ಕಾರಣ ಮದುವೆಯೇ ಅಸಿಂಧುಗೊಳ್ಳುತ್ತದೆ. ಆದ್ದರಿಂದ ಸೆಷನ್ಸ್‌ ನ್ಯಾಯಾಲಯವು ಪತ್ನಿಗೆ ನಾಲ್ಕು ಲಕ್ಷ ರು. ಪರಿಹಾರ ಘೋಷಿಸುವ ಮೂಲಕ ತಪ್ಪೆಸಗಿದೆ. ಇದು ನ್ಯಾಯದಾನದ ಹಾದಿ ತಪ್ಪಿದಂತಾಗಿದೆ ಎಂದು ನಿರ್ಧರಿಸಿದ ಹೈಕೋರ್ಟ್‌, ಸೆಷನ್ಸ್‌ ನ್ಯಾಯಾಲಯದ ಆದೇಶ ರದ್ದುಪಡಿಸಿತು.

Latest Videos
Follow Us:
Download App:
  • android
  • ios