ಕಾವೇರಿ ಕೂಗು ಅಭಿಯಾನ: 11 ಕೋಟಿ ಸಸಿಗಳ ನೆಡುವಿಕೆ ಸಂಪನ್ನ

By Kannadaprabha News  |  First Published Apr 25, 2024, 1:32 PM IST

50 ಸಾವಿರ ಎಕರೆ ಪ್ರದೇಶದ ಸುಮಾರು 65 ಸಾವಿರ ರೈತರು ಮತ್ತು ಸಾರ್ವಜನಿಕರ ಸಹಯೋಗದಲ್ಲಿ 2.09 ಕೋಟಿ ಸಸಿಗಳನ್ನು ಕಳೆದ ಸಾಲಿನಲ್ಲಿ ನೆಡಲಾಗಿದೆ: ಈಶ ಫೌಂಡೇಶನ್ 


ಚೆನ್ನೈ(ಏ.25): ಕಾವೇರಿ ಕೂಗು ಅಭಿಯಾನದಲ್ಲಿ 2023-24ನೇ ಸಾಲಿನಲ್ಲಿ ಕಾವೇರಿ ಕೊಳ್ಳದ 10.9 ಕೋಟಿ ಸಸಿಗಳನ್ನು ನೆಡುವ ಮೂಲಕ 2.13 ಲಕ್ಷ ರೈತರಿಗೆ ನೆರವಾಗಿದ್ದೇವೆ ಎಂದ ಸದ್ಗುರು ಅವರ ಈಶ ಫೌಂಡೇಶನ್ ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಈಶ, '50 ಸಾವಿರ ಎಕರೆ ಪ್ರದೇಶದ ಸುಮಾರು 65 ಸಾವಿರ ರೈತರು ಮತ್ತು ಸಾರ್ವಜನಿಕರ ಸಹಯೋಗದಲ್ಲಿ 2.09 ಕೋಟಿ ಸಸಿಗಳನ್ನು ಕಳೆದ ಸಾಲಿನಲ್ಲಿ ನೆಡಲಾಗಿದೆ' ಎಂದು ಮಾಹಿತಿ ನೀಡಿದೆ.

Tap to resize

Latest Videos

Cauvery Calling ಮರ ಆಧಾರಿತ ಕೃಷಿ ಅಳವಡಿಸಿದ 1.25 ಲಕ್ಷ ರೈತರು, ನಳನಳಿಸುತ್ತಿದೆ 2.1 ಕೋಟಿ ಗಿಡ!

ಕಾವೇರಿ ಕೂಗು ಅಭಿಯಾನವು ಕಾವೇರಿ ನದಿ ನೀರಿನ ಹರಿವನ್ನು ಹೆಚ್ಚಿಸಲು ಅದರ ಇಕ್ಕೆ ತೀರಗಳಲ್ಲಿ 242 ಕೋಟಿ ಮರಗಳನ್ನು ನೆಡುವ ಗುರಿ ಹಾಕಿಕೊಂಡಿದೆ.

click me!