ರಾಮಭಕ್ತಿಯ ವಿಡಿಯೋ ಮಾಡಿದ್ದಕ್ಕೆ ಖ್ಯಾತ ಗಾಯಕಿ ಕೆಎಸ್‌ ಚಿತ್ರಾ ವಿರುದ್ಧ ಎಡಪಂಥೀಯರ ಸೈಬರ್‌ ದಾಳಿ!

By Santosh NaikFirst Published Jan 16, 2024, 1:10 PM IST
Highlights

ತಮ್ಮ ಹಾಡುಗಳ ಮೂಲಕವೇ ದಕ್ಷಿಣ ಭಾರತದ ಸಂಗೀತ ರಸಿಕರ ಮನಗೆದ್ದಿರುವ ಕೆಎಸ್‌ ಚಿತ್ರಾ ವಿರುದ್ಧ ಕೇರಳದ ಲೆಫ್ಟಿಸ್ಟ್‌ಗಳು ಹಾಗೂ ಕಮ್ಯುನಿಸ್ಟ್‌ಗಳು ಮುಗಿಬಿದ್ದಿದ್ದಾರೆ. ಅದಕ್ಕೆ ಕಾರಣ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕುರಿತಾಗಿ ಅವರು ಪೋಸ್ಟ್‌ ಮಾಡಿರುವ ಒಂದು ವಿಡಿಯೋ.
 

ಬೆಂಗಳೂರು (ಜ.16): ಬಹುಶಃ ಕೆಎಸ್‌ ಚಿತ್ರಾ ಎನ್ನುವ ಹೆಸರು ಹೇಳಿದಾಕ್ಷಣ ಕನ್ನಡಿಗರಿಗೆ ನೆನಪಾಗುವುದು ಅವರು ಹಾಡಿರುವ ಮಧುರ ಗೀತೆಗಳು. ವಿವಿಧ ಭಾರತೀಯ ಭಾಷೆಗಳಲ್ಲಿ 25 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಕೆಎಸ್‌ ಚಿತ್ರಾ ಈಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಅದಕ್ಕೆ ಕಾರಣ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌. ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಭಕ್ತರು ರಾಮ ಮಂತ್ರವನ್ನು ಪಠಿಸುವುದು ಮಾತ್ರವಲ್ಲ, ತಮ್ಮ ತಮ್ಮ ಮನೆಗಳಲ್ಲಿ ಐದು ದೀಪಗಳನ್ನು ಬೆಳಗಿಸಿ ಇದನ್ನು ಸಂಭ್ರಮಿಸಬೇಕು ಎಂದು ಮನವಿ ಮಾಡಿ ವಿಡಿಯೋ ಪೋಸ್ಟ್‌ ಮಾಡಿದ್ದರು. ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದೇ ತಡ ಎಡಪಂಥೀಯರು ಹಾಗೂ ಕಮ್ಯುನಿಸ್ಟ್‌ಗಳೇ ಹೆಚ್ಚಿರುವ ಕೇರಳದಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 'ಅಲ್ಲಿರುವ ಮಸೀದಿಯನ್ನು ಕೆಡವಿ ದೇವಸ್ಥಾನ ಕಟ್ಟಿದ್ದಾರೆ ಎನ್ನುವುದನ್ನು ಕೆಎಸ್‌ ಚಿತ್ರಾ ಅರ್ಥ ಮಾಡಿಕೊಳ್ಳಬೇಕು' ಎಂದು ಅವರಿಗೆ ತಿಳಿಸಿದ್ದಾರೆ. ತಮ್ಮ ವಿಡಿಯೋಗೆ ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ಚಿತ್ರಾ ಅವರು ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಿಂದ ಆ ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ.

ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮವನ್ನು ದೇಶದ ಜನರು ಆಚರಿಸಬೇಕು ಎಂದು ಸೋಮವಾರ ತಮ್ಮ ವಿಡಿಯೋವನ್ನು ಪೋಸ್ಟ್‌ ಮಾಡಿದ್ದರು. ಇದಕ್ಕೂ ಮುನ್ನ ಪೋಸ್ಟ್‌ ಮಾಡಿದ ವಿಡಿಯೋದಲ್ಲಿ ಅವರು ಅಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆ ಪಡೆದಿದ್ದನ್ನು ತಿಳಿಸಿದ್ದರು. ಕೆಎಸ್‌ ಚಿತ್ರಾ ವಿರುದ್ಧ ಲೆಫ್ಟಿಸ್ಟ್‌ ಹಾಗೂ ಕಮ್ಯುನಿಸ್ಟ್‌ ಬ್ರಿಗೇಡ್‌ ದಾಳಿ ಮಾಡಿದ ಬೆನ್ನಲ್ಲಿಯೇ 45 ವರ್ಷ ಸಂಗೀತ ಕ್ಷೇತ್ರದಲ್ಲೇ ಕಳೆದಿರುವ ದಿಗ್ಗಜ ಗಾಯಕಿಗೆ ಸಾಕಷ್ಟು ಮಂದಿ ಬೆಂಬಲವಾಗಿ ನಿಂತಿದ್ದಾರೆ.

ಬರಹಗಾರ್ತಿ ಇಂದು ಮೆನನ್‌, ಕೆಎಸ್‌ ಚಿತ್ರಾ ಅವರನ್ನು ಟೀಕಿಸಿದ್ದು, ಮಸೀದಿಯನ್ನು ಕೆಡವಿ ದೇವಾಲಯ ಕಟ್ಟಿದ್ದರು ಪರಸ್ಪರ ದ್ವೇಷದ ಸಂಕೇತವಾಗಿದೆ. ಅಲ್ಲಿ ದೇವಸ್ಥಾನವಿತ್ತು ಎಎಂದು ನೀವು ವಾದ ಮಾಡಬಹುದು. ಚಿತ್ರಾ ಅವರಿಗೆ ವಾಕ್‌ ಸ್ವಾತಂತ್ರ್ಯವಿಲ್ಲವೇ ಎಂದು ಕೇಳಬಹುದು. ಆದರೆ, ನನ್ನ ಅಭಿಪ್ರಾಯದ ಪ್ರಕಾರ, ಇದನ್ನು ರಾಜಕೀಯಗೊಳಿಸುತ್ತಿರುವುದು ಏಕೆ? ಸಾಕಷ್ಟು ಅಮಾಯಕರ ಸಾವಿಗೆ ಕಾರಣವಾದ ನರಮೇಧವನ್ನು ನೀವು ವೈಭವೀಕರಿಸುತ್ತಿರುವುದೇಕೆ. ಇಂಥ ಸ್ಥಳದಲ್ಲಿ ರಾಮ ನಾಮವನ್ನು ಎಷ್ಟು ಹೇಳಿದರೂ ರಾಮ ಮತ್ತು ವಿಷ್ಣುವು ಬರುವುದಿಲ್ಲ, ನೀವು ಐದು ಅಥವಾ ಲಕ್ಷ ದೀಪಗಳನ್ನು ಬೆಳಗಿಸಿದರೂ ಯಾವುದೇ ಬೆಳಕು ನಿಮ್ಮ ಮನಸ್ಸನ್ನು ತುಂಬುವುದಿಲ್ಲ. ಅದು ಕೋಯಿಲ್‌ (ನೈಟಿಂಗೇಲ್) ಎಂದು ಜಗತ್ತು ನಂಬಿತ್ತು, ಆದರೆ ನೀವು ನಿಜವಾಗಿಯೂ ನಕಲಿ ನೈಟಿಂಗೇಲ್ ಎಂದು ಸಾಬೀತಾಗಿದೆ ಎಂದು ಬರೆದಿದ್ದಾರೆ. ಗಾಯಕ ಸೂರಜ್‌ ಸಂತೋಷ್‌ ಕೂಡ ಕೆಎಸ್‌ ಚಿತ್ರಾ ಅವರ ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿ ಇನ್ಸ್‌ಟಾಗ್ರಾಮ್‌ ಪೋಸ್ಟ್‌ ಮಾಡಿದ್ದಾರೆ.

'ಮಸೀದಿಯನ್ನು ಕೆಡವಿ ದೇವಸ್ಥಾನವನ್ನು ಕಟ್ಟಿದ್ದಾರೆ ಎನ್ನುವುದು ಈಕೆ ಮರೆತಿದ್ದಾರೆ ಎಂದು ಕಾಣುತ್ತದೆ. ಒಂದರ ಹಿಂದೆ ಒಂದರಂತೆ ನಮ್ಮ ಐಕಾನ್‌ಗಳು ಬ್ರೇಕ್‌ಡೌನ್‌ ಆಗುತ್ತಿದ್ದಾರೆ. ತಮ್ಮ ನಿಜಬಣ್ಣವನ್ನು ತೋರಲು ಇನ್ನಷ್ಟು ಚಿತ್ರಾ ಅವರು ಕಾದಿದ್ದಾರೆ ಎನ್ನುವುದನ್ನು ನೋಡಬೇಕು? ಎಂದು ಬರೆದುಕೊಂಡಿದ್ದಾರೆ.

ಇನ್ನು ಚಿತ್ರಾ ಅವರ ಬೆಂಬಲಕ್ಕೆ ನಿಂತಿರುವ ಗಾಯಕ ಜಿ ವೇಣುಗೋಪಾಲ್‌, ಚಿತ್ರಾ ಇದುವರೆಗೆ ಯಾವುದೇ ವಿವಾದಗಳಲ್ಲಿ ಭಾಗಿಯಾಗಿಲ್ಲ. ಅವರನ್ನು ಅವಮಾನಿಸುವ ಮತ್ತು ಬೇರೆ ಎಂದು ನೋಡುವ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಬಗ್ಗೆ ನನಗೆ ಬೇಸರವಿದೆ ಎಂದು ವೇಣುಗೋಪಾಲ್‌ ಬರೆದಿದ್ದಾರೆ. ಆಕೆ ಯಾವುದೇ ರಾಜಕೀಯ ಹೇಳಿಕೆ ನೀಡಿಲ್ಲ. ಕಳೆದ 44 ವರ್ಷಗಳಿಂದ ಕೇವಲ ಹಾಡುಗಳನ್ನು ಮಾತ್ರವೇ ಹಾಗಿದ್ದಾರೆ. ಅಯೋಧ್ಯೆ ವಿಚಾರದಲ್ಲಿ ಆಕೆಗೆ ದೇವಸ್ಥಾನದ ಬಗ್ಗೆ ಭಕ್ತಿ ಮಾತ್ರವೇ ಇದೆ ಎಂದು ಅವರು ಬರೆದಿದ್ದಾರೆ.

ಅವರ ಮಾತನ್ನು ನಾವು ಒಪ್ಪದೇ ಇರಬಹುದು, ಆದರೆ, ಅವರನ್ನು ಯಾಕೆ ನಾವು ಕ್ಷಮಿಸಬಾರದು? ಸಂಜೆ ರಾಮ ಜಪವನ್ನು ಪಠಿಸಲು, ಪ್ರತಿ ಭಾನುವಾರ ಚರ್ಚ್‌ಗೆ ಹೋಗಿ ಎನ್ನಲು, ದಿನಕ್ಕೆ ಐದು ಬಾರಿ ಪಾರ್ಥನೆ ಮಾಡಲು ಹೇಳದೇ ಇರುವ ಯಾವ ಕ್ರಾಂತಿಕಾರಿಯ ಮನೆಗಳೂ ನಮ್ಮಲ್ಲಿ ಇಲ್ಲ. ನೀವು ಅವರ ಜೊತೆ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ಸಂಗೀತ ಲೋಕದಲ್ಲಿ ಅವರಿಗೆ ದೊಡ್ಡ ಸ್ಥಾನವಿದೆ. ನನ್ನ ಒಂದೇ ವಿನಂತಿ ಏನೆಂದರೆ, ನೀವು ಆಕೆಯನ್ನು ಯಾವುದೇ ಕಾರಣಕ್ಕೂ ನೋಯಿಸಬಾರದು ಎಂದು ಬರೆದಿದ್ದಾರೆ.

ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವುದೆ? ನಟಿ ಶೋಭನಾರನ್ನು ರುಬ್ಬುತ್ತಿರೋ ನೆಟ್ಟಿಗರು!

ಎರಡು ವಾರಗಳ ಹಿಂದೆ ತ್ರಿಶೂರ್‌ಗಳ ಮಹಿಳಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಟಿ ಹಾಗೂ ಡಾನ್ಸರ್‌ ಶೋಭನಾ ವೇದಿಕೆ ಹಂಚಿಕೊಂಡಿದ್ದರು. ಇದಕ್ಕಾಗಿ ಅವರ ಮೇಲೆ ಸೈಬರ್‌ ದಾಳಿ ನಡೆಸಲಾಗಿತ್ತು.  ಆದರೆ, ಕಳೆದ ವರ್ಷ ನವೆಂಬರ್‌ನಲ್ಲಿ ತಿರುವನಂತಪುರಂನಲ್ಲಿ ನಡೆದ ರಾಜ್ಯ ಸರ್ಕಾರದ ಕೇರಳೀಯಂ ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಅವರು ಅಂತಹ ಯಾವುದೇ ಟೀಕೆಗಳನ್ನು ಎದುರಿಸಿರಲಿಲ್ಲ.

ನಟಿ ಶೋಭನಾ ಮನೆಯಲ್ಲಿ ಕಳ್ಳತನ: ಕಳ್ಳಿ ಸಿಕ್ಕಿಬಿದ್ರೂ ಕ್ಷಮಿಸಿ ದೂರು ವಾಪಾಸ್ ಪಡೆದಿದ್ದೇಕೆ ನಟಿ?

ಶೋಭನಾ ದಾಳಿ ತೀವ್ರವಾಗುತ್ತಿದ್ದಂತೆ, ಕಲಾವಿದರು ಕೇರಳದ ಸಂಪತ್ತು ಎಂದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್,  “ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕದ ಗಣ್ಯರು ಪ್ರಧಾನಮಂತ್ರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಹಜ. ಶೋಭನಾ ಅವರನ್ನು ಬಿಜೆಪಿಗೆ ಸಂಬಂಧಿಸಿದ ಕಲಾವಿದೆ ಎಂದು ಬಿಂಬಿಸಲು ನಾವು ಬಯಸುವುದಿಲ್ಲ' ಎಂದು ಹೇಳಿದ್ದಾರೆ.

click me!